ವಿಜಯಪುರ : ಶನಿವಾರ ಜರುಗಿದ ಲೋಕ ಅದಾಲತ್ ನಲ್ಲಿ ವಿಜಯಪುರ ಜಿಲ್ಲೆಯಲ್ಲಿ 30.15 ಕೋಟಿ ರೂ. ಮೊತ್ತದ 10 ಸಾವಿರ ಪ್ರಕರಣಗಳು ಇತ್ಯರ್ಥವಾಗಿವೆ. ಈಚಿನ ವರ್ಷಗಳಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಇಷ್ಟೊಂದು ಮೊತ್ತದ ಪ್ರಕರಣ ಇತ್ಯರ್ಥ ಆಗಿರುವುದು ಇದೇ ಮೊದಲು.
ಜಿಲ್ಲೆಯ ವಿವಿಧ ನ್ಯಾಯಾಲಯ ಗಳಲ್ಲಿ ಲೋಕ್ ಅದಾಲತ್ ಮೂಲಕ ಬಗೆಹರಿಸಲು ಗುರುತಿಸಿದ್ದ 14,645 ಪ್ರಕರಣಗಳಲ್ಲಿ 10062 ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಲ್ಲಿ ಪ್ರಮುಖವಾಗಿ ವಾಹನ ಪ್ರಕರಣಗಳ 100, ಚಕ್ ಬೌನ್ಸ್ 126, ಮರಳು ಪ್ರಕರಣದ 16 ಹಾಗೂ ಪ್ರಮುಖವಾಗಿವೆ.
ಹಲವು ವರಗಷಗಳಿಂದ ಇತ್ಯರ್ಥ ಆಗದೇ ನ್ಯಾಯಾಲಯಕ್ಕೆ ಅಲೆಯುತ್ತಿದ್ದ ಆಸ್ತಿ ಪಾಲುದಾರಿಕೆ 123 ಪ್ರಕರಣ ಸುಖಾಂತ್ಯ ಕಂಡಿರುವುದು ಗಮನೀಯ.
ಮತ್ತೆ ಒಂದಾದ ವಕೀಲರ ಕುಟುಂಬ
ಇನ್ನು ವಿಚ್ಛೇದನ ಕೋರಿ ಇಬ್ಬರು ಮಕ್ಕಳಿರುವ ವಕೀಲರೊಬ್ಬರು ಸಲ್ಲಿಸಿದ್ದ ವಿವಾಹ ವಿಚ್ಚೇದನ ಪ್ರಕರಣ ನ್ಯಾಯಾಧೀಶರ ಮನವೊಲಿಕೆ ಮೂಲಕ ರಾಜಿಯಾಗಿ ಅಗಲಿಕೆ ಬಯಸಿದ್ದ ಕುಟುಂಬ ಮತ್ತೆ ಒಂದಾಗಿದೆ.
Related Articles
ಇದನ್ನೂ ಓದಿ : ಪ್ರಧಾನಿ ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ಎತ್ತಿಹಿಡಿದ ಬೆನ್ನಲ್ಲೇ ತೀಸ್ತಾ ಸೆಟಲ್ವಾಡ್ ಬಂಧನ
ಜಮಖಂಡಿ ಮೂಲದ ವಕೀಲರು ವಿಜಯಪುರ ಮೂಲದ ಪತ್ನಿಯಿಂದ ವಿವಾಹ ವಿಚ್ಚೇದನ ಬಯಸಿ ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರು ಮುದ್ದಾದ ಮಕ್ಕಳ ಭವಿಷ್ಯಕ್ಕಾಗಿ ಪತಿ-ಪತ್ನಿ ಇಬ್ಬರೂ ಪ್ರತಿಷ್ಠೆ ಬಿಟ್ಟು ಒಂದಾಗಿ. ಇದರಲ್ಲಿ ಪತಿ ವಕೀಲರಾಗಿದ್ದ ಕಾನೂನಿನ ಜ್ಞಾನ ಉಳ್ಳವರು. ಹೀಗಾಗಿ ನಿಮ್ಮ ನಡೆ ಸಮಾಜಕ್ಕೆ ಮಾದರಿಯಾಗಲಿ ಎಂದು ನೀಡಿದ ಸಲಹೆಗೆ ಪತಿ-ಪತ್ನಿ ಇಬ್ಬರೂ ಒಪ್ಪಿಗೆ ಮೂಲಕ ಮತ್ತೆ ಒಂದಾಗಿಸಿದ್ದು ಈ ಬಾರಿಯ ಲೋಕ್ ಅದಾಲತ್ ನ ವಿಶೇಷ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ಹಿರಿಯ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಉದಯವಾಣಿ ಗೆ ಮಾಹಿತಿ ನೀಡಿದರು.
ಇದರ ಹೊರತಾಗಿ ಕೌಟುಂಬಿಕ ವ್ಯಾಜ್ಯ ಪ್ರಕರಣದಲ್ಲಿ ಜೀವನ ನಿರ್ವಹಣೆ, ನಿರ್ಲಕ್ಷದಂಥ ಕಾರಣಗಳಿಗೆ ವಿಜಯಪುರ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ 8 ಪ್ರಕರಣಗಳು ಸುಖಾಂತ್ಯ ಕಂಡಿವೆ.