ಶ್ರದ್ಧಾ ಭಕ್ತಿಯಿಂದ ತಮ್ಮ ಆರಾಧ್ಯ ದ್ಯೆವ ಹನುಮ ಜಯಂತಿ ಅಚರಿಸಿದರು. ಹನುಮಾನ ದೇವರ ದೇವಾಲಯಗಳಲ್ಲಿ ಭಕ್ತ ಸಾಗರ ನೆರೆದಿತ್ತು. ಬೆಳಗ್ಗೆಯಿಂದಲೇ ಹನುಮಾನ ದೇವಾಲಯಕ್ಕೆ ತೆರಳಿದ ಸಾವಿರಾರು ಸಂಖ್ಯೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಹನುಮಂತನ ದರ್ಶನಾಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.
Advertisement
ಬಾಲ ಹನುಮನಿಗೆ ತೊಟ್ಟಿಲಲ್ಲಿ ಹಾಕಿ ಭಕ್ತಿ ಗೀತೆಗಳನ್ನು ಹಾಡಲಾಯಿತು. ಅಭಿಷೇಕ, ಎಲಿಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಜನರು ಭಕ್ತಿ ಭಾವದಿಂದ ಹನುಮಂತನನ್ನು ನೆನೆದರು. ಭಗವಾನ ಹನುಮಂತ ಅವರ ಕುರಿತಾದ ಭಕ್ತಿಗೀತೆಗಳು ಎಲ್ಲೆಡೆ ಮೊಳಗಿದವು. ಹನುಮಂತ ಹನುಮಂತ , ಪವಮಾನ ಪವಮಾನ ಜಗದ ಪ್ರಾಣ, ಜೈ ಹೋ ಪವನ ಕುಮಾರ ಎಂದೆಲ್ಲೆ ಹಾಡಿ ಹೊಗಳುವ ಮೂಲಕ ಭಕ್ತಿ ಸಮರ್ಪಣೆ ಮೆರೆದರು.
ಹನುಮಗಿರಿಯಲ್ಲಿ ಹನುಮ ಜಯಂತಿ ನಡೆಯಿತು. ಪವಮಾನ
ಹೋಮ, ಅಭಿಷೇಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಪಂ| ಮಧ್ವಾಚಾರ್ಯ ಮೊಕಾಶಿ ಹಾಗೂ ಪಂ|
ಸಂಜೀವಾಚಾರ್ಯ ಮದಭಾವಿ ಅವರ ನೇತೃತ್ವದಲ್ಲಿ ಈ ಬಾರಿ ಹನುಮ ದೀಕ್ಷಾಕಾರ್ಯಕ್ರಮ ನಡೆಯಿತು. ಯುವಕರಲ್ಲಿ
ದೇಶಭಕ್ತಿ ಹಾಗೂ ಹನುಮಂತನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ದೊರಕಿಸುವ ಕೇಸರಿ, ಬಿಳಿ ಹಾಗೂ ಹಸಿರು ವರ್ಣದ ದಾರ ಕಟ್ಟುವ ಹನುಮದೀಕ್ಷಾ ಕಾರ್ಯಕ್ರಮ ವೈಭವದಿಂದ ನಡೆಯಿತು. ವಿಜಯಪುರದ ಮುಳ್ಳಗಸಿ ಬಳಿ ಇರುವ ಹೊಯ್ಸಳರ ಕಾಲದ
800 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹನುಮಾನ
ದೇವಾಲಯದಲ್ಲಿ ಹನುಮ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಹನುಮಂತ ದೇವರ 5 ಅಡಿ ಎತ್ತರದ ಭವ್ಯ ಬೆಳ್ಳಿ ಮೂರ್ತಿ ಮತ್ತು ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯಿತು.
Related Articles
Advertisement
ವಿಜಯಪುರದ ಮನಗೂಳಿ ಅಗಸಿಯಲ್ಲಿರುವ ಹನುಮಾನದೇವಾಲಯ, ವಿವೇಕ್ ನಗರದಲ್ಲಿರುವ ಪ್ರಸನ್ನ ಪಂಚಮುಖೀ ಪ್ರಾಣದೇವ ದೇವಾಲಯ, ಪ್ರಸನ್ನಾಂಜನೇಯ ದೇವಾಲಯ, ಹನುಮಂತದೇವರ ಗುಡಿ, ಮಧುಲಾ ಮಾರುತಿ ದೇವಾಲಯ, ಲದ್ದಿಕಟ್ಟಿ ಹನುಮಂತ ದೇವಾಲಯ ಸೇರಿದಂತೆ ಹಲವಾರು ಹನುಮಂತ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ
ಕಾರ್ಯಕ್ರಮಗಳು ನೆರವೇರಿದವು.