ವಿಜಯಪುರ: ಇಂಡಿ ತಾಲೂಕಿನ ಮಾನಸಿಕ ಅಸ್ವಸ್ಥ ಓರ್ವ ಯುವತಿಯನ್ನು ನಗರದಲ್ಲಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಜ. 17 ರಂದು ತಡರಾತ್ರಿ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಪುಸಲಾಯಿಸಿ, ಬೆದರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ ಎಂದು ದೂರಲಾಗಿದೆ.
ಯುವತಿಯನ್ನು ಪುಸಲಾಯಿಸಿ, ಬಳಿಕ ಬೆದರಿಸಿ ಓರ್ವ ಯುವಕ ಅತ್ಯಾಚಾರ ನಡೆಸಿದ್ದಾನೆ. ಯುವಕ ನಡೆಸಿರುವ ದುಷ್ಕೃತ್ಯಕ್ಕೆ ಆತನ ಇಬ್ಬರು ಸ್ನೆರಹಿತರು ಸಹಕಾರ ನೀಡಿದ್ದಾಗಿ ದೂರಲಾಗಿದೆ.
ಅತ್ಯಾಚಾರದ ಬಳಿಕ ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಜ.18 ರಂದು ಬೆಳಿಗ್ಗೆ ನರುಳುತ್ತಿದ್ದ ಯುವತಿಯನ್ನು ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
Related Articles
ಸ್ಥಳಕ್ಕೆ ಆಗಮಿಸಿದ ವಿಜಯಪುರ ಮಹಿಳಾ ಪೊಲೀಸ್ ಠಾಣೆ ಸಿಪಿಐ ರಾಯಗೊಂಡ ಜನಾರ, ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಯುವತಿಯಿಂದ ಮಾಹಿತಿ ಪಡೆಯುತ್ತಿದ್ದಾರೆ.
ಬಳಿಕ ತನ್ನ ಮೇಲೆ ಓರ್ವನಿಂದ ಅತ್ಯಾಚಾರ ನಡೆದಿರುವ ಹಾಗೂ ಇದಕ್ಕೆ ಇಬ್ಬರು ಯುವಕರು ಸಹಕಾರ ನೀಡಿದ್ದಾಗಿ ಮಾಹಿತಿ ನೀಡಿದ್ದಾಳೆ. ಬಳಲಿಕೆಯಲ್ಲಿದ್ದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಸಂತ್ರಸ್ತ ಯುವತಿಗೆ ಸರ್ಕಾರಿ ಸ್ವಾಮ್ಯದ ಸ್ವಾದಾರ ಕೇಂದ್ರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದ್ದಾರೆ.
ಘಟನೆಯ ಬಳಿಕ ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿ, ಮಾನಸಿಕ ಅಸ್ವಸ್ಥಳಂತೆ ಕಂಡು ಬಂದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಹಗರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಮನೆ ಮೇಲೆ ಇಡಿ ದಾಳಿ