Advertisement

Vijayapura; ನಾನು ಲೋಕಸಭೆ ಸ್ಪರ್ಧೆ ಆಕಾಂಕ್ಷಿಯಲ್ಲ: ಗೋವಿಂದ ಕಾರಜೋಳ ಸ್ಪಷ್ಟನೆ

01:13 PM Dec 24, 2023 | Team Udayavani |

ವಿಜಯಪುರ: ನಾನು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್-ಸ್ಪರ್ಧಾ ಆಕಾಂಕ್ಷಿಯಲ್ಲ. ಗಾಳಿ ಸುದ್ದಿಗಳಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಮೀಸಲಾದ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಸುಳ್ಳುಸುದ್ದಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೂ ರಾಜ್ಯದ ಮೂಲೆ ಮೂಲೆಗಳಲ್ಲಿ ತಿರುಗಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿ ನಡೆಯುತ್ತಿರುವ ಮಾದಿಗರ ಆತ್ಮಗೌರವ ಸಮಾವೇಶ ಸಾಮಾಜಿಕ ನ್ಯಾಯದ ಹೋರಾಟ, ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಮಾತ್ರ. ಲೋಕಸಭೆ ಚುನಾವಣೆಗೂ, ಸಮಾವೇಶಕ್ಕೂ ಸಂಬಂಧವಿಲ್ಲ ಎಂದರು.

ಲಿಂಗಾಯತ ಸಮುದಾಯ ಮಠಾಧೀಶರು, ಮುಖಂಡರು ಜಾತಿ ಗಣತಿ ವಿರೋಧಿಸಿರುವ ಹಾಗೂ ಹೊಸದಾಗಿ ವೈಜ್ಞಾನಿಕವಾಗಿ ಜಾತಿ ಗಣತಿಗೆ ಆಗ್ರಹಿಸಿರುವ ವಿಷಯ ನನಗೆ ಗೊತ್ತಿಲ್ಲ. ಶ್ರೀಶೈಲದ ಶ್ರೀಗಳು, ಶಾಮನೂರು ಶಿವಶಂಕ್ರಪ್ಪ ಅವರಿಗೆ ಮಾತ್ರ ಗೊತ್ತು ಎಂದರು.

Advertisement

ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಗೆ ಯಾರೂ ಅಸಮಾಧಾನ ಹೊಂದಿಲ್ಲ. ಅವಕಾಶ ಸಿಗದವರು ಸೇರಿದಂತೆ ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ, ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಆದ್ಯತೆಯಾಗಲಿ ಎಂದು ಮನವಿ ಮಾಡುವುದಾಗಿ ಗೋವಿಂದ ಕಾರಜೋಳ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳನ್ನು ಕೆಳಗೆ ಇಳಿಸುತ್ತಾರೆ ಎಂಬುದೆಲ್ಲ ಊಹಾಪೋಹ. ಹೈಕಮಾಂಡ್ ಹೊಸ ಮುಖಗಳನ್ನು ಮುಂದೆ ತರುವ, ಬೆಳೆಸುವ ಉದ್ದೇಶದಿಂದ ಹೊಸ ತಂಡ ಕಟ್ಟಿದ್ದಾರೆ. ಎಲ್ಲರೂ ಜೊತೆಯಾಗಿ ಐಕ್ಯತೆಯಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next