Advertisement
ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೀದಿಗೆ ಇಳಿದಿದ್ದ ಜನರೊಂದಿಗೆ ನಿತ್ಯವೂ ಹೊತ್ತಿನ ತುತ್ತಿಗೆ ಪರದಾಡುವ ಸಣ್ಣ ಹಾಗೂ ದೊಡ್ಡ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬೆಳಗ್ಗೆಯಿಂದ ಸಂಜೆವರೆಗೂ ಬೆಂಬಲ ನೀಡುವ ಮೂಲಕ ಐತಿಹಾಸಿಕ ಬಂದ್ ಎಂಬ ಹಿರಿಮೆ ನೀಡಲು ಸಹಕಾರ ನೀಡಿದರು. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಶನಿವಾರ ಬೆಳಗ್ಗೆಯಿಂದಲೇ ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ, ಗಲ್ಲಿ-ಗಲ್ಲಿಗಳು ವಾಹನ-ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು. ಬಸ್ ಸಂಚಾರ ಇಲ್ಲದೇ ಪರಸ್ಥಳದಿಂದ ಬಂದಿದ್ದ ಜನರು ಪರದಾಡಿದರೆ, ನಗರ ಸಂಚಾರಕ್ಕೆ ನಗರ ಸಾರಿಗೆ, ಆಟೋ ಸೇರಿ ಯಾವುದೇ ಸಂಚಾರ ಸೇವೆಯೂ ಲಭ್ಯವಿರಲಿಲ್ಲ.
ಬಂದ್ ಸಮಯದಲ್ಲಿ ಒಂದು ಬಸ್ ಹಾಗೂ ಕಾರಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಇಂಡಿ ಪಟ್ಟಣದಿಂದ ವಿಜಯಪುರ ಮಾರ್ಗವಾಗಿ ಬಳ್ಳಾರಿಗೆ ಹೊರಟಿದ್ದ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್‌ಗೆ ಕಲ್ಲು ತೂರಿದ ಕಾರಣ ಮುಂಭಾಗದ ಗಾಜು ಒಡೆದಿದ್ದರೆ, ಬಸ್‌ಗೆ ಬೆಂಕಿ ಹಚ್ಚುವ ಕಿಡಿಗೇಡಿಗಳ ಕೃತ್ಯವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಬಸವೇಶ್ವರ ವೃತ್ತದಲ್ಲಿ ಸಾಗುತ್ತಿದ್ದ ಒಂದು ಕಾರಿಗೆ ಕಲ್ಲು ತೂರಿದ
ಘಟನೆಯೂ ಜರುಗಿದೆ.