Advertisement

Vijayapura: ಹೋರಿ ಇರಿತದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಚಿವ ಪಾಟೀಲ್

08:42 PM Jun 11, 2023 | Vishnudas Patil |

ವಿಜಯಪುರ: ಬೃಹತ್-ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆಯೊಂದಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಹೊಂದಿರುವ ಸಚಿವ ಎಂ.ಬಿ. ಪಾಟೀಲ ಅವರು ಭಾನುವಾರ ಸರ್ಕಾರಿ ಜಿಲ್ಲಾ ಸ್ಪತ್ರೆಗೆ ಭೇಟಿ ನೀಡಿ, ಕಾಖಂಡಕಿ ಕರಿ ಹಬ್ಬದಲ್ಲಿ ಹೋರಿ ಇರಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

Advertisement

ಶನಿವಾರ ಕಾಖಂಡಕಿ ಗ್ರಾಮದಲ್ಲಿ ನಡೆದ ಕಾರ ಹುಣ್ಣಿಮೆ ಕರಿ ಹರಿಯುವ ಹಬ್ಬದಲ್ಲಿ ಹೋರಿಗಳ ಇರಿತದಿಂದ ಏಳು ಜನ ಗಾಯಗೊಂಡು, ಜಿಲ್ಲಾ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಸಚಿವ ಎಂ.ಬಿ.ಪಾಟೀಲ, ಶಕ್ತಿ ಯೋಜನೆಗೆ ಚಾಲನೆ ನೀಡುತ್ತಲೇ, ಜಿಲ್ಲಾ ಆಸ್ಪತ್ರೆಗೆ ತೆರಳಿ ಕಾಖಂಡಕಿ ಹೋರಿ ಇರಿತದ ಗಾಯಾಳುಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಬೇಗ ಗುಣಮುಖರಾಗಿ ಎಂದು ಹಾರೈಸಿದ ಸಚಿವರು, ಗಾಯಾಳುಗಳಿಗೆ ಅಗತ್ಯವಾಗಿರುವ ಎಲ್ಲ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.ಆಸ್ಪತ್ರೆಯ ವೈದ್ಯರು, ಕಾಖಂಡಕಿ ಘಟನೆಯಲ್ಲಿ ಏಳು ಜನ ಗಾಯಗೊಂಡಿದ್ದು, ಓರ್ವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಆರು ಜನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಸಚಿವ ಎಂ.ಬಿ.ಪಾಟೀಲ ಅವರಿಗೆ ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ. ಪಂ. ಸಿಇಓ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ಸಿಎಂಓ ಡಾ. ಸುರೇಶ ಚವ್ಹಾಣ, ಪ್ರಚಾರ ಐಎಂಓ ಡಾ. ಎ.ಜಿ. ಬಿರಾದಾರ, ಡಾ.ಧರ್ಮರಾಯ ಇಂಗಳೆ, ಡಾ. ಹಾವಿನಾಳ, ಡಾ.ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next