Advertisement

ಮತದಾರರ ಪಟ್ಟಿ ಪರಿಶೀಲನೆ ಶುರು: ಗೋಠೆ

03:06 PM Sep 13, 2019 | Team Udayavani |

ವಿಜಯಪುರ: ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳ ಕುರಿತಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಇದಕ್ಕಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಸಂಘ (ಇಲೆಕ್ಟೊರಲ್ ಲಿಟರಸಿ ಕ್ಲಬ್‌) ಗಳನ್ನು ರಚಿಸುವಂತೆ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಸ್ವೀಪ್‌ ಕಾರ್ಯಕ್ರಮದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಜಾಗೃತಿ ಸಂಘಗಳನ್ನು ಸ್ಥಾಪಿಸಬೇಕು. ಜಿಲ್ಲೆಯ ಪ್ರತಿ ಶಾಲಾ-ಕಾಲೇಜುಗಳಲ್ಲಿ ಕೂಡಲೇ ಮತದಾರರ ಸಾಕ್ಷರತಾ ಸಂಘಗಳನ್ನು ರಚಿಸಬೇಕು. ಜೊತೆಗೆ ಆಯಾ ಶಾಲಾ-ಕಾಲೇಜ್‌ಗಳ ವ್ಯಾಪ್ತಿಯಲ್ಲಿ ಜಾಥಾ ಕಾರ್ಯಕ್ರಮಗಳ ಹಮ್ಮಿಕೊಳ್ಳುವಂತೆ ಸೂಚಿಸಿದರು.

ಅ.15 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ, ಭಾವಚಿತ್ರ, ಜನ್ಮದಿನಾಂಕ ಪರಿಶೀಲನೆ, ನೂತನ ಯುವ ಮತದಾರರು ಹಾಗೂ ವಿಕಲಚೇತನ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಜಿಲ್ಲಾದ್ಯಂತ ಮತದಾರರ ಪರಿಶೀಲನಾ ಕಾರ್ಯಕ್ರಮ ಆರಂಭಗೊಂಡಿದ್ದು, ಅ.15 ರವರೆಗೆ ಪರಿಶೀಲನೆ ನಡೆಯಲಿದೆ. ಮತದಾರರು 1950ಗೆ ಉಚಿತ ಕರೆ ಮಾಡುವ ಜೊತೆಗೆ ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳಲ್ಲೊಂದು ದಾಖಲೆ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹದು. ಇದಲ್ಲದೇ ಬಾಪೂಜಿ ಸೇವಾ ಕೇಂದ್ರ, ಅದರಂತೆ ಅಟಲಜೀ ಜನಸ್ನೇಹಿ ಕೇಂದ್ರಗಳಲ್ಲಿಯೂ ಭೇಟಿ ನೀಡಿ ನಿಮ್ಮ ಹೆಸರು ಪರಿಶೀಲನೆಗೆ ಅವಕಾಶವಿದೆ. ಇದಲ್ಲದೇ ಮನೆ-ಮನೆಗೆ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮವು ಸಹ ನಡೆಯುತ್ತಿದ್ದು, ಬಿಎಲ್ಒಗಳು ಭೇಟಿ ನೀಡಿದ ಸಂದರ್ಭದಲ್ಲಿ ಅವಶ್ಯಕ ಮಾಹಿತಿ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಮತದಾರರ ಚೀಟಿಯಲ್ಲಿ ಭಾವಚಿತ್ರ ಹಳೆಯದಾಗಿದ್ದರೂ ಕೂಡ ಬದಲಾಯಿಸುವ ಕುರಿತಂತೆ, ಮತದಾರರ ಸೌಲಭ್ಯ ಕೇಂದ್ರಗಳು, ಪೋರ್ಟಲ್ಗೆ ಭೇಟಿ ನೀಡುವ ವಿಧಾನ, ಮತದಾರರ ಪಟ್ಟಿ ಪರಿಶೀಲನೆ, ಸಹಾಯವಾಣಿ, ಮೊಬೈಲ್ ಆಪ್‌, ಎನ್‌ವಿಎಸ್‌ಪಿ ಪೋರ್ಟಲ್ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಪಿಕ್‌ ಸಂಖ್ಯೆಯೊಂದಿಗೆ ಲಾಗಿನ್‌ ಆಗುವ ಬಗ್ಗೆ www.nvsp.in ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಘೋಷಣಾ ವಾಕ್ಯ ಸಿದ್ಧಪಡಿಸಿಕೊಂಡು ಸೆ.13ರಂದು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.

Advertisement

ಜಿಲ್ಲೆಯ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮತದಾರರ ಸಾಕ್ಷರತಾ ಸಂಘಗಳನ್ನು ರಚಿಸಿಕೊಳ್ಳಬೇಕು. ಪ್ರೌಢಶಾಲೆ 9ನೇ ತರಗತಿ ಹಾಗೂ ಮೇಲ್ಪಟ್ಟ ಎಲ್ಲ ಹಂತದ ವಿದ್ಯಾರ್ಥಿಗಳನ್ನು ಆಯಾ ಇಎಲ್ಸಿ ಕೇಂದ್ರಗಳ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಉತ್ತಮ ಲೇಖನಗಳ ಮೂಲಕ ಸೂಕ್ತ ಜಾಗೃತಿ ಮೂಡಿಸಲು ಡಯಟ್ ಪ್ರಾಂಶುಪಾಲರು ಹಾಗೂ ಪದವಿ ಕಾಲೇಜ್‌ ಪ್ರಾಂಶುಪಾಲರು ಪ್ರತಿ ತಿಂಗಳು 5ರೊಳಗೆ ವರದಿ ಸಲ್ಲಿಸಬೇಕು. 18 ವರ್ಷ ಮೇಲ್ಮಟ್ಟ ಯುವಕರ ಹೆಸರನ್ನು ಮತದಾರರ ಪಟ್ಟಿ ರೂಪಿಸುವಂತೆ ಸೂಚಿಸಿದರು.

ಸಿ.ಬಿ. ಕುಂಬಾರ ಸ್ವಾಗತಿಸಿದರು. ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next