Advertisement

Viral: ಯುವತಿಯರ ‘ಆ ಬೇಡಿಕೆ’ಗೆ ಸ್ಪಂದಿಸಿದ ನಟ ವಿಜಯ ದೇವರಕೊಂಡ

12:40 PM Feb 19, 2024 | Team Udayavani |

ಹೈದರಾಬಾದ್: ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ವಿಡಿಯೋವೊಂದಕ್ಕೆ ಮಾಡಿರುವ ರಿಪ್ಲೈವೊಂದು ವೈರಲ್‌ ಆಗಿದೆ.

Advertisement

ʼಅರ್ಜುನ್‌ ರೆಡ್ಡಿʼ ನಟನಿಗೆ ದೊಡ್ಡ ಅಭಿಮಾನಿಗಳ ವಲಯವಿದೆ. ಇದರಲ್ಲಿ ಯುವ ಜನತೆಯೇ ಹೆಚ್ಚು. ಅಭಿಮಾನಿಗಳು ತನ್ನ ನೆಚ್ಚಿನ ನಟ- ನಟಿಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು. ಅವರ ಆಟೋಗ್ರಾಫ್‌ ಪಡೆದುಕೊಳ್ಳಬೇಕೆನ್ನುವ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಇಲ್ಲಿಬ್ಬರು ಯುವತಿಯರು ವಿಜಯ್‌ ದೇವರಕೊಂಡ ಬಳಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಆ ಬೇಡಿಕೆಯ ವಿಡಿಯೋ ವೈರಲ್‌ ಆಗಿದೆ.

ಇಬ್ಬರು ಯುವತಿಯರು ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ “ವಿಜಯ್‌ ದೇವರಕೊಂಡ ಅವರು ಈ ವಿಡಿಯೋಗೆ ಕಮೆಂಟ್‌ ಮಾಡಿದರೆ ನಾವು ಪರೀಕ್ಷೆಗೆ ಸಿದ್ದತೆಯನ್ನು ಆರಂಭಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.  ಈ ವಿಡಿಯೋಗೆ 3 ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ಇದಕ್ಕೆ ಕಾರಣ ನಟ ವಿಜಯ್‌ ದೇವರಕೊಂಡ ಅವರು ಕೊಟ್ಟ ಪ್ರತಿಕ್ರಿಯೆ. ಹೌದು ಯುವತಿಯ ಬೇಡಿಕೆಗೆ ಸ್ಪಂದಿಸಿದ ದೇವರಕೊಂಡ ಅವರು, “ಪರೀಕ್ಷೆಯಲ್ಲಿ 90% ದಷ್ಟು ಅಂಕಗಳಿಸಿ, ನಾನು ನಿಮ್ಮನ್ನು ಭೇಟಿ ಆಗುತ್ತೇನೆ” ಎಂದು ಕಮೆಂಟ್‌ ಮಾಡಿದ್ದಾರೆ. ಈ ಕಮೆಂಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಸದ್ಯ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next