ಗೌರಿಬಿದನೂರು: ಗ್ರಾಪಂಗಳ ಅಧಿಕಾರವು ಪಾವಿತ್ರ್ಯ ಹೊಂದಿದ್ದು, ಸಮರ್ಪಕ ನಿರ್ವಹಣೆ ಮಾಡುವ ಮೂಲಕ ಉತ್ತಮ ಸೇವೆ ಸಲ್ಲಿಸಬೇಕು ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ಹುದುಗೂರು ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯಲಕ್ಷ್ಮೀ ಹಾಗೂ ಉಪಾಧ್ಯಕ್ಷ ಬಾಲಪ್ಪ ಅವರನ್ನು ಅಭಿನಂದಿಸಿ ಮಾತನಾಡಿ, ತಾಲೂಕಿನಲ್ಲಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಮುಖಂಡರು ಸಾಕಷ್ಟು ಶ್ರಮಿಸಿದ್ದರಿಂಹೆಚ್ಚಿನ ಪಂಚಾಯಿತಿಗಳಲ್ಲಿ ಗದ್ದುಗೆ ಏರಲು ಸಾಧ್ಯವಾಗಿದೆ. ಆದರೂ ನಿರೀಕ್ಷೆಯಷ್ಟು ಸ್ಥಾನ ಪಡೆಯಲು ವಿಫಲವಾಗಿದ್ದೇವೆ ಎಂದರು.
ಈ ಫಲಿತಾಂಶದಿಂದ ಕಾರ್ಯಕರ್ತರಲ್ಲಿ ಉತ್ಸಾಹ ಕುಂದದೆ ಮುಂದಿನ ಸವಾಲುಗಳನ್ನು ಸ್ವೀಕರಿಸಲು ಮುಂದಾಗಬೇಕು. ಸ್ಥಳೀಯ ಮಟ್ಟದಲ್ಲಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಸೇವೆ ಮಾಡಲುಬದ್ಧರಾಗಬೇಕಿದೆ ಎಂದು ಹೇಳಿದರು.ಜಿಪಂ ಸದಸ್ಯೆ ಎ.ಅರುಂಧತಿ ಮಾತನಾಡಿ, ಡಿ.ಪಾಳ್ಯ ಜಿಪಂವ್ಯಾಪ್ತಿಯಲ್ಲಿನ ಎಲ್ಲ ಗ್ರಾಪಂಗಳಲ್ಲಿಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳುಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕಇಡೀ ಕ್ಷೇತ್ರವನ್ನು ಕೈ ವಶವನ್ನಾಗಿಸಿಕೊಂಡುಶಾಸಕರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇವೆ ಎಂದರು.
ಕಾಂಗ್ರೆಸ್ ಭದ್ರಕೋಟೆಯಾಗಿರುವಈ ಪ್ರದೇಶದಲ್ಲಿ ಕಾರ್ಯಕರ್ತರಅವಿರತ ಶ್ರಮ ಹಾಗೂ ಮತದಾರರ ಆಶೀರ್ವಾದದಿಂದ ಈ ಸಾಧನೆಮಾಡಲು ಸಾಧ್ಯವಾಗಿದೆ. ಇದರ ಜತೆಗೆಕಳೆದ ಎರಡೂವರೆ ದಶಕಗಳಿಂದಶಾಸಕರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಇಂದು ನಮಗೆಲ್ಲಾ ಶ್ರೀರಕ್ಷೆಯಾಗಿವೆ ಎಂದರು.
ಮುಖಂಡರಾದ ಅಶ್ವತ್ಥರೆಡ್ಡಿ, ನವೀನ್ ಕುಮಾರ್, ರಮೇಶ್ ನಾಯಕ್,ಶಿವಾರೆಡ್ಡಿ, ರಾಮಲಿಂಗಾರೆಡ್ಡಿ,ರಾಜಗೋಪಾಲರೆಡ್ಡಿ, ಸುರೇಶ್, ಸಿದ್ದಪ್ಪ,ನಿರಂಜನ್, ರಂಗಪ್ಪ, ಕುಮಾರ್,ಸುಮನಾ, ಶ್ರೀನಿವಾಸರೆಡ್ಡಿ, ಗಂಗಾಧರಪ್ಪ, ರಾಂಬಾಬು, ಶ್ರೀರಾಮರೆಡ್ಡಿ, ಅಶ್ವತ್ಥಪ್ಪ, ಶಿವಶಂಕರರೆಡ್ಡಿ ಹಾಜರಿದ್ದರು.