ವಿಜಯಪುರ: 10 ತಿಂಗಳ ಹಿಂದೆ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿದ್ದರೂ ಬಿಲ್ ಪಾವತಿಸದ ಕಾರಣ ಆಕ್ರೋಶಗೊಂಡ ರೈತರು ವಿಷದ ಬಾಟಲಿ ಪ್ರದರ್ಶಿಸಿ ಆತ್ಮಹತ್ಯೆ ಬೆದರಿಕೆ ಹಾಕಿದರು ಸಿಂದಗಿ ತಾಲೂಕಿನ ಚಟ್ಟರಕಿ, ಹಚ್ಯಾಳ ಭಾಗದ ತೊಗರಿ ಬೆಳೆಗಾರರು ಬುಧವಾರ ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ತಮಟೆ ಬಾರಿಸುತ್ತ ಬಾಯಿ ಬಡಿದುಕೊಂಡರು.
ತೊಗರಿಗೆ ಕೂಡಲೇ ಬಿಲ್ ಪಾವತಿಸುವಂತೆ ಆಗ್ರಹಿಸಿ ಉಪವಾಸ ಆರಂಭಿಸಿದರು. 98 ರೈತರು ತಲಾ 20 ಕ್ವಿಂಟಲ್
ತೊಗರಿಯನ್ನು ಕಳೆದ ಜನವರಿ 25ರಂದೇ ಖರೀದಿ ಕೇಂದ್ರಕ್ಕೆ ನೀಡಿದ್ದೇವೆ. ಆದರೆ, ಅಧಿಕಾರಿಗಳು ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡದೇ ಭ್ರಷ್ಟಾಚಾರ ಎಸಗಿದ್ದಾರೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಕೌಟುಂಬಿಕ ನಿರ್ವಹಣೆ ಕಷ್ಟವಾಗಿದೆ.
ಮಕ್ಕಳ ಶಿಕ್ಷಣ ಹಾಗೂ ಇತರ ಕಾರ್ಯಗಳಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದರೂ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಮತ್ತು ಎಸ್ಪಿ ಸಂಬಂಧಿಸಿದ ಅ ಧಿಕಾರಿಗಳೊಂದಿಗೆ ಮೊಬೈಲ್ ಮೂಲಕ ಮಾತನಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ, ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.