Advertisement

ಡಾ|ಅಂಬೇಡ್ಕರ್‌ ಬದುಕು ಅನುಕರಣೀಯ

07:14 PM Apr 19, 2021 | Shreeraj Acharya |

ಮುದ್ದೇಬಿಹಾಳ: ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಜೀವನ ಭಾರತಕ್ಕೆ, ಭಾರತದಲ್ಲಿರುವ ತುಳಿತಕ್ಕೊಳಗಾದವರ ಏಳ್ಗೆಗೆ ಮೀಸಲಾಗಿತ್ತು. ಶೋಷಿತರ, ದೀನ ದಲಿತರ, ದಮನಿತರ ಬಗ್ಗೆ ಚಿಂತನೆ ಅವರಲ್ಲಿತ್ತು. ಹತ್ತಾರು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಈ ದೇಶದ ಸಂಸ್ಕೃತಿ, ಜಾತಿ ವ್ಯವಸ್ಥೆಗೆ ಪೂರಕವಾದ ಸಂವಿಧಾನ ನೀಡಿದ್ದಾರೆ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವಪುತ್ರ ಅಜಮನಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದಲ್ಲಿ ರವಿವಾರ ಏರ್ಪಡಿಸಿದ್ದ ಡಾ| ಅಂಬೇಡ್ಕರ್‌ ಅವರ 130ನೇ ಜಯಂತ್ಯುತ್ಸವ, ನವೀಕೃತ ಅಂಬೇಡ್ಕರ್‌ ವೃತ್ತ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್‌ ಓದಿರುವಷ್ಟು ಪುಸ್ತಕಗಳನ್ನು ಜಗತ್ತಿನ ಯಾವೊಬ್ಬ ಜ್ಞಾನಿಯೂ ಓದಿಲ್ಲ. ಇದಕ್ಕಾಗಿಯೇ ಅಮೆರಿಕದ ಸಂಸತ್ತಿನಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರ ಹಾಕಿದ್ದಾರೆ. ಬ್ರಿಟನ್‌ನಲ್ಲಿ ರಸ್ತೆಯೊಂದಕ್ಕೆ ಅಂಬೇಡ್ಕರ್‌ ಹೆಸರಿಟ್ಟಿದ್ದಾರೆ.

ಆದರೆ ಭಾರತದಲ್ಲೇ ಅವರಿಗೆ ಮನ್ನಣೆ ಸಿಗದಿರುವುದು, ಅವರು ಬರೆದ ಸಂವಿಧಾನ ಮರೆ ಮಾಚುವ ಪ್ರಯತ್ನ ನಡೆದಿರುವುದು ವಿಷಾಧಪಡುವಂಥದ್ದು ಎಂದರು. ತಹಶೀಲ್ದಾರ್‌ ಕಚೇರಿ ಚುನಾವಣಾ ವಿಭಾಗದ ಅಧಿ ಕಾರಿ ವೆಂಕಟೇಶ ಅಂಬಿಗೇರ, ಎಂಜಿವಿಸಿ ಕಾಲೇಜಿನ ಹಿರಿಯ ಉಪನ್ಯಾಸಕ ಡಾ| ಪಿ.ಎಚ್‌. ಉಪ್ಪಲದಿನ್ನಿ, ಅಧ್ಯಕ್ಷತೆ ವಹಿಸಿದ್ದ ಮುದ್ದೇಬಿಹಾಳ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ರೇವಣೆಪ್ಪ ಹರಿಜನ, ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಇಬ್ರಾಹಿಂಪುರ, ಆರ್‌.ಎನ್‌. ಕಟ್ಟಿಮನಿ ಮಾತನಾಡಿ, ಅಂಬೇಡ್ಕರ್‌ ಅವರ ನೀತಿ, ನಿರೂಪಣೆಗಳು ಬುದ್ಧ, ಬಸವಣ್ಣನ ತತ್ವಗಳನ್ನು ಹೋಲುತ್ತವೆ. ದೇಶ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದರು.

ಪಿಡಿಒ ಆನಂದ ಹಿರೇಮಠ, ಗಣ್ಯರಾದ ಬಿ.ಎಸ್‌. ದೇವೂರ, ಪರಶುರಾಮ ಚಲವಾದಿ, ವೈ.ಟಿ. ಚಲವಾದಿ, ಶರಣಬಸು ಚಲವಾದಿ ನೇಬಗೇರಿ ಸೇರಿ ಹಲವರು ವೇದಿಕೆಯಲ್ಲಿದ್ದರು. ಈಶಪ್ಪ ಇಲಕಲ್‌, ಕರಿಯಪ್ಪ ಕಟ್ಟಿಮನಿ, ಚಂದಪ್ಪ ಮಾದರ, ಏಕನಾಥ ಚಲವಾದಿ, ಬಸಲಿಂಗಯ್ಯ ಹಿರೇಮಠ, ರಾಜೇಸಾಬ ದೊಡಮನಿ, ಯಲ್ಲಪ್ಪ ಜಳಕಿ, ರಮೇಶ ಗೊಳಸಂಗಿ, ಮುತ್ತಣ್ಣ ಕಟ್ಟಿಮನಿ, ತಿಪ್ಪಣ್ಣ ಜಳಕಿ, ಎಸ್‌.ಬಿ. ಬಿರಾದಾರ, ಶಂಕ್ರಪ್ಪ ಚಲವಾದಿ, ರುದ್ರಗೌಡ ಪಾಟೀಲ, ಸಿದ್ದಪ್ಪ ಚವರಿ, ರೇವಣೆಪ್ಪ ಚವರಿ, ಏಕನಾಥ ಚಲವಾದಿ, ಗ್ರಾಪಂ ಕಾರ್ಯದರ್ಶಿ ರಂಗರಾಜು ಇದ್ದರು.

ನಿವೃತ್ತ ಸರ್ಕಾರಿ ನೌಕರರಾದ ಕೆ.ಎಂ. ಇಬ್ರಾಹಿಂಪುರ, ಬಿ.ಎಚ್‌.ಯರಝರಿ, ಪಿ.ಎ.ಯರಝರಿ, ಕೆ.ಬಿ.ದೊಡಮನಿ, ಆರ್‌. ಎನ್‌.ಕಟ್ಟಿಮನಿ, ಗ್ರಾಪಂ ಸದಸ್ಯರಾದ ಎಚ್‌. ಎನ್‌.ಹುಗ್ಗಿ, ಶೈಲಾ ಚವರಿ, ಪೀರವ್ವ ಮಾದರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ| ಅಂಬೇಡ್ಕರ್‌ ನವೀಕೃತ ವೃತ್ತವನ್ನು ಉದ್ಘಾಟಿಸಲಾಯಿತು. ಗಣ್ಯರು ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕ ಪರಶುರಾಮ ದೇವೂರ ನಿರೂಪಿಸಿದರು. ಶಿಕ್ಷಕ ವೈ.ಟಿ. ಚಲವಾದಿ ವಂದಿಸಿದರು. ಕಾರ್ಯಕ್ರಮದ ನಂತರ ಸಂಜೆ ಡಾ| ಅಂಬೇಡ್ಕರ್‌ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next