Advertisement

ಜನಪ್ರಿಯ ನಟರ ಪಟ್ಟಿ: ಟಾಪ್‌ 3ರಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌

10:47 PM Jul 20, 2022 | Team Udayavani |

ನವದೆಹಲಿ: ದೇಶದ ಜನಪ್ರಿಯ ಸಿನಿಮಾ ನಟರಲ್ಲಿ ಅಗ್ರ ಐವರ ಪಟ್ಟಿಯಲ್ಲಿ ಕನ್ನಡದ ರಾಕಿಂಗ್‌ ಸ್ಟಾರ್‌ ಯಶ್‌ ಟಾಪ್‌ 3ರಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

“ದ ಆರ್ಮ್ಯಾಕ್ಸ್‌ ಸ್ಟಾರ್ಸ್‌ ಇಂಡಿಯಾ ಲವರ್ಸ್‌: ಮೋಸ್ಟ್‌ ಪಾಪ್ಯುಲರ್‌ ಸ್ಟಾರ್ಸ್‌ ಇನ್‌ ಇಂಡಿಯಾ (2022)’ ಪಟ್ಟಿ ಬಿಡುಗಡೆಯಾಗಿದ್ದು ಅದರಲ್ಲಿ ನಟರ ವಿಭಾಗದ ಟಾಪ್‌ 5 ಸ್ಥಾನಗಳನ್ನು ದಕ್ಷಿಣ ಭಾರತೀಯ ಸ್ಟಾರ್‌ಗಳೇ ಆಕ್ರಮಿಸಿಕೊಂಡಿದ್ದಾರೆ.

ಮೊದಲ ಸ್ಥಾನದಲ್ಲಿ ತಮಿಳು ನಟ ವಿಜಯ್‌ ಇದ್ದರೆ, 2ನೇ ಸ್ಥಾನದಲ್ಲಿ ಪ್ರಭಾಸ್‌, 4ನೇ ಸ್ಥಾನದಲ್ಲಿ ಅಲ್ಲು ಅರ್ಜುನ್‌, 5ನೇ ಸ್ಥಾನದಲ್ಲಿ ಜೂನಿಯರ್‌ ಎನ್‌ಟಿಆರ್‌ ಇದ್ದಾರೆ.

ವಿಶೇಷವೇನೆಂದರೆ, ಪಟ್ಟಿಯ ಟಾಪ್‌ 10ರಲ್ಲಿ ಬಾಲಿವುಡ್‌ ಅಕ್ಷಯ್‌ ಕುಮಾರ್‌ (6) ಮಾತ್ರ ಸ್ಥಾನ ಪಡೆದಿದ್ದಾರೆ. ಆನಂತರದ ಸ್ಥಾನಗಳಲ್ಲಿ ತೆಲುಗಿನ ಮಹೇಶ್‌ ಬಾಬು, ತಮಿಳಿನ ಅಜಿತ್‌, ತೆಲುಗಿನ ರಾಮ್‌ ಚರಣ್‌ ಹಾಗೂ ತಮಿಳಿನ ಸೂರ್ಯ ಇದ್ದಾರೆ.

ನಟಿಯರಲ್ಲಿ ಸಮಂತಾ ನಂ. 1
ನಟಿಯರ ಪಟ್ಟಿಯಲ್ಲಿ ತೆಲುಗಿನ ಸಮಂತಾ ಪ್ರಭು ನಂ. 1 ಸ್ಥಾನದಲ್ಲಿದ್ದರೆ, ಆನಂತರದ ಸ್ಥಾನಗಳಲ್ಲಿ ಆಲಿಯಾ ಭಟ್‌, ನಯನತಾರಾ, ಕಾಜಲ್‌ ಅಗರ್ವಾಲ್‌, ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಕೀರ್ತಿ ಸುರೇಶ್‌, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ಅನುಷ್ಕಾ ಶೆಟ್ಟಿ ಇದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next