Advertisement

ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಪಾಲಕರು ಮಾಡಲಿ: ಸುಮಂಗಲಾ

07:19 PM Apr 19, 2021 | Shreeraj Acharya |

ತಾಳಿಕೋಟೆ: ಚಿಕ್ಕ ಮಕ್ಕಳಿರುವಾಗಲೇ ಮಕ್ಕಳ ಅಪೇಕ್ಷೆಗೆ ತಕ್ಕಂತೆ ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಮುಂದಿನ ಜೀವನ ಸಾರ್ಥಕವಾಗಲಿದೆ ಎಂದು ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಸುಮಂಗಲಾ ಹಿರೇಮನಿ ಹೇಳಿದರು. ರವಿವಾರ ಸ್ಥಳೀಯ ವಿರಕ್ತೇಶ್ವರ ಭರತ ನಾಟ್ಯ ತರಬೇತಿ ಸಂಸ್ಥೆ ವತಿಯಿಂದ ವಿಠಲ ಮಂದಿರದಲ್ಲಿ ಏರ್ಪಡಿಸಿದ್ದ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೀಡಿದ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಭರತನಾಟ್ಯ ಮಹತ್ವದ ಕಲೆಯಾಗಿದೆ. ಅಂತಹ ಕಲೆಯನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ 3 ತಿಂಗಳ ಪರ್ಯಂತ ತರಬೇತಿ ನೀಡಿದ ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಅವರ ಸೇವೆ ಅನನ್ಯ ಎಂದರು. ಸನ್ಮಾನ ಸ್ವೀಕರಿಸಿ ಗಾನಸಿರಿ ಪ್ರಶಸ್ತಿ ಪಡೆದ ಗವಾಯಿ ಬಸವರಾಜ ಭಂಟನೂರ ಮಾತನಾಡಿ, ಭರತನಾಟ್ಯವೆಂಬುದು ಖಾಸತೇಶ್ವರರ ಕಾಲದಿಂದಲೂ ತಾಳಿಕೋಟೆಯಲ್ಲಿ ಹೊರ ಹೊಮ್ಮಿದೆ. ಯಾವುದೇ ಮಹತ್ವವಾದ ಕಲೆಯನ್ನು ಗುರುತಿಸಿಕೊಂಡು ಮುನ್ನಡೆದರೆ ಅದರಲ್ಲಿ ಯಶಸ್ವಿ ಕಾಣಬಹುದೆಂದು ಸಂಗೀತ ಕಲೆಯಲ್ಲಿ ತಾವು ಪರಿಣಿತರಾಗಿದ್ದರ ಕುರಿತು ಅದರಲ್ಲಿ ತಾವಿಟ್ಟ ಆಸಕ್ತಿ, ಗುರುಭಕ್ತಿ ಕುರಿತು ವಿವರಿಸಿ ಭರತನಾಟ್ಯ ತರಬೇತಿ ಸಂಸ್ಥೆ ಹುಟ್ಟು ಹಾಕಿದ ವಿನೋದ ಚಿಕ್ಕಮಠ ಅವರ ಸೇವಾ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿ, ಭರತನಾಟ್ಯ ಸ್ವದೇಶಿಯ ಕಲೆಯಾಗಿದೆ. ವಿದೇಶಿಯ ಕಲೆಯಲ್ಲ, ಇಂತಹ ಕಲೆಯಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಮಕ್ಕಳಲ್ಲಿ ಚೈತನ್ಯ ಹೆಚ್ಚಾಗುತ್ತದೆ ಎಂದು ಹೇಳಿದರು. ಇದೇ ಸಮಯದಲ್ಲಿ ಭರತನಾಟ್ಯ ಕಲಾವಿದೆ ವಿಜಯಪುರದ ಅಂಜನಾ ವೀರಣ್ಣ ಮಾರ್ಕಂಡೆ ಹಾಗೂ ನಾಟ್ಯ ಸಿರಿ ಪ್ರಶಸ್ತಿ ಪಡೆದ ಪೃಥ್ವಿ ಹೆಗಡೆ ಹಾಗೂ 3 ತಿಂಗಳು ಉಚಿತ ತರಬೇತಿ ಪಡೆದ ವಿದ್ಯಾರ್ಥಿನಿಯರು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಖಾಸYತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ ಸಾನ್ನಿಧ್ಯ, ಪುರಸಭೆ ಸದಸ್ಯ ವಾಸುದೇವ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಅಧ್ಯಕ್ಷ ರಾಜುಗೌಡ ಕೊಳೂರ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ವಿಜಯಪುರ ಮಕ್ಕಳ ರಕ್ಷಣಾ ಅಧಿ ಕಾರಿ ವಾಣಿಶ್ರೀ ನಿಂಬಾಳ, ಪುರಸಭೆ ಸದಸ್ಯರಾದ ಜೈಸಿಂಗ್‌ ಮೂಲಿಮನಿ, ಮಾಜಿ ಸದಸ್ಯ ವಿಜಯಸಿಂಗ್‌ ಹಜೇರಿ, ಶಿಕ್ಷಕ ಶರಣಬಸಪ್ಪ ಗಡೇದ, ಶಿವಶಂಕರ ಹಿರೇಮಠ, ಸಂಸ್ಥೆ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ ಇದ್ದರು. ಎ.ಎಸ್‌. ವಠಾರ ಸಂಗೀತ ಶಾಲೆ ಶಿಕ್ಷಕ ದೀಪಕಸಿಂಗ್‌ ಹಜೇರಿ, ಗೋವಿಂದಸಿಂಗ್‌ ಹಜೇರಿ, ಕಾಶಿನಾಥ ಕಾರಗನೂರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಭೀಮು ಚವನಭಾವಿ ಸ್ವಾಗತಿಸಿದರು. ಎ.ಎಸ್‌. ಹಿರೇಮಠ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next