ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ ಮತ್ತೆ 39 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 286ಕ್ಕೆ ಏರಿಕೆಯಾಗಿದೆ. ಆದರೆ ಸೋಂಕಿತರಲ್ಲಿ 217 ಜನರು ಗುಣಮುಖರಾಗಿ ಮನೆಗೆ ಮರಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 62 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರದ ವರೆಗೆ ಕೋವಿಡ್ ಸ್ಥಿತಿಗತಿ ಕುರಿತು ವಿವರ ನೀಡಿರುವ ಅವರು, ಜಿಲ್ಲೆಯಲ್ಲಿ ಜೂ.21ರಂದು ಒಂದೇ ದಿನ 39 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಹೊಸದಾಗಿ ಸೋಂಕು ಪತ್ತೆಯಾದವರನ್ನು 66 ವರ್ಷದ ವ್ಯಕ್ತಿ ಪಿ-8756, 28 ವರ್ಷದ ವ್ಯಕ್ತಿ ಪಿ-8757, 50 ವರ್ಷದ ಮಹಿಳೆ ಪಿ-8758, 50 ವರ್ಷದ ವ್ಯಕ್ತಿ ಪಿ-8759, 60 ವರ್ಷದ ವೃದ್ಧ ಪಿ-8760, 65 ವರ್ಷದ ವೃದ್ಧೆ ಪಿ-8761, 60 ವರ್ಷದ ವೃದ್ಧೆ ಪಿ-8762, 59 ವರ್ಷದ ವೃದ್ಧೆ ಪಿ-8763, 30 ವರ್ಷದ ಮಹಿಳೆ ಪಿ-8764, 61 ವರ್ಷದ ವೃದ್ಧ ಪಿ-8765, 65 ವರ್ಷದ ವೃದ್ಧೆ ಪಿ-8766, 22 ವರ್ಷದ ವ್ಯಕ್ತಿ ಪಿ-8767, 45 ವರ್ಷದ ವ್ಯಕ್ತಿ ಪಿ-8768, 16 ವರ್ಷದ ಬಾಲಕ ಪಿ-8769 ಇವರಿಗೆ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಾಟೀಲ ವಿವರಿಸಿದ್ದಾರೆ.
62 ವರ್ಷದ ವೃದ್ಧ ಪಿ-8770, 70 ವರ್ಷದ ವೃದ್ಧ ಪಿ-8771, 10 ವರ್ಷದ ಬಾಲಕಿ ಪಿ-8772, 8 ವರ್ಷದ ಬಾಲಕ ಪಿ-8773, 85 ವರ್ಷದ ವೃದ್ಧ ಪಿ-8779, 29 ವರ್ಷದ ವ್ಯಕ್ತಿ ಪಿ-8780, 58 ವರ್ಷದ ವೃದ್ಧೆ ಪಿ-8781, 31 ವರ್ಷದ ಪಿ-8782, 29 ವರ್ಷದ ಮಹಿಳೆ ಪಿ-8783, 4 ವರ್ಷದ ಬಾಲಕಿ ಪಿ-8784, 1 ವರ್ಷದ ಗಂಡು ಮಗು ಪಿ-8785, 34 ವರ್ಷದ ಮಹಿಳೆ ಪಿ-8786, 15 ವರ್ಷದ ಬಾಲಕ ಪಿ-8787, 23 ವರ್ಷದ ವ್ಯಕ್ತಿ ಪಿ-8788 ಇವರಿಗೂ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಅವರು ತಿಳಿಸಿದ್ದಾರೆ.
48 ವರ್ಷದ ಮಹಿಳೆ ಪಿ-8774, 65 ವರ್ಷದ ವ್ಯಕ್ತಿ ಪಿ-8775, 25 ವರ್ಷದ ವ್ಯಕ್ತಿ ಪಿ-8776, 30 ವರ್ಷದ ಮಹಿಳೆ ಪಿ-8778, 20 ವರ್ಷದ ಮಹಿಳೆ ಪಿ-8789, 26 ವರ್ಷದ ಮಹಿಳೆ ಪಿ-8790, 25 ವರ್ಷದ ಮಹಿಳೆ ಪಿ-8791, 59 ವರ್ಷದ ವೃದ್ಧ ಪಿ-8792, 42 ವರ್ಷದ ಪಿ-8793, 58 ವರ್ಷದ ವೃದ್ಧೆ ಪಿ-8794, ಇವರಿಗೆ ಐಎಲ್‌ಐ ಸಂಪರ್ಕದಿಂದ, 70 ವರ್ಷದ ವೃದ್ಧೆ ಪಿ-8777 ಇವರಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವಿವರಿಸಿದ್ದಾರೆ.
ಮತ್ತೊಂದೆಡೆ ಭಾನುವಾರ 33 ವರ್ಷದ ವ್ಯಕ್ತಿ ಪಿ-3171, 13 ವರ್ಷದ ಬಾಲಕಿ ಪಿ-6115, 7 ವರ್ಷ ಗಂಡುಮಗು ಪಿ-6116, 8 ತಿಂಗಳ ಮಗು ಪಿ7068, 55 ವರ್ಷದ ವೃದ್ಧೆ ಪಿ-7394, 35 ವರ್ಷದ ಪಿ-7395, 34 ವರ್ಷದ ವ್ಯಕ್ತಿ ಪಿ-7396 ಇವರು ಕೋವಿಡ್ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯ ಫಲವಗಿ ಸೋಂಕಿನಿಂದ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 32,841 ಜನರು ಬಂದ ಬಗ್ಗೆ ವರದಿಯಾಗಿದ್ದು, 11,812 ಜನರು 28 ದಿನಗಳ ಐಸೋಲೇಶನ್ ಅವಧಿ ಮುಗಿಸಿದ್ದಾರೆ. 20,805 ಜನರು 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 26,969 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು, 26,610 ಜನರ ನೆಗೆಟಿವ್ ವರದಿ ಬಂದಿದೆ. 73 ಜನರ ವರದಿ ನಿರೀಕ್ಷೆಯಲ್ಲಿದ್ದೇವೆ. 286 ಜನರಲ್ಲಿ ಕೋವಿಡ್ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ 7 ಮೃತಪಟ್ಟಿದ್ದಾರೆ. 217 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 62 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ವಿವರಿಸಿದ್ದಾರೆ.