Advertisement

ಇಂದು ವಿಜಯಾನಂದ ಆಡಿಯೋ ಬಿಡುಗಡೆ

05:20 PM Nov 06, 2022 | Team Udayavani |

ಉದ್ಯಮಿ ಡಾ. ವಿಜಯ ಸಂಕೇಶ್ವರರ ಜೀವನಾಧಾರಿತ “ವಿಜಯಾನಂದ’ ಚಿತ್ರದ ಆಡಿಯೋ ಇಂದು ಬಿಡುಗಡೆಯಾಗಲಿದೆ. “ಹಾಗೆ ಆದ ಆಲಿಂಗನ…’ ಎಂದು ಸಾಗುವ ರೊಮ್ಯಾಂಟಿಕ್‌ ಸಾಂಗ್‌ ಇದಾಗಿದ್ದು, ನಾಯಕ ನಿಹಾಲ್‌ ಮತ್ತು ನಾಯಕಿ ಸಿರಿ ಪ್ರಹ್ಲಾದ್‌ ನಟಿಸಿದ್ದಾರೆ.

Advertisement

ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ, ಹಳೇಬೀಡು, ಬೇಲೂರು ಸೇರಿದಂತೆ 10ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್‌ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಧನಂಜಯ್‌ ರಂಜನ್‌ ಸಾಹಿತ್ಯ ರಚಿಸಿದ್ದಾರೆ. ಒರಾಯನ್‌ ಮಾಲ್‌ನಲ್ಲಿ ನಡೆಯಲಿರುವ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಿ ಸುಂದರ್‌ ಹಾಡಿನ ಪ್ರದರ್ಶನ ನೀಡಲಿದ್ದಾರೆ.

ಶರಣ್‌, ಹರ್ಷಿಕಾ ಪೂಣಚ್ಚ ಸೇರಿದಂತೆ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಪದ್ಮಶ್ರೀ ಡಾ. ವಿಜಯ ಸಂಕೇಶ್ವರರ ಬಯೋಪಿಕ್‌ಅನ್ನು ವಿಆರ್‌ಎಲ್‌ ಫಿಲಂ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿದ್ದು, ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next