Advertisement

ಬನ್ನಿ ಬಿಜಾಪುರಕೆ ; ಕೈತೋಟ ಮಾರ್ಗದರ್ಶನ 

11:02 AM Jul 14, 2018 | |

ಮುಂಗಾರು ಮಳೆ ಬೆಂಗಳೂರಿನ ಇಳೆಯನ್ನು ತಂಪು ಮಾಡುತ್ತಿದೆ. ಮನೆಯ ಹಿತ್ತಲು, ತಾರಸಿಯಲ್ಲಿ ಜಾಗವಿದ್ದವರು ಹೂ ಕುಂಡಗಳಲ್ಲಿ ಮನೆಗೆ ಆಗುವಷ್ಟು ಸಮೃದ್ಧ ತರಕಾರಿ ಬೆಳೆದುಕೊಳ್ಳಲು ಇದು ಸಕಾಲ. ರಾಸಾಯನಿಕಗಳಿಂದ ತೋಯಿಸಿಕೊಂಡ ತರಕಾರಿಗಳನ್ನು ಸೇವಿಸುವ ಬದಲಿಗೆ ಮನೆಯಲ್ಲೇ ಬೆಳೆಸಿದ ತರಕಾರಿಗಳನ್ನು ಸವಿಯಬಾರದೇಕೆ? ಮನೆಯಲ್ಲೇ ಹೇಗೆ ಬೆಳೆಸೋದು ಅಂತೀರಾ? ಹಾಗಿದ್ದರೆ ಈ ಕಾರ್ಯಕ್ರಮಕ್ಕೆ ಬನ್ನಿ. ರೈತರಿಗೆ ಬೀಜ ಒದಗಿಸುವ ಸಂಸ್ಥೆ “ಸಹಜ ಸೀಡ್ಸ್‌’ ಮತ್ತು “ಗ್ರೀನ್‌ ಪಾತ್‌’ ಸಹಯೋಗದಲ್ಲಿ ಮುಂಗಾರು ಬೀಜ ಮೇಳ ನಗರದಲ್ಲಿ ನಡೆಯುತ್ತಿದೆ.

Advertisement

ಈ ಮೇಳದಲ್ಲಿ ವಿವಿಧ ಬಗೆಯ ದೇಸಿ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರೋಗ ಮತ್ತು ಕೀಟಗಳಿಂದ ಮುಕ್ತವಾದ, ಹೆಚ್ಚು ಆರೈಕೆ ಕೇಳದೆ ಬೆಳೆಯುವ ದೇಸಿ ತಳಿಗಳು, ರುಚಿ ಮತ್ತು ಪೋಷಕಾಂಶಗಳಿಂದ ಸಮೃದ್ಧವೂ ಆಗಿರುತ್ತವೆ. ಮನೆ ಹಿತ್ತಲಿನಲ್ಲಿ ಸ್ವಲ್ಪವೇ ಸ್ಥಳವಿದ್ದರೂ ಸಾಕು, ಅಷ್ಟರಲ್ಲೇ ಇವುಗಳನ್ನು ಬೆಳೆದುಕೊಳ್ಳಬಹುದು. ಅಲ್ಲದೆ ಈಗೀಗ ಬೆಂಗಳೂರಿನಲ್ಲಿ ಜನಪ್ರಿಯವಾಗುತ್ತಿರುವ ತಾರಸಿ ತೋಟ ಪರಿಕಲ್ಪನೆಗೂ ಇವು ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಏನಿಲ್ಲವೆಂದರೂ ಮೇಳಕ್ಕೆ ಬಂದು ಮಾಹಿತಿಯನ್ನು ಪಡೆದುಕೊಳ್ಳಬಹುದು.

ಆಯೋಜಕರ ಬಗ್ಗೆ…
“ಗ್ರೀನ್‌ ಪಾತ್‌’ ಸಂಸ್ಥೆ, ಸಾವಯವ ಚಳವಳಿಯಲ್ಲಿ ತೊಡಗಿಕೊಂಡು, ಗ್ರಾಹಕರಲ್ಲಿ ಶುದ್ಧ ಆಹಾರದ ಬಗ್ಗೆ ಅರಿವು ಮೂಡಿಸುವ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸುತ್ತಾ ಬರುತ್ತಿದೆ. “ಸಹಜ ಸೀಡ್ಸ್‌’ ರೈತರಿಗೆ ಬೀಜ ಒದಗಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಮೇಳದಲ್ಲಿ ಗ್ರೀನ್‌ ಪಾತ್‌ನ ಮಳಿಗೆಯೂ ಇದ್ದು, ಅಲ್ಲಿ ಹಣ್ಣು, ತರಕಾರಿ ಮತ್ತು ಸಾವಯವ ಉತ್ಪನ್ನಗಳು ಸಿಗಲಿವೆ. 

ಮೇಳದಲ್ಲಿ ಏನೇನಿದೆ?
ರಾಸಾಯನಿಕಮುಕ್ತ ಹಣ್ಣು,ತರಕಾರಿಗಳು
 ಅಪರೂಪದ ಗೆಡ್ಡೆ- ಗೆಣಸುಗಳು
 ಕೈತೋಟ ಮಾಡಲು ಮಾರ್ಗದರ್ಶನ
 ಸಂಗಾತಿ ಬೆಳೆಗಳ ಮಾಹಿತಿ
 ಬೀಜೋತ್ಪಾದನೆಯ ತಂತ್ರಗಳು
 ನಾಟಿ ತಳಿಗಳ ತರಕಾರಿ ಬೀಜಗಳು

ಎಲ್ಲಿ?: ಗ್ರೀನ್‌ ಪಾತ್‌, ಮಂತ್ರಿ ಮಾಲ್‌ ಮೆಟ್ರೋ ಮುಂಭಾಗ,ರಾಜೀವ್‌ಗಾಂಧಿ ವೃತ್ತ, ಮಲ್ಲೇಶ್ವರ
 ಯಾವಾಗ?: ಜುಲೈ 14- 15ನೇ, ಬೆಳಿಗ್ಗೆ 10.30- ರಾತ್ರಿ 8
 ಸಂಪರ್ಕ: 9964031758, 080-23655302

Advertisement
Advertisement

Udayavani is now on Telegram. Click here to join our channel and stay updated with the latest news.

Next