Advertisement

ವಿಜಯಪುರ: ಜಿಲ್ಲೆಯಲ್ಲಿ ಮಾದಕ ವಸ್ತು, ಬೆಟ್ಟಿಂಗ್ ವಿರುದ್ಧ ಸಮರ: ಎಸ್ಪಿ ಅಗರವಾಲ್

08:57 PM Oct 22, 2020 | mahesh |

ವಿಜಯಪುರ: ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಮಾದಕ ವಸ್ತುಗಳಾದ ಗಾಂಜಾ ಮಾವಾ, ಮದ್ಯ ಸೇರಿದಂತೆ ಅಕ್ರಮ ಚಟುವಟಿಕೆವಿರುದ್ಧ ಸಮರಾ ಸಾರಿದ್ದು, ಹಲವು ಪ್ರಕರಣ ಪತ್ತೆ ಹಚ್ಚಿ, ಆರೋಪಿಗಳನ್ನು ಜೈಲುಗೆ ಕಳಿಸಿದ್ದಾಗಿ ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

Advertisement

ಗುರುವಾರ ನಗರದ ಚಿಂತನ್ ಹಾಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತು ವಿವರ ನೀಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಅಪರಾಧಿಕ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವ ಹಾಗೂ ಮಾರಾಟ ಮಾಡುವವರ ಮೇಲೆ ಈಗಾಗಲೇ 18 ಪ್ರಕರಣ ದಾಖಲಿಸಿ 287.088 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.

ಸದ್ಯ ನಡೆದಿರುವ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದು, ಇದರ ವಿರುದ್ಧ ತೀವ್ರ ನಿಗಾ ಇರಿಸಿದ್ದೇವೆ. ಪರಿಣಾಮವೇ ಈಗಾಗಲೇ ಖಚಿತ ಮಾಹಿತಿ ಮೇರೆಗೆ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದೇವೆ. 16 ಪ್ರಕರಣ ದಾಖಲಿಸಿ, 32 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಗಳಿಂದ 39 ಮೊಬೈಲ್, 1 ಲ್ಯಾಪಟಾಪ್, 1 ಡಸ್ಟರ್ ಕಾರು ಸೇರಿದಂತೆ 6,52,770 ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಅನಧಿಕೃತವಾಗಿ ಅಡುಗೆ ಅನಿಲವನ್ನು ರಿ ಫೀಲಿಂಗ್ ಘಟಕಗಳ ಮೇಲೂ ದಾಳಿ ನಡೆಸಿ, ಎರಡು ಪ್ರಕರಣ ದಾಖಲಿಸಿ 1,38,060 ರೂ. ಮೌಲ್ಯದ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಮಾವಾ ಮಾರಾಟ ಮಾಡುವವರ ಮೇಲೆಯೂ ಹದ್ದಿನ ಕಣ್ಣು ಇರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 186,905 ಲಕ್ಷ ರೂ. ಮೌಲ್ಯದ ಮಾವಾ ಜಪ್ತು ಮಾಡಿಕೊಳ್ಳಲಾಗಿದೆ.

Advertisement

ಸಮಾಜದಲ್ಲಿ ಶಾಂತಿ ಕದಡುವ ಸಮಾಜ ಘಾತುಕ ಶಕ್ತಿಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರು ಜನರ ವಿರುದ್ಧ ಗೂಂಡಾ ಕಾಯ್ದೆ ಅನ್ಯವ ಬಂಧಿಸಲಾಗಿದೆ. ಇದರಲ್ಲಿ ಪದೇ ಪದೇ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಓರ್ವ ವ್ಯಕ್ತಿಯೂ ಸೇರಿದ್ದಾಗಿ ವಿವರಿಸಿದರು.

ಬಸವನಬಾಗೇವಾಡಿ ಪಟ್ಟಣದಲ್ಲಿನ ಮನೆಗಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು, 2.15 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನ, 190 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಬಂಧಿತ ಆರೋಪಿಗಳನ್ನು ಸೋಹೇಲ್ ಮುರ್ತುಜಸಾಬ ಇನಾಮದಾರ (21), ಆಕಾಶ ರಮೇಶ ಕೋಲಕಾರ (19) ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next