Advertisement

9 ಜನ ಕೋವಿಡ್‌-19 ರೋಗದಿಂದ ಗುಣಮುಖ

11:56 AM Jun 20, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ ಯಾವುದೇ ವ್ಯಕ್ತಿಗಳಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿಲ್ಲ. ಆದರೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಮತ್ತೆ 9 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದರೊಂದಿಗೆ 238 ರೋಗಿಗಳಲ್ಲಿ ಜಿಲ್ಲೆಯ 205 ಜನರು ಸೋಂಕುಮುಕ್ತರಾಗಿ ಮನೆಗೆ ಮರಳಿದ್ದು, 26 ಸೋಂಕಿತರಿಗೆ ಮಾತ್ರ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಕೊರೊನಾ ಕುರಿತು ವಿವರ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, 34 ವರ್ಷದ ವ್ಯಕ್ತಿ ಪಿ2204, 35 ವರ್ಷದ ವ್ಯಕ್ತಿ ಪಿ2837, 23 ವರ್ಷದ ಯುವತಿ ಪಿ5979, 32 ವರ್ಷದ ವ್ಯಕ್ತಿ ಪಿ5994, 46 ವರ್ಷದ ವ್ಯಕ್ತಿ ಪಿ6586, 55 ವರ್ಷದ ವ್ಯಕ್ತಿ ಪಿ6587, 58 ವರ್ಷದ ವ್ಯಕ್ತಿ ಪಿ6588, 9 ವರ್ಷದ ಬಾಲಕ ಪಿ6589 ಹಾಗೂ 3 ವರ್ಷದ ಬಾಲಕ ಪಿ6826 ಇವರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next