Advertisement

ಯತ್ನಾಳಗೆ ಅನ್ಯ ಜಿಲ್ಲೆ ಹೊಣೆ-ಜಿಗಜಿಣಗಿ ನಿಟ್ಟುಸಿರು

11:14 AM Apr 18, 2019 | Naveen |

ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಪಾಲಿಗೆ ಸ್ವಪಕ್ಷದಲ್ಲಿದ್ದರೂ ಕಠೊರ ಟàಕೆಗಳ ಮೂಲಕ ವಿಪಕ್ಷದ ನಾಯಕರಂತೆ ಕಾಡುತ್ತಿದ್ದ ಕೇಂದ್ರದ ಮಾಜಿ ಮಂತ್ರಿ-ಬಿಜೆಪಿ ನಗರ ಶಾಸಕ ಯತ್ನಾಳ ಉಪಟಳದಿಂದ ಕೊನೆಗೂ ಮುಕ್ತಿ ದೊರಕಿದೆ. ಜಿಗಜಿಣಗಿ ಪರ ಪ್ರಚಾರ ಮಾಡಲಾರೆ ಎಂದು ಪಟ್ಟು ಹಿಡಿದಿದ್ದ ಯತ್ನಾಳ ಅವರನ್ನು ಅನ್ಯ ಜಿಲ್ಲೆಗಳ ಪ್ರಚಾರ ಕಾರ್ಯಕ್ಕೆ ನಿಯೋಜಿಸುವ ಮೂಲಕ ಪಕ್ಷದಲ್ಲಿ ಉಂಟಾಗಿದ್ದ ಬೇಗುದಿ
ಶಮನಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.

Advertisement

ಆದರೆ ಯತ್ನಾಳ ಅವರು ಜಿಲ್ಲೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡದ ಕಾರಣ ಜಿಗಜಿಣಗಿ ಅವರ ಚುನಾವಣಾ ಫ‌ಲಿತಾಂಶದ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣೆ ಘೋಷಣೆಗೆ ಮುನ್ನವೇ ಶಾಸಕ ಯತ್ನಾಳ ಅವರು ಸ್ವಪಕ್ಷೀಯರಾದ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಜಿಲ್ಲೆ ನೀಡಿದ ಕೊಡುಗೆ ಏನು? ದಲಿತ ಸಮುದಾಯದ ಮೀಸಲು ಸೌಲಭ್ಯ ಪಡೆದು ಅಧಿಕಾರ ಪಡೆಯುತ್ತಿದ್ದರೂ ದಲಿತ ಸಮುದಾಯದ ಆಭ್ಯುದಯಕ್ಕೆ ಮಾಡಿದ ಕೆಲಸಗಳೇನು ಎಂದು
ಬಹಿರಂಗ ಪ್ರಶ್ನೆ ಎಸೆಯಲು ಆರಂಭಿಸಿದ್ದರು. ಇದು ಸಾಲದು
ಎಂಬಂತೆ ಯತ್ನಾಳ ಬೆಂಬಲಿಗರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌,
ಟ್ವೀಟರ್‌ನಂತ ಸಾಮಾಜಿಕ ಜಾಲತಾಣಗಳ ಮೂಲಕ ಸಂಸದರಿಗೆ ದಿನಕ್ಕೊಂದು ಪ್ರಶ್ನೆ ಎಂದು ಜಿಗಜಿಣಗಿ ವಿರೋಧಿ ಅಭಿಯಾನದಿಂದ ಸಾರ್ವಜನಿಕರಲ್ಲಿ ಬಿಜೆಪಿಯಲ್ಲಿ ಎಲ್ಲವೂ ಸರಿ
ಇಲ್ಲ ಎಂಬ ಸಂದೇಶ ರವಾನಿಸಿದ್ದರು.

ಚುನಾವಣೆ ಘೋಷಣೆ ಬಳಿಕ ಜಿಗಜಿಣಗಿ ಅವರಿಗೆ ಟಿಕೆಟ್‌ ನೀಡದಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದರೂ ಜಿಗಜಿಣಗಿ ಅವರಿಗೆ ಟಿಕೆಟ್‌ ದಕ್ಕಿತ್ತು. ಇದರ ಮಧ್ಯೆ ನಾನು ಮೋದಿ ಬೆಂಬಲಿಗ, ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಆದರೆ ಕ್ಷೇತ್ರಕ್ಕೆ ಏನನ್ನೂ ಮಾಡದ ರಮೇಶ ಜಿಗಜಿಣಗಿ ಮಾತ್ರ ಆಯ್ಕೆ ಆಗಬಾರದು. ನಾನಂತೂ ಜಿಗಜಿಣಗಿ ಪರ ಪ್ರಚಾರ ಮಾಡಲಾರೆ ಎಂದು ವರಿಷ್ಠರಿಗೆ ಖಡಾ ಖಂಡಿತವಾಗಿ ಹೇಳಿದ್ದರು.

ಇದರ ಬೆನ್ನಲ್ಲೇ ಯತ್ನಾಳ ಅವರ ವರ್ತನೆ ಕುರಿತು ರಮೇಶ ಜಿಗಜಿಣಗಿ ಅವರು ಪಕ್ಷದ ನಾಯಕರಿಗೆ ದೂರು ನೀಡಿದ ನಂತರ ಇಬ್ಬರಿಗೂ ಪಕ್ಷ ಬುದ್ಧಿವಾದ ಹೇಳಿತ್ತು. ಇದಲ್ಲದೇ ಯತ್ನಾಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ
ನಕಾರಾತ್ಮಕ ಪ್ರಚಾರಕ್ಕೆ ಬ್ರೇಕ್‌ ಹಾಕುವಂತೆ ಸೂಚನೆ ನೀಡಿದ್ದರು. ನೀವು ಜಿಗಜಿಣಗಿ ಅವರಿಗೆ ಬೆಂಬಲ ನೀಡದಿದ್ದರೂ ಸರಿ, ಅವರ
ಪರ ಪ್ರಚಾರ ಮಾಡದಿದ್ದರೂ ನಕಾರಾತ್ಮಕ ಸಂದೇಶಗಳನ್ನು ರವಾನಿಸಿ ನೆಗೆಟಿವ್‌ ಪ್ರಚಾರ ಮಾಡಬೇಡಿ ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಬಸನಗೌಡ ಪಾಟೀಲ
ಯತ್ನಾಳ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಚುನಾವಣೆಯ ಯಾವ ವೇದಿಕೆ ಮೇಲೂ ಕಾಣಿಸಿಕೊಂಡಿಲ್ಲ.

Advertisement

ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲೇ
ಪ್ರಭಾವಿ ಪಂಚಮಸಾಲಿ ಸಮುದಾಯದ ನಾಯಕರಾಗಿರುವ
ಯತ್ನಾಳ ಅವರನ್ನು ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ
ಕಳಿಸಿದ್ದಾರೆ. ಪರಿಣಾಮ ಚುನಾವಣೆ ಘೋಷಣೆ ಅಗುತ್ತಲೇ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಪಂಚಮಸಾಲಿ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ದಾವಣೆಗೆರೆ, ಹಾವೇರಿ-ಗದಗ, ಚಿಕ್ಕೋಡಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳ ಪ್ರಚಾರಕ್ಕೆ ಕಳಿಸಿದ್ದಾರೆ. ಇದರಿಂದ ಬಿಜೆಪಿ ಆಭ್ಯರ್ಥಿ ರಮೇಶ ಜಿಗಜಿಣಗಿ
ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಇದಲ್ಲದೇ ಯತ್ನಾಳ ಅವರ ರಕ್ತ ಸಂಬಂಧಿಗಳು ಹಾಗೂ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದಲ್ಲೂ ಪ್ರಚಾರ ನಡೆಸುವಂತೆ
ಸೂಚನೆ ನೀಡಿದ್ದಾರೆ. ಹೀಗಾಗಿ ಯತ್ನಾಳ ತವರು ಜಿಲ್ಲೆಯನ್ನು ತೊರೆದು ಅನ್ಯ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಯತ್ನಾಳ ಅವರು ವಿಜಯಪುರ ಜಿಲ್ಲೆಯ ಹೊರಗೆ ಪ್ರಚಾರದಲ್ಲಿ ತೊಡಗಿದ್ದರೂ ಯತ್ನಾಳ ಅವರು ತವರು ಕ್ಷೇತ್ರದಲ್ಲಿ ಸ್ವಪಕ್ಷೀಯ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧದ ಸಿಟ್ಟು, ಸೆಡವು ಕಡಿಮೆ ಆಗಿಲ್ಲ. ಪರಿಣಾಮ ಯತ್ನಾಳ ಅವರು ಜಿಲ್ಲೆಯ ಆಚೆ ಇದ್ದರೂ ಜಿಲ್ಲೆಯಲ್ಲಿ ಪ್ರಬಲ ಪಂಚಮಸಾಲಿ ಸಮುದಾಯದ ಮತಗಳು
ಹಂಚಿ ಹೋಗಿ ಫ‌ಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ. ಆದರೆ ಚುನಾವಣೆ ಬಳಿಕ ಯತ್ನಾಳ ಪ್ರಭಾವ ಈ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಗಲಿದೆ.

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next