Advertisement

ಸಿಎಂ ಆಗಲು ಪಂಚಮಸಾಲಿ ಮೂರನೇ ಪೀಠ : ನಿರಾಣಿ ವಿರುದ್ಧ ಕಾಶಪ್ಪನವರ್ ಕಿಡಿ

03:53 PM Jan 22, 2022 | Team Udayavani |

ಬೆಂಗಳೂರು : ಪಂಚಮಸಾಲಿ ಸಮುದಾಯದ ಮೂರನೇ ಗುರುಪೀಠ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿ ಸಚಿವ ಮುರುಗೇಶ್ ನಿರಾಣಿಯವರ ವಿರುದ್ಧ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್ ಶನಿವಾರ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ್, 2008 ರಿಂದ ನಮ್ಮ‌ಜಗದ್ಗುರುಗಳು ಇದ್ದಾರೆ. ಜಯಮೃತ್ಯುಂಜಯ‌ಶ್ರೀಗಳು ಇದ್ದಾರೆ, ಸಮುದಾಯ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. 2-ಎ ಮೀಸಲಾತಿಗಾಗಿ ಹೋರಾಡ ಮಾಡುತ್ತಿದ್ದಾರೆ. ಸಮಾಜಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದಾರೆ ಎಂದರು.

ನಿರಾಣಿ ಸ್ವಾರ್ಥಕ್ಕಾಗಿ ಸಮಾಜ ಬಳಕೆ ಮಾಡಿಕೊಳ್ಳುತ್ತಿದ್ದು, ಮೂರನೇ ಪೀಠ ಮಾಡಲು‌ ಹೊರಟಿದ್ದಾರೆ. ಪಂಚಮಸಾಲಿ ಸಮಾಜದಲ್ಲಿ ಯಾವುದೇ ಒಡಕಿಲ್ಲ,ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಈಗಾಗಲೇ ಮೀಸಲಾತಿಗಾಗಿ ಪಾದಯಾತ್ರೆ ನಡೆದಿದೆ. ವಚನಾನಂದ ಶ್ರೀಗಳು ಅದಕ್ಕೆ ಬಂದು ಹೋದರು. ಮೂರನೇ ಪೀಠಕ್ಕೆ ಇಬ್ಬರು ಶ್ರೀ ಸಮ್ಮತಿ ಇದೆ ಎಂದಿದ್ದಾರೆ, ಆದರೆ ಮೂರನೇ ಪೀಠ ನಿರಾಣಿಯವರದ್ದು, ಅವರನ್ನ ಮಂತ್ರಿ ಮಂಡಲದಿಂದ ಕೈಬಿಡುತ್ತಿದ್ದಾರೆ. ಇವರು ಸಚಿವರಾಗೋಕೆ ಜಯಮೃತ್ಯುಂಜಯ ಶ್ರೀಗಳು ಬೇಕು, ವಚನಾನಂದ ಶ್ರೀಗಳು ಬೇಕು. ಅದರೆ ಈಗ ಅವರ ವಿರುದ್ಧವೇ ಹೊರಟಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳೋಕೆ ಪೀಠ ಮಾಡುತ್ತಿದ್ದಾರೆ. ಮುಂದಿನ ರಾಜಕೀಯ ಭವಿಷ್ಯ ಉಳಿವಿಗೆ ಈ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಸಮಾಜ ಮೊದಲು ಎಲ್ಲಿತ್ತು, ಸಮಾಜ ಕಟ್ಟಿದವರು ಯಾರು? ಸಮಾಜ ಕಟ್ಟಿದವರು ಮೊದಲು ನಮ್ಮ ತಂದೆ ಕಾಶಪ್ಪನವರು. ಇವರು ಸ್ವಾರ್ಥಕ್ಕಾಗಿ ಪೀಠ ಬಳಸಿಕೊಳ್ಳುತ್ತಿದ್ದಾರೆ. ಮೊದಲು ಕೂಡಲಸಂಗಮ ಪೀಠ ಬಳಸಿಕೊಂಡರು.ನಂತರ ವಚನಾನಂದರನ್ನು ತಂದರು. ಹರಿಹರದಲ್ಲಿ ಸಂಘ ಕಟ್ಟಿದ್ದು ನಮ್ಮ ತಂದೆಯವರು. ಅಲ್ಲಿ ಹಣ ಹೊಡೆಯೋಕೆ ಅದನ್ನ ಬಳಸಿಕೊಂಡಿದ್ದು,ಈಗ ನಿರಾಣಿ ಸಿಎಂ ಆಗಬೇಕೆಂಬ ಕಾರಣಕ್ಕೆ ಪೀಠ ಕಟ್ಟುತ್ತಿದ್ದಾರೆ, ಅವರ ಸಹೋದರನ್ನ ಮಂತ್ರಿ ಮಾಡಬೇಕು ಅದಕ್ಕಾಗಿಯೇ ನಿರಾಣಿ ಒದ್ದಾಡುತ್ತಿದ್ದಾರೆ ಎಂದರು.

ಸಮಾಜಕ್ಕೆ ನಿರಾಣಿ ಕೊಡುಗೆಯೇನು? ವೈಯುಕ್ತಿಕ ಸ್ವಾರ್ಥಕ್ಕಾಗಿ ಈ ಪ್ರಯತ್ನ ಮಾಡುತ್ತಿದ್ದು, ತಮಗೆ ಬೇಕಾದಂತೆ ಸಮಾಜ ಬಳಸಿಕೊಳ್ತಾರೆ. ಸಮಾಜ ಅವರ ಹಿಂದೆ ಇಲ್ಲ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next