Advertisement

‘ವಿಜಯಾನಂದ’ ಟೀಸರ್ ಗೆ ಮೆಚ್ಚುಗೆ

03:36 PM Aug 04, 2022 | Team Udayavani |

ಸಾರಿಗೆ ಮತ್ತು ಪತ್ರಿಕೋದ್ಯಮಿ ವಿಜಯ ಸಂಕೇಶ್ವರ್‌ ಅವರ ಜೀವನ ಕಥೆ ಆಧಾರಿತ “ವಿಜಯಾನಂದ’ ಸಿನಿಮಾದ ಮೊದಲ ಟೀಸರ್‌ ಬಿಡುಗಡೆಯಾಗಿದೆ.

Advertisement

“ವಿಜಯಾನಂದ’ ಕನ್ನಡ ಚಿತ್ರರಂಗದ ಮೊದಲ ಅಫೀಷಿಯಲ್‌ ಮತ್ತು ಕಮರ್ಷಿಯಲ್‌ ಜೀವನಚರಿತ್ರೆ ಸಿನಿಮಾವಾಗಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಿಗೂ ಸಿನಿಮಾ ಡಬ್‌ ಆಗಿ ತೆರೆಗೆ ಬರಲಿದೆ.

1976ರಲ್ಲಿ ಒಂದೇ ಟ್ರಕ್‌ನೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಇಂದು ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್‌ ಕಂಪನಿಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಜೀವನ ಮತ್ತು ಸಾಧನೆಯನ್ನು “ವಿಜಯಾನಂದ’ ಸಿನಿಮಾದ ಮೂಲಕ ತೆರೆಮೇಲೆ ಹೇಳಲಾಗುತ್ತಿದ್ದು, “ವಿಆರ್‌ ಎಲ್‌ ಫಿಲಂ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಆನಂದ ಸಂಕೇಶ್ವರ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಟ್ರಂಕ್‌’ ಎಂಬ ಹಾರರ್‌ -ಥ್ರಿಲ್ಲರ್‌ ಸಿನಿಮಾಗೆ ಆಕ್ಷನ್‌-ಕಟ್‌ ಹೇಳಿದ್ದ ರಿಷಿಕಾ ಶರ್ಮಾ “ವಿಜಯಾನಂದ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸಿನಿಮಾದಲ್ಲಿ ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್‌ ನಾಯಕ ನಟನಾಗಿ ಕಾಣಿಸಿಕೊಂಡಿದ್ದು ಉಳಿದಂತೆ ಅನಂತ ನಾಗ್‌, ವಿನಯಾ ಪ್ರಸಾದ್‌, ರವಿಚಂದ್ರನ್‌, ಪ್ರಕಾಶ್‌ ಬೆಳವಾಡಿ, ಅನೀಶ್‌ ಕುರುವಿಲ್ಲಾ, ಸಿರಿ ಪ್ರಹ್ಲಾದ್‌ ಮತ್ತು ಭರತ್‌ ಬೋಪಣ್ಣ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ವಿಜಯಾನಂದ’ ಸಿನಿಮಾ ಕೀರ್ತನ್‌ ಪೂಜಾರಿ ಛಾಯಾಗ್ರಹಣ, ಹೇಮಂತ್‌ ಕುಮಾರ್‌ ಡಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಗೋಪಿ ಸುಂದರ್‌ ಸಂಗೀತ ಸಂಯೋಜನೆಯಿದೆ. ಸದ್ಯ ಬಿಡುಗಡೆಯಾಗಿರುವ “ವಿಜಯಾನಂದ’ ಸಿನಿಮಾದ ಮೊದಲ ಟೀಸರ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next