Advertisement

ವಿಜಯ ಸಹಕಾರಿ ನಂ. 1 ಸ್ಥಾನಕ್ಕೇರಿಸಲು ಬದ್ಧ

03:26 PM Dec 28, 2020 | Suhan S |

ಬಾಗಲಕೋಟೆ: ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಕ್ರೆಡಿಟ್‌ ಸಹಕಾರಿ ಲಿಮಿಟೆಡ್‌ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿ ಸಮವಾಗಿ ಸೇವೆ ನೀಡುವಷ್ಟು ಸದೃಢವಾಗಿ ಬೆಳೆದು ನಿಂತಿದೆ. ವಿನೂತನ ಯೋಜನೆಗಳೊಂದಿಗೆ ಮಹತ್ತರ ಹೆಜ್ಜೆ ಗುರುತುಮೂಡಿಸುವ ಮೂಲಕ ಗ್ರಾಹಕರ ವಿಶ್ವಾಸಾರ್ಹಸಂಸ್ಥೆಯಾಗಿ ಹೊರಹೊಮ್ಮಿದ್ದು ಹೆಮ್ಮೆಯ ಸಂಗತಿ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ಬೀಳಗಿ ಶಾಸಕ ಮುರುಗೇಶ ನಿರಾಣಿ ಹೇಳಿದರು.

Advertisement

ಮುಧೋಳದ ಸಹಕಾರಿಯ ಪ್ರಧಾನ ಕಚೇರಿ ಸಭಾ ಭವನದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ 53 ಶಾಖೆಗಳನ್ನು ಹೊಂದಿದ ವಿಜಯ ಸೌಹಾರ್ದ ಸಹಕಾರಿ ಠೇವಣಿದಾರರನೆಚ್ಚಿನ ಸಹಕಾರಿಯಾಗಿ ಅಭಿವೃದ್ಧಿ ಹೊಂದಿದೆ. 600ಕೋಟಿ ರೂ. ಠೇವಣಿ ಹೊಂದಿದೆ. 7ಸಾವಿರ ಕೋಟಿ ರೂ. ವಾರ್ಷಿಕ ಆರ್ಥಿಕವಹಿವಾಟು ನಡೆಸುತ್ತಿದ್ದು, 2019-20ನೇಸಾಲಿನಲ್ಲಿ ನಿವ್ವಳ 1.95 ಕೋಟಿ ರೂ.ಲಾಭ ಗಳಿಸಿದೆ. ಸಹಕಾರಿಯ ಸದಸ್ಯರಿಗೆದಾಖಲೆಯ ಶೇ. 25 ಲಾಭಾಂಶ ಹಂಚಿಕೆ ಮಾಡಿದ್ದು ಲೆಕ್ಕಪತ್ರ ಪರಿಶೋಧನೆಯಲ್ಲಿ ಎ ಶ್ರೇಣಿ ವರ್ಗಿಕರಣವನ್ನು ನಿರಂತರ ಕಾಯ್ದುಕೊಂಡಿದೆ ಎಂದರು.

ಮುಧೋಳದಲ್ಲಿ 2007-08ರಲ್ಲಿ ಆರಂಭಗೊಂಡಸಂಸ್ಥೆಯು ವಿಶಾಲ ಕರ್ನಾಟಕದಾದ್ಯಂತ ಶಾಖೆಗಳನ್ನುಹೊಂದಿ ರಾಜ್ಯದ ಜನತೆಗೆ ಉತ್ತಮ ಸೇವೆ ನೀಡುತ್ತಿದೆ.1.20 ಕೋಟಿ ಶೇರು ಬಂಡವಾಳ ಹೊಂದಿದಸಹಕಾರಿಯು 480 ಕೋಟಿ ರೂ ಸಾಲವಿತರಿಸಿ, 120 ಕೋಟಿ ರೂ.ಗಳನ್ನು ವಿವಿಧಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ.ಆರ್ಥಿಕವಾಗಿ ತುಂಬ ಸದೃಢವಾಗಿದೆ ಎಂದು ಹೇಳಿದರು.

ಮುಧೋಳ ನಗರದ ನಿರಾಣಿ ಕಾರ್ಖಾನೆ ಆವರಣದಲ್ಲಿ ಸುಸಜ್ಜಿತ ಪ್ರಧಾನ ಕಛೇರಿಹೊಂದಿದ್ದು, ಜಮಖಂಡಿ ಶಾಖೆಯ ಸ್ವಂತ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ರಬಕವಿ, ಬನಹಟ್ಟಿ, ಬೀಳಗಿ ಶಾಖೆಗಳಿಗೂ ಸ್ವಂತಕಟ್ಟಡಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ.ಸಂಸ್ಥೆಯು 350 ಜನ ಸಿಬ್ಬಂದಿಗೆ ಬದುಕು ರೂಪಿಸಿಕೊಟ್ಟಿದೆ ಎಂದರು.

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನಅಳವಡಿಸಿಕೊಳ್ಳುವುದರಲ್ಲಿ ವಿಜಯ ಸಹಕಾರಿ ಸದಾಮುಂದಿದೆ. ಸೌಹಾರ್ದ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮೊಟ್ಟ ಮೊದಲು ವಿಜಯ ಪೇ ಮೊಬೆ„ಲ್‌ಬ್ಯಾಂಕಿಂಗ್‌ ಸೇವೆ ಹಾಗೂ ಎಟಿಎಂ ಸೇವೆಯನ್ನುಆರಂಭಿಸಿದ ಹೆಗ್ಗಳಿಕೆ ಹೊಂದಿದೆ. ಗ್ರಾಹಕರಿಗೆ ತ್ವರಿತಹಾಗೂ ನಿಖರ ಸೇವೆ ಒದಗಿಸುವಲ್ಲಿ ನಿರತರಾಗಿರುವ ಸಹಕಾರಿ, ಹೊಸ ಯುಗದ ಹಣಕಾಸು ವರ್ಗಾವಣೆ ವ್ಯವಸ್ಥೆಗಳಾದ ಆರ್‌ಟಿಜಿಎಸ್‌, ಎನ್‌.ಇ.ಎಫ್‌.ಟಿ. ಸೌಲಭ್ಯ ಅಳವಡಿಸಿಕೊಂಡಿದೆ. ಗ್ರಾಹಕರ ಸಹಕಾರದಿಂದ

Advertisement

ಇಷ್ಟೆಲ್ಲ ಸಾಧನೆ ಸಾಧ್ಯವಾಗಿದ್ದು, ರೈತರು, ಕಾರ್ಮಿಕರೇ ಅತಿ ಹೆಚ್ಚು ಸದಸ್ಯರಾಗಿರುವ ನಮ್ಮ ಸಹಕಾರಿಯಲ್ಲಿ ಅವರ ಅಗತ್ಯತೆಗಳಿಗೆ ತಕ್ಕಂತೆ ಮತ್ತಷ್ಟು ಸೌಲಭ್ಯ ಹಾಗೂಸೇವೆ ವಿಸ್ತರಿಸುವ ಮೂಲಕ ರಾಜ್ಯದಲ್ಲಿಯೇ ನಂ.1 ಸಹಕಾರಿಯನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.

ಸಹಕಾರಿ ಅಧ್ಯಕ್ಷ ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜನರಲ್‌ ಮ್ಯಾನೇಜರ್‌ ಎಚ್‌. ಪತ್ತೇನ್ನವರ ವಾರ್ಷಿಕವರದಿ ವಾಚನ ಮಾಡಿದರು. ಸಂಗಮೇಶ ನಿರಾಣಿ,ಕೃಷ್ಣಗೌಡ ಪಾಟೀಲ, ರಾಚಪ್ಪಣ್ಣ ಕರೆಹೊನ್ನ, ಪಿ.ಆರ್‌. ಗೌಡರ್‌, ಎಸ್‌. ಆರ್‌. ಹಿಪ್ಪರಗಿ, ಸೋಮಶೇಖರಗೋಸಾರ, ಸಹಕಾರಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next