Advertisement

ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ

06:34 PM Jan 15, 2025 | Team Udayavani |

ಬಳ್ಳಾರಿ: ಮೀಟರ್ ಬಡ್ಡಿ ದಂಧೆಗೆ ಮನನೊಂದು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಯ ಹೊರಗುತ್ತಿಗೆ ನೌಕರ ಬಾಲಚಂದ್ರ ಸಾವಿನ ಪ್ರಕರಣ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Advertisement

ವಿವಿಯ ಪ್ರೊ.ಮೋಹನದಾಸ್ ಹಾಗೂ ಮೇರಿ ಎನ್ನುವವರು ತಮಗೆ ಹಣ ನೀಡುವಂತೆ ಕಿರುಕುಳ ನೀಡಿದ್ದರು ಎಂದು ಡೆತ್‌ನೋಟ್ ಬರೆದಿಟ್ಟಿದ್ದ ವಿವಿಯ ಗ್ರಂಥಾಲಯದ ಅಟೆಂಡರ್ ಬಾಲಚಂದ್ರ ಇತ್ತೀಚಗೆ ಕಲಬುರಗಿ ರೈಲ್ವೇ ಸ್ಟೇಷನ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ವಾಡಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರಣಿ ರಜೆ ಹಿನ್ನೆಲೆಯಲ್ಲಿ ತನಿಖೆ ವಿಳಂಭವಾಗಿತ್ತು. ಬುಧವಾರ ಬಳ್ಳಾರಿಯ ವಿಎಸ್‌ಕೆ ವಿವಿಗೆ ಆಗಮಿಸಿದ ವಾಡಿ ಪೊಲೀಸರು ಕುಲಪತಿ ಪ್ರೊ.ಮುನಿರಾಜು, ಕುಲಸಚಿವ ಪ್ರೊ.ರುದ್ರೇಶ ಅವರಿಗೆ ಎಫ್‌ಐಆರ್ ಪ್ರತಿಯನ್ನು ನೀಡಿ ವಿಚಾರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಆರೋಪಿಗಳು ಆಗಿರುವ ಪ್ರೊ.ಮೋಹನದಾಸ್ ಹಾಗೂ ಮೇರಿ ಎನ್ನುವವರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರು ಆಗುವಂತೆ ಸೂಚನೆ ನೀಡಿದ್ದಾರೆ.

ಅಟೆಂಡರ್ ಬಾಲಚಂದ್ರ ಅವರ ಸಾವಿನಿಂದಾಗಿ ಬಳ್ಳಾರಿ ವಿಎಸ್‌ಕೆ ವಿವಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿರುವ ಅಂಶ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!

Advertisement

Udayavani is now on Telegram. Click here to join our channel and stay updated with the latest news.