Advertisement

9 ಜನರಿಗೆ ಕೋವಿಡ್ -ದ್ವಿ ಶತಕ ದಾಟಿದ ಸೋಂಕಿತರು

11:51 AM Jun 08, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ರವಿವಾರ ಮತ್ತೆ 9 ಜನರಿಗೆ ಕೋವಿಡ್‌ ಸಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 13 ನೇ ಸ್ಥಾನದಲ್ಲಿದ್ದ ವಿಜಯಪುರ ಜಿಲ್ಲೆ 9ನೇ ಸ್ಥಾನಕ್ಕೆ ನೆಗೆಯುವ ಮೂಲಕ ಮತ್ತೆ ಟಾಪ್‌ಟೆನ್‌ ಪಟ್ಟಿಗೆ ಮರಳಿದೆ.

Advertisement

ಹೊಸದಾಗಿ ಕೋವಿಡ್‌  ಸೋಂಕು ದೃಢಪಟ್ಟವರಲ್ಲಿ 7 ಜನರಿಗೆ ಮಹಾರಾಷ್ಟ್ರದ ಸಂಪರ್ಕ ಇದ್ದರೆ, ಇನ್ನಿಬ್ಬರಿಗೆ ಸೋಂಕಿತ ಪಿ-5013ರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದ್ದಾರೆ. ಹೊಸದಾಗಿ ಸೋಂಕಲು ದೃಢಪಟ್ಟ 9 ಜನರನ್ನು 26 ವರ್ಷದ ಯುವಕ ಪಿ-5425, 13 ವರ್ಷದ ಬಾಲಕ ಪಿ-5426, 8 ವರ್ಷದ ಬಾಲಕಿ ಪಿ-5427, 26 ವರ್ಷದ ಯುವಕ ಪಿ-5425, 13 ವರ್ಷದ ಬಾಲಕ ಪಿ-5426, 8 ವರ್ಷದ ಬಾಲಕಿ ಪಿ-5427, 22 ವರ್ಷದ ಯುವತಿ ಪಿ-5429, 18 ವರ್ಷದ ಯುವಕ ಪಿ-5430, 30 ವರ್ಷದ ಯುವಕ ಪಿ-5431, 6 ವರ್ಷದ ಬಾಲಕಿ ಪಿ-5432, 30 ವರ್ಷದ ಯುವತಿ ಪಿ-5433 ಅವರಿಗೆ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 8 ವರ್ಷದ ಬಾಲಕಿ ಪಿ-5427, 28 ವರ್ಷದ ಮಹಿಳೆ ಪಿ-5428 ಅವರಿಗೆ ಸೋಂಕಿತ ವ್ಯಕ್ತಿ ಪಿ-5013 ಸಂಪರ್ಕದಿಂದ ಸೋಂಕು ತಗುಲಿದೆ.

ಇದಲ್ಲದೇ ಜಿಲ್ಲೆಯಲ್ಲಿ ರವಿವಾರ 3 ರೋಗಿಗಳು ಕೋವಿಡ್‌ ರೋಗದಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 28 ವರ್ಷದ ಪಿ-2841, 70 ವರ್ಷದ ವೃದ್ಧ ಪಿ-2923, 28 ವರ್ಷದ ಯುವತಿ ಪಿ-2927 ಗುಣಮುಖರಾಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 26,238 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದರಲ್ಲಿ 25,278 ಜನರ ವರದಿ ನೆಗೆಟಿವ್‌ ಬಂದಿದೆ. 202 ಜನರಿಗೆ ಸೋಂಕು ದೃಢಪಟ್ಟಿದ್ದು, 758 ಜನರ ವರದಿ ನಿರೀಕ್ಷಿಸಲಾಗುತ್ತಿದೆ. ಸೋಂಕಿತರಲ್ಲಿ 6 ಜನರು ಮೃತಪಟ್ಟಿದ್ದು, ಸೋಂಕಿತರಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿದ್ದರಿಂದ 79 ಜನರು ಸೋಂಕುಮುಕ್ತರಾಗಿ ಮನೆಗೆ ಮರಳಿದ್ದಾರೆ. 117 ಜನರಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿದೇಶ ಹಾಗೂ ಇತರೆ ಪ್ರದೇಶಗಳಿಂದ ಜಿಲ್ಲೆಗೆ 28,557 ಜನ ಆಗಮಿಸಿದ್ದು, 8283 ಜನರು 28 ದಿನಗಳ ಐಸೋಲೇಶನ್‌ ಅವಧಿ ಮುಗಿಸಿದ್ದಾರೆ. 20,189 ಜನರು 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next