Advertisement

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

08:48 AM May 03, 2024 | Team Udayavani |

ವಿಜಯಪುರ : ಬಸ್ ಪ್ರಯಾಣದ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಸೀಟ್ ವಿಷಯವಾಗಿ ಕಿತ್ತಾಟ ಆರಂಭಿಸಿದ್ದು, ಗಲಾಟೆ ತಾರಕಕ್ಕೇರಿದ್ದರಿಂದ ಚಾಲಕ ರಸ್ತೆಯಲ್ಲೇ ಬಸ್ ನಿಲ್ಲಿಸಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ವಿಜಯಪುರ ನಗರದಿಂದ ಜಮಖಂಡಿ ಕಡೆಗೆ ಹೊರಟಿದ್ದ ಬಸ್ ನಲ್ಲಿ ಇಬ್ಬರು ಮಹಿಳೆಯರು ಸೀಟ್ ವಿಷಯವಾಗಿ ಕಿತ್ತಾಡಿಕೊಂಡಿದ್ದಾರೆ. ಇದರಿಂದ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್‌ ಕೊಡಲು ಹಾಗೂ ಚಾಲಕ ವಾಹನ ಚಲಾಯಿಸಲು ಸಮಸ್ಯೆಯಾಗಿದೆ.

ಚಾಲಕ, ನಿರ್ವಾಹಕರು ಮಾತ್ರವಲ್ಲದೇ ಸಹ ಪ್ರಯಾಣಿಕರು ಇಬ್ಬರೂ ಮಹಿಳೆಯರ ಜಗಳ ಬಿಡಿಸಲು ಯತ್ನಿಸಿದರೂ ಮಹಿಳೆಯರ ಜಗಳ ಬಗೆಹರಿದಿಲ್ಲ. ಈ ಪರಿಣಾಮ ಚಾಲಕ ನಗರದ ಹೊರ ವಲಯದಲ್ಲಿ ಬಸ್ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next