Advertisement

ತಮಿಳು ಚಿತ್ರರಂಗದ ಸ್ಟಾರ್‌ ನಟ ವಿಜಯ್‌ ಸಿನಿಮಾಗೆ ಸಮಸ್ಯೆ

08:56 PM Mar 11, 2020 | Sriram |

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್‌ ನಟ ವಿಜಯ್‌ರವರ ಹೊಸ ಚಿತ್ರ “ಮಾಸ್ಟರ್‌’ನ ಸಹ ನಿರ್ಮಾಪಕರಾದ ಲಲಿತ್‌ ಕುಮಾರ್‌ ಅವರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಮಂಗಳವಾರ ಸಂಜೆಯ ಹೊತ್ತಿಗೆ ಲಲಿತ್‌ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಬುಧವಾರವೂ ತಮ್ಮ ಶೋಧಕಾರ್ಯ ಮುಂದುವರಿದಿತ್ತು. “ಮಾಸ್ಟರ್‌’ ಚಿತ್ರವು ಬಿಡುಗಡೆಗೂ ಮುನ್ನವೇ 220 ಕೋಟಿ ರೂ. ವ್ಯವಹಾರ ಮಾಡಿದ್ದು, ಇದರಲ್ಲಿ ಲಲಿತ್‌ ಕುಮಾರ್‌ 50 ಕೋಟಿ ರೂ.ಗಳಷ್ಟು ಪಾಲು ಪಡೆದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next