ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಸಾತಪುರ ಗ್ರಾಮದಲ್ಲಿ ವಾಂತಿ – ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೂರಾರು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಶನಿವಾರ ಬೆಳಿಗ್ಗೆಯಿಂದ ಗ್ರಾಮಸ್ಥರಲ್ಲಿ ಏಕಾಏಕಿ ಅರೋಗ್ಯ ಸಮಸ್ಯೆ ಕಾಣುಸಿಕೊಂಡ ಪರಿಣಾಮ ಗ್ರಾಮದ ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಅಲ್ಲದೆ ಗ್ರಾಮಸ್ಥರ ಅರೋಗ್ಯ ಸಮಸ್ಯೆಗೆ ಇಂಡಿಯಿಂದ ಪೂರೈಕೆ ಮಾಡುತ್ತಿರುವ ಕಲುಷಿತ ನೀರೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ವಾಂತಿ – ಭೇದಿ ಸಮಸ್ಯೆ ಕಾಣಿಸಿಕೊಂಡ ಕಾರಣ ಸಾತಪೂರ ಗ್ರಾಮದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ 42 ಜನರು ಹಾಗೂ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 40 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
ಭಾನುವಾರ ವಾಂತಿ ಹಾಗೂ ಭೇದಿ ಉಲ್ಬಣಗೊಂಡ ಕಾರಣ ಬಾಧಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಇದನ್ನೂ ಓದಿ : ವಿಶೇಷ ಕಾಂಕ್ರೀಟ್‌ಗಳ ಸಂಶೋಧನಾಬೆಳಕು’ ಲೇಖನ ಸಂಕಲನ ಬಿಡುಗಡೆ
ಇಂಡಿ ಪಟ್ಟಣದಿಂದ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ನೀರು ಪೂರೈಕೆ ಆಗುತ್ತಿದೆ. ವಾಂತಿ ಭೇದಿ ಉಲ್ಬಣಗೊಳ್ಳುತ್ತಲೇ ಗ್ರಾಮಕ್ಕೆ ಪೂರೈಸುವ ನೀರನ್ನು ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಲೇ ಇಂಡಿ ತಾಲೂಕಾ ಆಸ್ಪತ್ರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಬಾಧಿತರಿಗೆ ಧೈರ್ಯ ತುಂಬಿದ್ದಾರೆ.
ಅಲ್ಲದೇ ಆಸ್ಪತ್ರೆಗೆ ದಾಖಲಾದ ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ಶಾಸಕ ಯಶವಂತರಾಯಗೌಡ ಸೂಚನೆ
ಸೂಚನೆ ನೀಡಿದ್ದಾರೆ.
ಅಲ್ಲದೇ ಸಮಸ್ಯೆಗೆ ನಿಖರ ಕಾರಣ ಕಂಡುಕೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರೋಗ ಉಲ್ಬಣ ಆಗದಂತೆ ಕ್ರಮ ಕೈಗೊಳ್ಳುವೊ ಆಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.