Advertisement

ವಿಜಯಪುರ ಸ್ಫೋಟಕ ದುರಂತ ಪ್ರಕರಣ : ಅನಧಿಕೃತ ಗಣಿಗಾರಿಕೆ, ಅಕ್ರಮ ಸ್ಫೋಟಕ ಬಳಕೆ ಬಹಿರಂಗ

06:35 PM Jul 09, 2021 | Team Udayavani |

ವಿಜಯಪುರ: ನಗರದ ಹೊರ ವಲಯದ ಗುರುವಾರ ಸಂಜೆ ಕಲ್ಲು ಗಣಿ ಪ್ರದೇಶದಲ್ಲಿ ಸಂಭವಿಸಿದ್ದ ಸ್ಫೋಟಕ ದುರಂತದ ತನಿಖೆ ಆರಂಭಗೊಂಡಿದೆ.

Advertisement

ಐನಾಪುರ ಗ್ರಾಮದ ರಮೇಶ ಮಹಾದೇವ ಕವಟಗಿ ಎಂಬವರ ಸರ್ವೇ ನಂಬರ್ 143/1R ಜಮೀನಿನಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆದಿದೆ. ಅನಧಿಕೃತ ಗಣಿಗಾರಿಕೆ ಪ್ರದೇಶದಲ್ಲಿ ಅಕ್ರಮವಾಗಿ ಸ್ಫೋಟಕ ಬಳಕೆ ಖಚಿತವಾಗಿದೆ. ಪರಿಣಾಮವೇ ಗುರುವಾರ ನಡೆಸಿದ ಸ್ಫೋಟಕ ಕೃತ್ಯದಲ್ಲಿ ಮೋಹನ‌ ನಾಯಿಕ್ ಎಂಬ ಯುವಕ ಮೃತಪಟ್ಟಿದ್ದ. ಅಲ್ಲದೇ ಸಚಿನ್ ಹಾಗೂ ಶ್ರವಣಕುಮಾರ ಎಂಬವರು ಗಂಭೀರ ಗಾಯಗೊಂಡಿದ್ದರು.

ಘಟನೆಯ ಬಳಿಕ ಜಿಲ್ಲಾಧಿಕಾರಿ ಸುನಿಲಕುಮಾರ ಆದೇಶದ ಮೇರೆಗೆ ಗಣಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಟ ಜಂಟಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ವರ್ಷದ ಹಿಂದೆ ಬಾಲ ಮಂದಿರದಿಂದ ನಾಪತ್ತೆಯಾದ ಬಾಲಕಿ : ಪ್ರಕರಣದ ಬೆನ್ನುಬಿದ್ದ ಪೊಲೀಸರು

ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಲ್ಲಿ ಅಶೋಕ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಅನಧಿಕೃತ ಗಣಿಗಾರಿಕೆಗೆ ಅವಕಾಶ ನೀಡಿದ ಜಮೀನಿನ‌ ಮಾಲೀಕ ರಮೇಶ ವಿರುದ್ದವೂ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಗಣಿ-ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಡೀ ಪ್ರಕರಣದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಜಂಟಿ ಪರಿಶೀಲನೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next