ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ನಗರದಲ್ಲಿರುವ ಐತಿಹಾಸಿಕ ಹಜರತ್ ಹಾಸಿಂಪೀರ್ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಸೋಮವಾರ ನಗರದಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಐತಿಹಾಸಿಕ ಹಾಸಿಂಪೀರ್ ದರ್ಗಾಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಬಳಿಕ ನಗರದ ಹಜರತ್ ಹಾಶೀಂಪೀರ್ ದರ್ಗಾದ ದರ್ಗಾದ ಧರ್ಮಾದಿಕಾರಿ ಹಜರತ್ ಸಯ್ಯದ್ ಮೊಹಮ್ಮದ್ ತನ್ವಿರ್ ಹಾಶ್ಮಿ ಅವರನ್ನು ಭೇಟಿ ಮಾಡಿ, ಕೆಲಕಾಲ ಚರ್ಚೆ ನಡೆಸದಿರು. ಈ ಸಂದರ್ಭದಲ್ಲಿ ಧರ್ಮಗುರು ಹಜರತ್ ಸಯ್ಯದ್ ಮೊಹಮ್ಮದ್ ತನ್ವಿರ್ ಹಾಶ್ಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಾಸಿಂಪೀರ್ ದರ್ಗಾ ಭೇಟಿಯ ಬಳಿಕ ಸೈನಿಕ ಶಾಲೆಯ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ನಲ್ಲಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು.