Advertisement

ನರ್ಸ್ ಮೇಲೆ ಹಲ್ಲೆ: ಆರೋಪಿಗೆ 23 ಸಾವಿರ ರೂ. ದಂಡ ಸಹಿತ ತಿಂಗಳ ಶಿಕ್ಷೆ

08:47 PM Feb 16, 2023 | Team Udayavani |

ವಿಜಯಪುರ: ಖಾಸಗಿ ಆಸ್ಪತ್ರೆಯ ನರ್ಸ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದವನಿಗೆ ಜಿಲ್ಲಾ ನ್ಯಾಯಾಲಯ 1 ತಿಂಗಳ ಜೈಲು ಶಿಕ್ಷೆ ಹಾಗೂ 23 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

Advertisement

ನಗರದ ಆಶ್ವಿನಿ ಬಿದರಿ ಆಸ್ಪತ್ರೆಯ ಸ್ಟಾಪ್ ನರ್ಸ್‍ಬಸವರಾಜ ದುಂಡಪ್ಪ ಝಳಕಿ ಇವರ ಮೇಲೆ ರಫೀಕ್ ಅಬ್ದುಲ್ ರಜಾಕ್ ಉಮರಾಣಿ ಎಂಬಾತ 2018 ಜುಲೈ 26 ರಂದು ಹಲ್ಲೆ ಮಾಡಿದ್ದ. ತನ್ನ ಮಗನ ಚಿಕಿತ್ಸೆಗೆ ವೈದ್ಯರು ಔಷಧಿ ಬರೆದುಕೊಡಲಿ, ನೀನೇಕೆ ಬರೆದುಕೊಡುತ್ತಿ ಎಂದು ರಫೀಕ್ ಹಾಗೂ ಸೋಹೇಬ್ ಅಖ್ತರ್ ರುಕ್ಮುದ್ದೀನ್ ಗೌರಿ ಎಂಬವರು ಬಸವರಾಜ ಮೇಲೆ ಹಲ್ಲೆ ಮಾಡಿದ್ದ.

ಈ ಕುರಿತು ಬಸವರಾಜ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಎಸೈ ಎಸ್.ಬಿ.ಪಾಟೀಲ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ನಲವಾಡೆ ಇಬ್ಬರೂ ಆರೋಪಿಗಳಿಗೆ 1 ತಿಂಗಳ ಶಿಕ್ಷೆ ಹಾಗೂ 23 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕರಾದ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.

ಅಪಘಾತದ ಸಾವಿಗೆ ವರ್ಷದ ಶಿಕ್ಷೆ :

Advertisement

2016 ಏಪ್ರೀಲ್ 13 ರಂದು ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪಘಾತದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯ ಆರೋಪಿಗೆ 1 ವರ್ಷ ಶಿಕ್ಷೆ ಹಾಗೂ 2500 ರೂ. ದಂಡ ವಿಧಿಸಿ ಸಾದೇಶ ಹೊರಡಿಸಿದೆ.

ಆರೋಪಿ ಶಮ್ಸುದ್ದೀನ್ ಮುನ್ನಾ ಎಂಬಾತ ಐಶರ್ ಕ್ಯಾಂಟರ್‍ರನ್ನು ನಿರ್ಲಕ್ಷದಿಂದ ಚಾಲನೆ ಮಾಡಿದ್ದರಿಂದ ಕೊಲ್ಹಾರ ಬಳಿಯ ದೂಡಿಹಾಳ ಸಮೀಪ ಬೈಕ್‍ಹೆ ಡಿಕ್ಕಿ ಹೊಡೆಸಿದ್ದ. ಇದರಿಂಧ ಬೈಕ್ ಸವಾರಾದ ದೂರುದಾರ ಮಾದೇವ ಕೆಂಚಪ್ಪ ರೋಣಿಹಾಳ ಹಾಗೂ ಅವರ ಮಗ ಕಲ್ಲಪ್ಪ ಇಬ್ಬರೂ ಮೃತಪಟ್ಟಿದ್ದರು.

ವಿಜಯಪುರ ಗ್ರಾಮೀಣ ಸಿಪಿಐ ಸುನಿಲ ಕಾಂಬಳೆ, ಆರ್.ಎಸ್.ಚೌಧರಿ ಇವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ ಎರಡನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಸಂಪತಕುಮಾರ ಬಳೂಲಗಿಡದ ಆರೋಪಿ ಶಮ್ಸುದ್ದೀನ್‍ಗೆ 1 ವರ್ಷ ಜೈಲು ಶಿಕ್ಷೆ ಹಾಗೂ 2500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಶಿಧರ ರಾಠೋಡ ವಾದ ಮಂಡಿಸಿದ್ದರು.

ಇದನ್ನೂ ಓದಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಸರಣಿ: 24 ಗಂಟೆಗಳಲ್ಲಿ 1.40 ಲಕ್ಷ ಮುಂಗಡ ಬುಕ್ಕಿಂಗ್ ದಾಖಲೆ

Advertisement

Udayavani is now on Telegram. Click here to join our channel and stay updated with the latest news.

Next