Advertisement

ಜಾತಿ ಮೀರಿ ವಿಕಲಚೇತನೆಯ ಕೈಹಿಡಿದ ಆಟೋ ಚಾಲಕ

02:46 PM Aug 14, 2020 | Suhan S |

ವಿಜಯಪುರ: ನಗರದಲ್ಲಿ ಆಟೋ ಓಡಿಸಿಕೊಂಡಿರುವ ಯುವಕನೊಬ್ಬ ಕುಟುಂಬದವರ ಸಮ್ಮತಿಯೊಂದಿಗೆ ಅನ್ಯ ಸಮುದಾಯಕ್ಕೆ ಸೇರಿದ ಅಂಗವಿಕಲೆಯನ್ನು ಕೈ ಹಿಡಿದಿದ್ದಾನೆ. ಆ ಮೂಲಕ ಜಾತಿ, ದೈಹಿಕ ನ್ಯೂನ್ಯತೆಯನ್ನು ಮೀರಿ ಹೊಸ ಬಾಳಿಗೆ ಕಾಲಿಟ್ಟು ಸಮಾಜಕ್ಕೆ ಗುಣಾತ್ಮಕ ಹೊಸ ಸಂದೇಶ ನೀಡುವ ಆದರ್ಶ ಮೆರೆದಿದ್ದಾನೆ.

Advertisement

ನಗದ ಸಿಂದಗಿ ರಸ್ತೆಯಲ್ಲಿರುವ ಔದುಂಬರವಾಸಿ ಶ್ರೀದತ್ತ ಮಂದಿರದಲ್ಲಿ ಜರುಗಿದ ಈ ಅಪರೂಪದ ಮದುವೆಗೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತಕ್ಕೀಡಾದ ಸಂಘದ ಪ್ರಮುಖರು. ನಗರದ ಜಾಗೃತಿ ಕಾಲೋನಿ ಅಂಕಲೀಕರ ಲೇಔಟ್‌ ನಿವಾಸಿ ಆಟೋ ಚಾಲಕನಾಗಿರುವ ದೈಹಿಕ ಯಾವುದೇ ನ್ಯೂನ್ಯತೆ ಇಲ್ಲದ 34 ವರ್ಷದ ಹನುಮಂತ ಪಾಂಡುರಂಗ ಮಿಸ್ಕೀನ್‌ (ಸಾವಜಿ) ಎಂಬ ಯುವಕ ಹಾಗೂ ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದ 28 ವರ್ಷದ ಅಂಗವಿಕಲೆ ಶಾಂತಮ್ಮ ಮಹಾದೇವಪ್ಪ ಭಜಂತ್ರಿ ಇವರೇ ನವಜೀವಕ್ಕೆ ಕಾಲಿಟ್ಟ ಅಪರೂಪದ ಜೋಡಿ. ಸರಳ ಸಮಾರಂಭದಲ್ಲಿ ಜಾತಿಯ ಹಂಗಿಲ್ಲದ, ದೈಹಿಕ ನ್ಯೂನ್ಯತೆಯ ಕೊರಗಿಲ್ಲದೇ ಇಬ್ಬರು ಹೊಸಬಾಳಿಗೆ ಸಪ್ತಪದಿ ತುಳಿದಿದ್ದಾರೆ.

ಯುವಕ ಹನುಮಂತನ ತಂದೆ ಪಾಂಡುರಂಗ, ಅಂಗವಿಕಲೆಯ ತಂದೆ ಮಹಾದೇವಪ್ಪ, ತಾಯಿ ಶಂಕ್ರಮ್ಮ ಹಾಗೂ ಎರಡೂ ಕುಟುಂಬಗಳ ಸದಸ್ಯರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು. ಅಂಗವಿಕಲರ ಸಂಘದ ಭೀಮನಗೌಡ ಪಾಟೀಲ (ಸಾಸನೂರ), ನಿಮಿಶ್‌ ಆಚಾರ್ಯ, ಸುರೇಶ ಚವ್ಹಾಣ, ಪರಶುರಾಮ ಗುನ್ನಾಪುರ, ಪರಶುರಾಮ ಗಾಯಕವಾಡ , ಸಂತೋಷ ಬೊಮ್ಮನಳ್ಳಿ, ಮಹೇಶ ಮುಧೋಳ ನಾಮದೇವ ಇಲಕಲ್‌ ಇತರರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next