Advertisement
ರಾಜ್ಯದಲ್ಲಿ ಈ ಹಿಂದಿನ ಮೂರು ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ಜಿಲ್ಲೆಗೆ ನೀಡಿದ್ದ ಬಹುತೇಕ ಭರವಸೆಗಳು ಈಡೇರದೇ ಘೋಷಿತ ಪಟ್ಟಿಗೆ ಸೇರಿಕೊಂಡಿವೆ. ಈ ಹಂತದಲ್ಲೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿರುತ್ತಿರುವ ಯಡಿಯೂರಪ್ಪ ಅವರು ಕೊಡುವ ಭರವಸೆಗಳೇನು, ಹಿಂದಿನ ಬಜೆಟ್‌ನಲ್ಲಿ ಘೋಷಿತ ಯೋಜನೆಗಳು ಕೈಗೂಡದೇ ಕೊಳೆಯುತ್ತಿದ್ದು, ಮುಕ್ತಿ ಪಡೆಯುತ್ತವೆಯೇ ಎಂಬ ನಿರೀಕ್ಷೆ ಹೆಚ್ಚಿದೆ.
Related Articles
Advertisement
ಪ್ರಸಕ್ತ ವರ್ಷದಿಂದ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಬೇಡಿಕೆ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಯಡಿಯೂರಪ್ಪ ಕೊಡುವ ಪ್ರಸಕ್ತ ಬಜೆಟ್‌ನಲ್ಲಿ ದ್ರಾಕ್ಷಿ ಸಿಹಿ ಅಗುವುದೋ, ಹುಳಿ ಎನಿಸುವುದೋ ಕಾದು ನೋಡಬೇಕಿದೆ. ಇನ್ನು ಪ್ರವಾಸಿಗರ ಸ್ವರ್ಗ ಎನಿಸಿದ್ದರೂ ಸೌಲಭ್ಯಗಳ ಕೊರತೆಯಿಂದ ಬಲುತ್ತಿರುವ ವಿಜಯಪುರ ಪ್ರವಾಸೋದ್ಯಮದ ಅಭ್ಯುದಯಕ್ಕೆ ಘೋಷಿತ ಯೋಜನೆಗಳು ಕೈಗೂಡಿಲ್ಲ.
10 ಕೋಟಿ ರೂ. ಘೋಷಿಸಿತ್ತು. ಅದರಲ್ಲಿ 3.50 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದರೂ ಇನ್ನೂ ಈ ಅನುದಾನ ಬಳಕೆ ಕುರಿತು ಪ್ರಸ್ತಾವನೆ ಕಳಿಸಿದ್ದೇ ಸಾಧನೆ, ಪ್ರಗತಿ ಎಂಬಂತಾಗಿದೆ. ಇನ್ನು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದ ಪ್ರವಾಸಿ ವ್ಯಾಖ್ಯಾನ ಕೇಂದ್ರ ಸ್ಥಾಪನೆ ಕನಸು ನನಸಾಗಿಲ್ಲ. ಇನ್ನು ಪ್ರವಾಸೋದ್ಯಮ ಹಾಗೂ ರಫ್ತು ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ದಶಕದ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಅಡಿಗಲ್ಲು ಹಾಕಿದ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಅದರೆ ವಾರದ ಹಿಂದೆ ರಾಜ್ಯಪಾಲರ ಭಾಷಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಚಾಲನೆ ನೀಡುವ ಭರವಸೆ ನೀಡಿದ್ದು, ಬಜೆಟ್‌ನಲ್ಲಿ ನಿರ್ಧಿಷ್ಟ ಅನುದಾನ ಘೋಷಣೆಯ ನಿರೀಕ್ಷೆ ಹುಟ್ಟು ಹಾಕಿದೆ.
ಇದರ ಹೊರತಾಗಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಬೇಡಿಕೆಗೆ ಯಾವ ಸರ್ಕಾರದ ಬಜೆಟ್‌ನಲ್ಲೂ ಸ್ಪಂದನೆ ಸಿಕ್ಕಿಲ್ಲ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎನಿಸಿರುವ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸಬಲೀಕರಣಕ್ಕೆ ಅಗತ್ಯ ಅನುದಾನ ನೀಡಬೇಕು.
ರಾಜಕೀಯ ಸಂದಿಗ್ಧತೆಯ ಕಾರಣಕ್ಕೆ ವಿಜಯಪುರ ಜಿಲ್ಲೆಗೆ ಒಂದೇ ಒಂದು ಮಂತ್ರಿ ಭಾಗ್ಯ ಕಲ್ಪಿಸದ ಯಡಿಯೂರಪ್ಪ ಅವರು, ಇದೀಗ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮದಂಥ ಪ್ರಮುಖ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡುವುದು ಅನಿವಾರ್ಯವಾಗಿದೆ.
ರೈತರ ಸಾಲ ಮನ್ನಾ ಸ್ಪಷ್ಟತೆ ಸಿಕ್ಕಿಲ್ಲ. ಸಂಪೂರ್ಣ ಸಾಲಮನ್ನಾ ಮಾಡಬೇಕು. ಎಂ.ಬಿ. ಪಾಟೀಲ ಅವರು ಚಾಲನೆ ನೀಡಿದ್ದ ನೀರಾವರಿ ಯೋಜನೆಗಳು ಕುಂಠಿತವಾಗಿದ್ದು, ನೀರಿನ ಮರು ಹಂಚಿಕೆ ಮಾಡಿ, ಆಲಮಟ್ಟಿ ಶಾಸ್ತ್ರಿ ಜಲಾಶಯದ 524 ಮೀ.ವರೆಗೆ ನೀರು ನಿಲ್ಲಿಸಲು ಅಗತ್ಯ ಇರುವ ಅನುದಾನ ನೀಡಿ, ಭೂಸ್ವಾಧೀನ ಪುನರ್ವಸತಿ ಸೇರಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುದಾನ ನೀಡಬೇಕು.ಅರವಿಂದ ಕುಲಕರ್ಣಿ,
ರಾಜ್ಯ ಪ್ರಧಾನ ಕಾರ್ಯದರ್ಶಿ
ಅಖಂಡ ಕರ್ನಾಟಕ ರೈತ ಸಂಘ ಹಿಂದುಳಿದ ಜಿಲ್ಲೆ ಎಂಬ ಅವಕೃಪೆಗೆ ಕಾರಣವಾಗಿರುವ ವಿಜಯಪುರ ಜಿಲ್ಲೆಯಲ್ಲಿ ಶ್ರಮ ಆಧಾರಿತ ಕೈಗಾರಿಕೆ ಸ್ಥಾಪನೆ ಆಗಬೇಕು. ಸರ್ಕಾರಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಆಗಬೇಕು. ತರಬೇತಿ ಪಡೆಯಲು ನಗರಕ್ಕೆ ಬರುವ ಹಳ್ಳಿ ಅಭ್ಯರ್ಥಿಗಳಿಗೆ ಕಡಿಮೆ ವೆಚ್ಚದ ಊಟ-ವಸತಿಗಾಗಿ ಸರ್ಕಾರಿ ಡಾರ್ಮೆಟರಿ ಸ್ಥಾಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಉತ್ತಮ ದರ್ಜೆಯ ಗ್ರಂಥಾಲಯ, ಕೆಪಿಎಸ್‌ಸಿ ಪರೀಕ್ಷಾ ಕೇಂದ್ರ ಶಾಸ್ವತವಾಗಿ ಸ್ಥಾಪನೆ ಆಗಲಿ.
ಸಿದ್ಧಲಿಂಗ ಬಾಗೇವಾಡಿ,
ಜಿಲ್ಲಾಧ್ಯಕ್ಷ, ಎಐಡಿವೈಒ, ವಿಜಯಪುರ ಪ್ರವಾಸೋದ್ಯಮ ಬಲವರ್ಧನೆಗೆ ಅಗತ್ಯ ಅನುದಾನ ನೀಡಿಕೆ ಜೊತೆಗೆ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುವ ಹಾಗೂ ಮೂಲಭೂತ ಸೌಲರ್ಭಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ರಾಜ್ಯದ ಎಲ್ಲ ಮಹಿಳಾ ಕಾಲೇಜುಗಳನ್ನು ಸೇರಿಸಿ ಅಗತ್ಯ ಅನುದಾನ ನೀಡಬೇಕು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಅನುದಾನ ಘೋಷಿಸಬೇಕು.
ಶ್ರೀನಾಥ ಪೂಜಾರಿ,
ರಾಜ್ಯಾಧ್ಯಕ್ಷ, ದಲಿತ ವಿದ್ಯಾರ್ಥಿ ಪರಿಷತ್ ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿದ್ದು ಯುಕೆಪಿ ಯೋಜನೆಗಳ ಸಂಪೂರ್ಣ ಮಾಡಲು ಅಗತ್ಯ ಅನುದಾನ ನೀಡಬೇಕು. ನಿರುದ್ಯೋಗ ಸಮಸ್ಯೆ ಹೆಚ್ಚಿರುವ ಕಾರಣ ಜಿಲ್ಲೆಯಿಂದ ಗುಳೆ ತಡೆಯಲು ಮಾನವ ಸಂಪನ್ಮೂಲ ಆಧಾರಿತ ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು.
ಲಕ್ಷ್ಮಣ ಹಂದ್ರಾಳ,
ಪ್ರಧಾನ ಕಾರ್ಯದರ್ಶಿ,
ಸಿಐಟಿಯು, ವಿಜಯಪುರ ಜಿಲ್ಲೆ ಜಿ.ಎಸ್. ಕಮತರ