Advertisement

ಸೈಕಲ್‍ನಲ್ಲಿ ಆಗಮಿಸಿ ಮತ ಚಲಾಯಿಸಿದ ತಮಿಳು ನಟ ವಿಜಯ್

02:23 PM Apr 06, 2021 | Team Udayavani |

ಚೆನ್ನೈ : ತಮಿಳು ಸೂಪರ್ ಸ್ಟಾರ್ ವಿಜಯ್ ದಳಪತಿ ಮತ ಚಲಾಯಿಸಲು ಸೈಕಲ್‍ ನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.

Advertisement

ಇಂದು ತಮಿಳುನಾಡಿನ ವಿಧಾನ ಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳು ನಟ ‘ದಳಪತಿ’ ವಿಜಯ್ ಕೂಡಾ ಮತ ಚಲಾಯಿಸಿದ್ದು, ಇವರು ಪೋಲಿಂಗ್‌ ಬೂತ್‌ಗೆ ಸೈಕಲ್‌ನಲ್ಲಿ ಆಗಮಿಸಿ ಸರಳತೆ ಮೆರೆದಿದ್ದಾರೆ.

ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್​ ಇಂಟರ್​ನ್ಯಾಷನಲ್​ ಪ್ರೀ ಸ್ಕೂಲ್​ನ ಮತಗಟ್ಟೆಗೆ ನಟ ವಿಜಯ್‌ ದಳಪತಿ ಸೈಕಲ್ ಏರಿ ಆಗಮಿಸಿದ್ದಾರೆ. ಅವರ ಬಳಿ ಕಾರುಗಳಿದ್ದರೂ ಕೂಡ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಜಯ್ ಸೈಕಲ್ ಏರಿದ್ದೇಕೆ ?

ನಟ ವಿಜಯ್ ಮತ ಚಲಾಯಿಸಲು ಸೈಕಲ್ ನಲ್ಲಿ ಆಗಮಿಸಿರುವುದರ ಕುರಿತು ಬಿಸಿಬಿಸಿಯಾದ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ ವಿರುದ್ಧ ಪ್ರತಿಭಟಿಸುವ ಸಲುವಾಗಿ ಅವರು ಸೈಕಲ್ ಹತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.

Advertisement

ಇನ್ನು ಈ ಬಾರಿ ತಮಿಳು ನಾಡು ಚುನಾವಣೆ ಬಾರಿ ಕುತೂಹಲ ಮೂಡಿಸಿದೆ. ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಮುಗಿಯಲಿದ್ದು, ಮೇ.2 ರಂದು ಫಲಿತಾಂಶ ಹೊರ ಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next