ಕುರುಗೋಡು: ಪುರಸಭೆಗೆ ನೂತನ ಮುಖ್ಯಧಿಕಾರಿಯಾಗಿ ವಿಜಯಲಕ್ಷಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾರ್ಯನಿರ್ವಹಿಸಿದ ಪರುಶುರಾಮ್ ಮುದಗಲ್ ಪುರಸಭೆಗೆ ವರ್ಗಾವಣೆಗೊಂಡ ಹಿನ್ನಲೆ ತೇರುವುಗೊಂಡ ಸ್ಥಳಕ್ಕೆ ವಿಜಯಲಕ್ಷ್ಮೀ ಭರ್ತಿಯಾಗಿದ್ದಾರೆ.
ಈಗಾಗಲೇ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಕುರುಗೋಡು ಪುರಸಭೆಗೆ ಭೇಟಿ ನೀಡಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ವಿಜಯಲಕ್ಷ್ಮಿ ಈಗಾಗಲೇ ಬಳ್ಳಾರಿ ಜಿಲ್ಲೆಯ ಪಕ್ಕದ ತಾಲೂಕಿನಲ್ಲಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಅನುಭೋಗ ಅವರಲ್ಲಿದೆ.
ನಂತರ ಮಾತನಾಡಿದ ವಿಜಯಲಕ್ಷಿ, ಕುರುಗೋಡು ತಾಲೂಕಿಗೆ ಇದೆ ಮಾದಲು ಕಾರ್ಯನಿರ್ವಹಿಸಲು ಬಂದಿದ್ದು, ಇಲ್ಲಿನ ಸಿಬ್ಬಂದಿಗಳ ಹಾಗೂ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದ ಅವರು, ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಇದಕ್ಕೆ ಪಟ್ಟಣದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.