Advertisement

ವಿಜಯಪುರ-ಮಂಗಳೂರು ರೈಲಿಗೆ ಚಾಲನೆ

09:53 AM Nov 12, 2019 | sudhir |

ವಿಜಯಪುರ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿ ಭಾಗಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೋದಿ ಸರಕಾರ ವಿಜಯಪುರ – ಮಂಗಳೂರು ರೈಲು ಸೇವಾ ಸೌಲಭ್ಯ ಕಲ್ಪಿಸಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಸೋಮವಾರ ಸಂಜೆ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ವಿಜಯಪುರ – ಮಂಗಳೂರು ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈಲ್ವೇ ಸಚಿವರಾಗಿರುವ ಸುರೇಶ ಅಂಗಡಿ ಅವರು ನನ್ನ ಮನವಿಗೆ ಸ್ಪಂದಿಸುವ ಮೂಲಕ ಈ ಭಾಗದ ಜನರ ಬಹು ವರ್ಷಗಳ ಕನಸು ನನಸಾಗಿದ್ದಾರೆ. ನಿತ್ಯವೂ ಸಂಜೆ ೬ ಗಂಟೆಗೆ ಹೊರಡುವ ಈ ರೈಲು ಮರುದಿನ ‌ಮಧ್ಯಾಹ್ನ 12 ಗಂಟೆಗೆ ಮಂಗಳೂರು ತಲುಪಲಿದೆ. ರಾಜ್ಯದ ಜನರಿಗೆ ಈ ರೈಲು ಸೇವೆಯ ಸೌಲಭ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಸುರೇಶ ಅಂಗಡಿ ಅವರಿಗೆ ನಮ್ಮ ಭಾಗದ ಜನರು ಸದಾ ಕೃತಜ್ಞರಾಗಿರುತ್ತೇವೆ ಎಂದರು.

ಇದಲ್ಲದೇ ವಿಜಯಪುರ ನಗರದಿಂದ ದೇಶದ ರಾಜಧಾನಿ ನವದೆಹಲಿ, ತಿರುಪತಿ ಕ್ಷೇತ್ರಕ್ಕೆ ನೂತನವಾಗಿ ರೈಲು ಓಡಿಸುವ ಕುರಿತು ಮನವಿ ಮಾಡಿದ್ದು, ಸೂಕ್ತ ಸ್ಪಂದನೆ ನೀಡಿದ್ದಾರೆ ಎಂದರು.

ರೈಲ್ವೇ ಸಲಹಾ ಸಮಿತಿ ಸದಸ್ಯ ಮಳಗೌಡ ಪಾಟೀಲ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ,ಪ್ರಧಾನ ಕಾರ್ಯದರ್ಶಿ ರವಿಕಾಂತ ಬಗಲಿ, ರೈಲ್ವೇ ಹೋರಾಟ ಸಮಿತಿಯ ಸತೀಶ ಭಾವಿ, ರೈಲ್ವೇ ಅಧಿಕಾರಿ ನಾಯಕ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next