Advertisement

ಭಾರತಕ್ಕೆ ಗಡಿಪಾರು; ಉದ್ಯಮಿ ವಿಜಯ್ ಮಲ್ಯ ಭವಿಷ್ಯ ಈಗ ಪ್ರೀತಿ ಪಟೇಲ್ ಅಂಗಳದಲ್ಲಿ!

08:57 AM Apr 21, 2020 | Nagendra Trasi |

ಯುನೈಟೆಡ್ ಕಿಂಗ್ ಡಮ್: ಭಾರತದ ಬ್ಯಾಂಕುಗಳಿಗೆ ಬರೋಬ್ಬರಿ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಮದ್ಯ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

Advertisement

ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ಮಲ್ಯ ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಬ್ರಿಟನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಪ್ರಕರಣ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರ ಅಂಗಳಕ್ಕೆ ಹೋಗಿದ್ದು ಅಂತಿಮ ನಿರ್ಧಾರ ಅವರು ಕೈಗೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.

ಬ್ರಿಟನ್ ಹೈಕೋರ್ಟ್ ನ್ಯಾಯಾಧೀಶರಾದ ಸ್ಟೀಫನ್ ಇರ್ವಿನ್ ಮತ್ತು ಎಲಿಜಬೆತ್ ಲಾಯಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ಇದರೊಂದಿಗೆ ವಿಜಯ್ ಮಲ್ಯ ವಂಚನೆ ಆರೋಪದಡಿ ಭಾರತಕ್ಕೆ ಗಡಿಪಾರು ಮಾಡುವ ಹಾದಿ ಸುಗಮವಾದಂತಾಗಿದೆ. ಏತನ್ಮಧ್ಯೆ 14 ದಿನದೊಳಗೆ ಬ್ರಿಟನ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅವಕಾಶವಿದೆ.

ಒಂದು ವೇಳೆ ವಿಜಯ್ ಮಲ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ ಬ್ರಿಟನ್ ಗೃಹ ಇಲಾಖೆ ಮೇಲ್ಮನವಿ ಕುರಿತು ಯಾವ ತೀರ್ಮಾನ ಹೊರಬೀಳಲಿದೆ ಎಂಬುದನ್ನು ಪರಿಶೀಲಿಸಿದ ನಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಆದರೆ ಒಂದು ವೇಳೆ ಮೇಲ್ಮನವಿ ಸಲ್ಲಿಸದಿದ್ದರೆ ಭಾರತ ಮತ್ತು ಬ್ರಿಟನ್ ಗಡಿಪಾರು ಒಪ್ಪಂದದ ಪ್ರಕಾರ ಕೋರ್ಟ್ ಆದೇಶದಂತೆ 28 ದಿನದೊಳಗೆ ಭಾರತಕ್ಕೆ ಮಲ್ಯ ಗಡಿಪಾರಾಗಲಿದ್ದಾರೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next