Advertisement

ವಿಜಯಪುರ: 25 ಲಕ್ಷ ರೂ. ಮೌಲ್ಯದ 1 ಕ್ವಿಂಟಾಲ್ ಗಾಂಜಾ ವಶ, ಇಬ್ಬರ ಬಂಧನ

01:06 PM Mar 13, 2020 | Mithun PG |

ವಿಜಯಪುರ: ಅಬಕಾರಿ ಅಧಿಕಾರಿಗಳ ಕರಾರುವಾಕ್ ದಾಳಿಯಲ್ಲಿ ಭೀಮಾ ತೀರದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ, ಇಬ್ಬರು ಜೈಲು ಪಾಲಾಗಿದ್ದಾರೆ.

Advertisement

ಅಬಕಾರಿ ಜಂಟಿ ಆಯುಕ್ತರಾದ ಡಾ. ವೈ ಮಂಜುನಾಥ ಹಾಗೂ ಉಪ ಆಯುಕ್ತರರಾದ ಎ. ರವಿಶಂಕರ ಮಾರ್ಗದರ್ಶನ ಹಾಗೂ ಎ.ಎ. ಮುಜಾವರ ನೇತೃತ್ವದಲ್ಲಿ ಸಿಂದಗಿ ವಲಯ ಉಪ ನಿರೀಕ್ಷಕರ  ಹಾಗೂ ಸಿಬ್ಬಂದಿ ತಂಡ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಭಿಮಾ ನದಿತಿರದ ಕುಮಸಗಿ ಬಳಿ ಕಬ್ಬಿನ ಜಮೀನಿಗೆ ದಾಳಿ ನಡೆಸಿದ್ದಾರೆ.

ಬೊಮ್ಮನಹಳ್ಳಿ ರಸ್ತೆಯ ಸರ್ವೇ ನಂ. 99/3 ಹಾಗೂ 82/2 ರಲ್ಲಿವ ದತ್ತಾತ್ರೇಯ ಯಾತನೂರ, ರಾಜೇಂದ್ರ ವಾಲಿಕಾರ ಎಂಬವರಿಗೆ ಸೇರಿದ  ತೋಟದ ಮನೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದಾಗ ಅಕ್ರಮವಾಗಿ ಮಾರಾಟಕ್ಕಾಗಿ ಸಂಗ್ರಹಿಸಿದ 103 ಕೆಜಿ ಒಣಗಿದ ಗಾಂಜಾ ಸಿಕ್ಕಿದೆ.  ಈ ಆರೋಪಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ, ಇಬ್ಬರನ್ನೂ ಬಂಧಿಸಲಾಗಿದೆ.

ಆರೋಪಿಗಳ ತೋಟದ ಮನೆಗಳು ಭೀಮಾ ನದಿ ತೀರದಿಂದ ಕೇವಲ 500 ಮೀಟರ್ ಅಂತರದಲ್ಲಿದ್ದರೂ ದುರ್ಗಮ ಪ್ರದೇಶದಲ್ಲಿದೆ. ಹೀಗಾಗಿ ಈ ಪರಿಸ್ಥಿತಿಯ ದುರ್ಲಾಭ ಪಡೆದ ಆರೋಪಿಗಳು, ಕಳೆದ ಹಲವಾರು ವರ್ಷಗಳಿಂದ ಯಾರಿಗೂ ಗೊತ್ತಾಗದಂತೆ ಕಬ್ಬಿನ ಗದ್ದೆಯಲ್ಲಿ  ಗಾಂಜಾ ಬೆಳೆದು, ಮನೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next