ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕರು ಆಗಿರುವ ವಿಜಯ್ ಆಂಟೋನಿ ಭಿಕ್ಷುಕ-2 (ಪಿಚೈಕ್ಕಾರನ್ 2) ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕಿಳಿದಿರುವುದು ಗೊತ್ತೇ ಇದೆ. ಪಿಚೈಕ್ಕಾರನ್ ಸಿನಿಮಾದ ಸೀಕ್ವೆಲ್ ಆಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿದೆ.
ಕನ್ನಡದಲ್ಲಿ ಭಿಕ್ಷುಕ-2 ಎಂಬ ಟೈಟಲ್ ನಡಿ ಮೂಡಿ ಬರುತ್ತಿದ್ದು, ಈ ಸಿನಿಮಾದ ಕನ್ನಡದ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಪಿಚೈಕ್ಕಾರನ್ ಮೊದಲ ಭಾಗ ಯಶಸ್ಸು ಕಂಡಿತ್ತು. ಈ ಚಿತ್ರ ವಿಜಯ್ ಅಂಥೋನಿಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಈಗ ಪಿಚೈಕ್ಕಾರನ್ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ತಮ್ಮದೇ ವಿಜಯ್ ಆಂಟೋನಿ ಫಿಲ್ಮಂ ಕಾರ್ಪೊರೇಷನ್ ನಡಿ ಅವರೇ ನಿರ್ಮಿಸಿದ್ದಾರೆ. ಮಲೇಷ್ಯಾದಲಿ ಭಿಕ್ಷುಕ- 2 ಶೂಟಿಂಗ್ ನಡೆಯುತ್ತಿದ್ದ ವೇಳೆ ವಿಜಯ್ ಆಂಟೋನಿ ಗಂಭೀರ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿರುವ ಅವರೀಗ ಪ್ರಮೋಷನ್ ಕಾರ್ಯಕ್ಕೆ ಸಜ್ಜಾಗಿದ್ದಾರೆ.