ವಿಜಯಪುರ: ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಜಿಲ್ಲೆಯ ಎರಡು ಪ್ರತ್ಯೇಕ ನ್ಯಾಯಾಲಯಗಳು ಶುಕ್ರವಾರ ತೀರ್ಪು ಪ್ರಕಟಿಸಿವೆ. ಒಂದು ಪ್ರಕರಣದಲ್ಲಿ 10 ಹಾಗೂ ಇನ್ನೊಂದು ಪ್ರಕರಣದಲ್ಲಿ ಓರ್ವ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿವೆ.
ನಗರದ ಮುಕುಂದ ನಗರದಲ್ಲಿ ನಿವೇಶನದ ವಿಷಯವಾಗಿ ವಿಠಲ ಶಾಂತಪ್ಪ ಬಿರಾದಾರ ಹಾಗೂ ವಿಜಯಕುಮಾರ ಡೋಣಿ ಇವರ ಮಧ್ಯೆ ಜಗಳ ಇತ್ತು. ಇದೇ ವಿಷಯವಾಗಿ 2014 ಮೇ 8 ರಂದು ನಡೆದ ಜಗಳದಲ್ಲಿ ವಿಜಯಕುಮಾರ ಡೋಣಿ, ಶಾಂತಕುಮಾರ ಡೋಣಿ, ಬಸನಗೌಡ ಪಾಟೀಲ, ಉಮೇಶ ಗೌಡರ, ಕಲ್ಲಪ್ಪ ಕಲಬುರ್ಗಿ, ಸಂಗಮೇಶ ಬಿಲ್ಲೂರು, ಶಾಂತವೀರ ಯರನಾಳ, ಸುರೇಶ ಪೂಜಾರಿ, ಮುದುಕಪ್ಪ ಹಾವಡಿ, ಸಂತೋಷ ಪಾಟೀಲ ಸೇರಿಕೊಂಡು ವಿಠಲ ಬಿರಾದಾರ ಮೇಲೆ ಹಲ್ಲೆ ನಡೆಸಿದ್ದರು.
ಸದರಿ ಪ್ರಕರಣದಲ್ಲಿ ವಿಠಲ ಅವರ ಮಗ ಪ್ರಕಾಶ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಿಪಿಐ ಟಿ.ಎಸ್.ಸುಲ್ಫಿ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ ಎಲ್.ಪಿ. ಅವರು 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಲ್ಲದೇ, ತಲಾ 10 ಸಾವಿರ ರೂ. ದಂಡ ವಿಧಿಸಿದ್ದಾರೆ.
Related Articles
ಇದರಲ್ಲಿ ಆರೋಪಿ ವಿಜಯಕುಮಾರ ದೂರುದಾರ ವಿಠಲ ಅವರಿಗೆ ವಾಹನ ಜಕಂ ಮಾಡಿದ್ದಕ್ಕೆ 38 ಸಾವಿರ ರೂ. ಹಾಗೂ ಗಾಯಾಳು ಪ್ರಕಾಶ ಅವರಿಗೆ ನಾಲ್ಕನೇ ಆರೋಪಿ ಉಮೇಶ ಗೌಡರ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿದ್ದಾರೆ. ಸರ್ಕಾರದ ಪವರವಾಗಿ 1ನೇ ಅಧಿಕ ಸರ್ಕಾರಿ ಅಭಿಯೋಜಕರಾದ ವನಿತಾ ಇಟಗಿ ವಾದ ಮಂಡಿಸಿದ್ದರು.
ಪತ್ನಿ ಹತ್ಯೆಗಾಗಿ ಜೀವಾವಧಿ ಶಿಕ್ಷೆ : ಕೌಟುಂಬಿಕ ಕಲಹದ ಹಿನ್ನೆಲೆಯಿಂದ ತನ್ನಿಂದ ದೂರವಾಗಿದ್ದ ಹೆಂಡತಿಯನ್ನು ಅನೈತಿಕ ಸಂಬಂಧ ಶಂಕೆಯಲ್ಲಿ ಹತ್ಯೆ ಮಾಡಿದ್ದ ಆರೋಪದಲ್ಲಿ ಆರೋಪಿ ಪತಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಿಂದಗಿ ತಾಲೂಕ ಕಡಣಿ ಮೂಲದ ಅಬ್ದುಲ್ ಮೊರಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಪತ್ನಿ ರಿಯಾನಾ ಹಾಗೂ ಅಬ್ದುಲ್ ಮಧ್ಯೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕೆ ಗಂಡನಿಂದ ದೂರವಾಗಿ ಇಂಡಿ ಪಟ್ಟಣಕ್ಕೆ ಬಂದು ನೆಲೆಸಿದ್ದಳು.
ಇಂಡಿ ಪಟ್ಠಣದ ಮದರಸಾ ಒಂದರಲ್ಲಿ ಅಡುಗೆ ಮಾಡಿಕೊಂಡು ಜೀವನ ನಡೆಸುತಿದ್ದ ರಿಯಾನಾ ಅಲ್ಲಿನ ಮೌಲಾನಾ ಜೊತೆ ಅನೈವಿಕ ಸಂಬಂಧ ಹೊಂದಿದ್ದಾಗಿ ಜಗಳ ತೆಗೆದು, ಮಾರಕಾಸ್ತ್ರಗಳಿಂದ 2015 ಸೆಪ್ಟೆಂಬರ್ 24 ರಂದು ರಾತ್ರಿ ರಿಯಾನಾ ಮೇಲೆ ಅಬ್ದುಲ್ ದಾಳಿ ನಡೆಸಿದ್ದ. ವಿಜಯಪುರ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ ರಿಯಾನಾ ಚಿಕಿತ್ಸೆ ಫಲಿಸದೇ ಮರುದಿನ ಮೃತಪಟ್ಟಿದ್ದಳು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತÀ್ತು. ವಿಚಾರಣೆ ನಡÉಸಿದ ವಿಜಯಪುರ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಧ್ವೇಶ ದಬೇರ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕೊಲೆ ಯತ್ನದ ಹಿನ್ನೆಲೆಯಲ್ಲಿ 5 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾಋದ ಪರವಾಗಿ 4ನೇ ಅಧಿಕ ಸರ್ಕಾರಿ ಅಭಿಯೋಜಕರಾಗಿ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಜೋಶಿಮಠ: ಅಸುರಕ್ಷಿತವೆಂದರೂ ಮನೆಗಳನ್ನು ಬಿಡಲು ಹಿಂಜರಿಯುತ್ತಿರುವ ನಿವಾಸಿಗಳು