Advertisement

Pics: ಹ್ಯಾಲೋವೀನ್ ಪಾರ್ಟಿಯಲ್ಲಿ‌ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಜಯ್‌ ಮಲ್ಯ ಪುತ್ರ

11:42 AM Nov 02, 2023 | Team Udayavani |

 ನವದೆಹಲಿ: ವಿಜಯ್‌ ಮಲ್ಯ ಪುತ್ರ ಸಿದ್ದಾರ್ಥ್‌ ಮಲ್ಯ ತನ್ನ ಗೆಳತಿ ಜೊತೆ ಎಂಗೇಜ್‌ ಮೆಂಟ್‌ ಆಗಿರುವ ಫೋಟೋಸ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಸಿದ್ದಾರ್ಥ್‌ ಮಲ್ಯ ಗರ್ಲ್‌ ಫ್ರೆಂಡ್‌ ಜಾಸ್ಮಿನ್‌  ಅವರಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹಾಗೆ ಮೊಣಕಾಲಿನಲ್ಲಿ  ಕೂತು ಎಂಗೇಜ್‌ ಮೆಂಟ್‌ ರಿಂಗ್‌ ತೋರಿಸಿ, ಅದನ್ನು ಜಾಸ್ಮಿನ್‌ ಅವರ ಕೈಗೆ ಹಾಕಿದ್ದಾರೆ. ಆ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹ್ಯಾಲೋವೀನ್ ಪಾರ್ಟಿಯೊಂದರಲ್ಲಿ ಸಿದ್ದಾರ್ಥ್‌ ಮಲ್ಯ ಎಂಗೇಜ್‌ ಆಗಿದ್ದಾರೆ. ಈ ಕುರಿತ ಫೋಟೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನೀವು ನನ್ನೊಂದಿಗೆ ಶಾಶ್ವತವಾಗಿ ಸಿಲುಕಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಐ ಲವ್‌ ಯೂ ನನ್ನ ಜುಪ್ಪೆಟ್” ಎಂದು ಸಿದ್ದಾರ್ಥ್‌ ಫೋಟೋ ಕೆಳಗೆ ಬರೆದುಕೊಂಡಿದ್ದಾರೆ.

ಎಂಗೇಜ್‌ ಆದ ಸಿದ್ದಾರ್ಥ್‌ ಅವರಿಗೆ ಸುಸ್ಸಾನ್ನೆ ಖಾನ್, ಅರ್ಪಿತಾ ಶರ್ಮಾ, ಇಸಾಬೆಲ್ಲೆ ಕೈಫ್, ಅನುಷಾ ದಾಂಡೇಕರ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.

ಸಿದ್ಧಾರ್ಥ್ ಮಲ್ಯ ಕ್ಯಾಲಿಫೋರ್ನಿಯಾದಲ್ಲಿ ತನ್ನ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Advertisement

ನಟ ಹಾಗೂ ಮಾಡೆಲ್‌ ಆಗಿ ಸಿದ್ದಾರ್ಥ್‌ ಮಲ್ಯ ಗುರುತಿಸಿಕೊಂಡಿದ್ದಾರೆ.

View this post on Instagram

 

A post shared by Sid (@sidmallya)

 

 

Advertisement

Udayavani is now on Telegram. Click here to join our channel and stay updated with the latest news.

Next