ಮುಂಬಯಿ: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮಿಲನವು ಫೆ. 24ರಂದು ಸಾಕಿನಾಕದಲ್ಲಿನ ಪೆನಿನ್ಸುಲಾ ಗ್ರಾÂಂಡ್ ಹೊಟೇಲ್‌ನ ಕನ್‌ಕಾರ್x ಸಭಾಗೃಹದಲ್ಲಿ ಸಂಘದ ಮುಂಬಯಿ ಘಟಕಾಧ್ಯಕ್ಷ ಆನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಫೆಡರೇಶನ್ ಆಫ್ ವರ್ಲ್ಡ್ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಘಟಕದ ಪದಾಧಿಕಾರಿಗಳು ಮತ್ತು ಹಳೆ ವಿದ್ಯಾರ್ಥಿಗಳು ಕಾಲೇಜ್‌ನ ಪೊಲಿಟಿಕಲ್ ಸಾಯನ್ಸ್ ವಿಭಾಗದ ನಿವೃತ್ತ ಪ್ರಾಚಾರ್ಯ ಪ್ರೊ| ಡಾ| ಯು. ಕೆ. ಶ್ಯಾಮ ಭಟ್ ಮತ್ತು ರಾಜಶ್ರೀ ಭಟ್ ಹಾಗೂ ಇಂಗ್ಲಿಷ್ ವಿಭಾಗದ ವಿಶ್ರಾಂತ ಪ್ರಾಚಾರ್ಯ ಪ್ರೊ| ಡಾ| ರಘುರಾಮ್ ರಾವ್ ಮತ್ತು ಹೇಮಲತಾ ರಾವ್ ದಂಪತಿಗಳಿಗೆ ಗುರುವಂದನೆ ಸಲ್ಲಿಸಿದರು.
ಉದ್ಯಮಿ ರಮೇಶ್ ಶೆಟ್ಟಿ ಮತ್ತು ಹಸ್ಮತಿ ರಮೇಶ್, ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ. ಸಾಲ್ಯಾನ್ ಮತ್ತು ನಯನಾ ಭಾಸ್ಕರ್, ಲೆಕ್ಕ ಪರಿಶೋಧಕ ಸಿಎ ವಿಶ್ವನಾಥ್ ಶೆಟ್ಟಿ ಮತ್ತು ಪುಷ್ಪಾ ವಿಶ್ವನಾಥ್ ದಂಪತಿಯನ್ನು ಸಮ್ಮಾನಿಸಿ ಅಭಿನಂದಿಸಿದರು.
ಮಿಸ್ ಬಂಟ್ ವಿಜೇತೆ ಮೇಘಾ ಜಿ. ಶೆಟ್ಟಿ ಅವರನ್ನು ಸತ್ಕರಿಸಿದ್ದು, ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.
ಸಮ್ಮಾನಿತರು ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಗೌರವಕ್ಕಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಎಸ್. ಎಂ. ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಎಸ್‌ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಶಿರ್ವ ನಿತ್ಯಾನಂದ ಹೆಗ್ಡೆ, ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್‌ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ, ಮುಂಬಯಿ ಘಟಕದ ಗೌರವಾಧ್ಯಕ್ಷ ಸಿಎ ಸೋಮನಾಥ ಕುಂದರ್, ಉಪಾಧ್ಯಕ್ಷ ವಾಸುದೇವ ಎಂ. ಸಾಲ್ಯಾನ್, ಕೋಶಾಧಿಕಾರಿ ಅಶೋಕ್ ದೇವಾಡಿಗ, ಕಾರ್ಯದರ್ಶಿ ನ್ಯಾಯವಾದಿ ಶೇಖರ ಎಸ್. ಭಂಡಾರಿ ಮತ್ತಿತರರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್