Advertisement

ಕೃಷ್ಣೆಗೆ ಪ್ರವಾಹ :  ಗಂಗೂರಿನ ದೇವಸ್ಥಾನ ಜಲಾವೃತ

01:21 PM Jul 29, 2021 | Team Udayavani |

 

Advertisement

ಮುದ್ದೇಬಿಹಾಳ : ತಾಲೂಕಿನ ಕೃಷ್ಣಾನದಿಗೆ ಪ್ರವಾಹ ಹೆಚ್ಚಾಗುವ ಆತಂಕ ಮುಂದುವರೆದಿದ್ದು ಇದರ ಮೊದಲ ಭಾಗವಾಗಿ ನದಿ ತೀರದಲ್ಲಿರುವ ಗಂಗೂರು ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ದೇವಸ್ಥಾನ, ಗದ್ದುಗೆ ಜಲಾವೃತವಾಗಿದೆ.

ಗಂಗೂರ – ಕಮಲದಿನ್ನಿ ರಸ್ತೆ ಮೇಲೆ ಒಂದು ಅಡಿಗಳಷ್ಟು ನೀರು ನಿಂತು ಸಂಚಾರ ದುಸ್ತರವಾಗಿದೆ. ಇದರೊಟ್ಟಿಗೆ ನದಿ ತೀರದ  ದೇವೂರ, ಕಮಲದಿನ್ನಿ, ಗಂಗೂರ, ಕುಂಚಗನೂರ, ಹಂಡರಗಲ್ಲ, ನಾಗರಾಳ, ಮುದೂರ, ತಂಗಡಗಿ ಗ್ರಾಮಗಳಿಗೂ ನೀರು ತೀರ ಸಮೀಪಕ್ಕೆ ಬಂದು ಆತಂಕ ಹೆಚ್ಚುವಂತೆ ಮಾಡಿದೆ.  ಕೃಷ್ಣಾನದಿಗೆ ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯದಿಂದ 4 ಲಕ್ಷ ಕ್ಯೂಸೆಕವರೆಗೆ ನೀರು ಹರಿಸುತ್ತಿರುವುದು ಇಂಥ ಪರಿಸ್ಥಿತಿಗೆ ಕಾರಣವಾಗಿದೆ.

ಇದನ್ನೂ ಓದಿ :  ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?

ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸತೊಡಗಿದ್ದು ಸಂಭವನೀಯ ಆತಂಕ ಎದುರಿಸಲು ಸನ್ನದ್ದರಾಗಿದ್ದಾರೆ.

Advertisement

ಏತನ್ಮಧ್ಯೆ, ನೋಡಲ್ ಅಧಿಕಾರಿಗಳ ಸಹಾಯಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.  ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಬಂಧಿಸಿದ ಗ್ರಾಪಂ  ಸಿಬ್ಬಂದಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಸಹ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ನಿಯೋಜಿಸಲಾಗಿದೆ. ಸಂದರ್ಭಾನುಸಾರ ಪ್ರವಾಹ ಪೀಡಿತರನ್ನು ರಕ್ಷಿಸಲು ಕಾಳಜಿ ಕೇಂದ್ರಗಳನ್ನು ಸಕಲ ಮೂಲಸೌಕರ್ಯಗಳೊಂದಿಗೆ ಸಿದ್ದತೆಯಲ್ಲಿಡಲಾಗಿದೆ.

ಇದನ್ನೂ ಓದಿ : ಜಾಹೀರಾತು: ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next