ವಿಜಯನಗರ : ಸರಕಾರಿ ಬಸ್ಸಿನ ಟೈಯರ್ ಸ್ಪೋಟಗೊಂಡು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕುಪ್ಪಿನಕೆರಿ ಕ್ರಾಸ್ ಬಳಿ ಬುಧವಾರ ನಡೆದಿದೆ.
ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಈಚಲ ಬೊಮ್ಮನಹಳ್ಳಿ ಗ್ರಾಮದ ಪುಷ್ಪಲತಾ(20), ರಾಂಪುರ ನಿವಾಸಿಯಾದ ಮೀನಾಕ್ಷಿ(38) ಮೃತಪಟ್ಟ ದುರ್ದೈವಿಗಳು. ರಿಕ್ಷಾದಲ್ಲಿದ್ದ ರಮೇಶ, ಈರಣ್ಣ, ಅಭಿಷೇಕ್ ಮತ್ತು ಸ್ವಾತಿ ಗಾಯಗೊಂಡಿದ್ದು ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳ್ಳಾರಿಗೆ ಬರುತ್ತಿದ್ದ ಸರಕಾರಿ ಬಸ್ ಬಸ್ ಟೈಯರ್ ಸ್ಪೋಟಗೊಂಡು ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಪರಿಣಾಮ ಗಂಭೀರ ಗಾಯಗೊಂಡಿದ್ದ ಪುಷ್ಪಲತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದರೆ, ಮೀನಾಕ್ಷಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ, ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Related Articles
ಇದನ್ನೂ ಓದಿ : ಭಾರತದಲ್ಲಿ 2015ರಿಂದ 2021ರ ವೇಳೆಗೆ ಮಲೇರಿಯಾ ಪ್ರಕರಣ ಶೇ.86ರಷ್ಟು ಇಳಿಕೆ