ವಿಜಯಪುರ: ಪತಿ ಕೊನೆಯುಸಿರೆಳೆದ ಕೆಲವೇ ಕ್ಷಣದಲ್ಲಿ ಪತ್ನಿಯೂ ಸಾವಿಗೀಡಾಗಿದ್ದು, ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ಜರುಗಿದೆ.
ಜಿಲ್ಲೆಯ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಶತಾಯುಷಿ ದೇವೇಂದ್ರ ಶ್ಯಾಮರಾಯ ವಳಸಂಗ್ (105) ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದರು. ಪತಿ ಸಾವಿನಿಂದ ಆಘಾತಕ್ಕೆ ಒಳಗಾಗಿ ಪತ್ನಿ ದುಂಡವ್ವ (87) ಸಹ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:6 ಕೋಟಿ ಮೌಲ್ಯದ ಚಿನ್ನ ದರೋಡೆ: ಆರೋಪಿಗಳ ಪತ್ತೆಗೆ ನೆರವಾದ 100 ರೂ. ಪೇಟಿಎಂ ಪಾವತಿ
ಒಂದೇ ದಿನ ಮನೆಯ ಇಬ್ಬರು ಹಿರಿಯ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ದುಃಖ ಮನೆ ಮಾಡಿದೆ.
ಪತಿ-ಪತ್ನಿ ಇಬ್ಬರೂ ಒಂದೇ ದಿನ ಮೃತಪಟ್ಟಿದ್ದಕ್ಕೆ ಗ್ರಾಮಸ್ಥರಿಂದಲೂ ಸಂತಾಪ ವ್ಯಕ್ತವಾಗಿದೆ. ಶನಿವಾರವೇ ಮಲಕನದೇವರಹಟ್ಟಿ ಗ್ರಾಮದಲ್ಲಿ ಮೃತ ಹಿರಿಯ ದಂಪತಿ ಜೋಡಿಯ ಅಂತ್ಯಕ್ರಿಯೆ ನಡೆಯಲಿದೆ.