Advertisement

“ಕನಸಿನ ಮನೆ’ಯಲ್ಲಿ  ಆಶ್ರಯ ಮನೆ ಪ್ರಗತಿ ವೀಕ್ಷಿಸಿ

11:46 AM Apr 11, 2017 | Team Udayavani |

ಕೊಪ್ಪಳ: ಬಡವರಿಗೆ ಸರ್ಕಾರ ನಿರ್ಮಿಸಿ ಕೊಡುವ ಆಶ್ರಯ ಮನೆಗಳಲ್ಲಿ ಅಕ್ರಮ ತಡೆದು, ಪಾರದರ್ಶಕತೆ ಕಾಯ್ದುಕೊಳ್ಳಲು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವು ರಾಜ್ಯದಲ್ಲಿ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌
ಸಿದ್ಧಪಡಿಸಿದೆ. ಈ ಆ್ಯಪ್‌ ಮೂಲಕ ಫಲಾನುಭವಿಯೇ ನೇರವಾಗಿ ಮನೆ ನಿರ್ಮಾಣದ ಹಂತಗಳ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿ ಕಾಮಗಾರಿ ವಿವರವನ್ನು ಸಲ್ಲಿಸಿ ಅನುದಾನವನ್ನು ಪಡೆಯಬಹುದಾಗಿದೆ. ಇದರಿಂದ ಅನುದಾನ
ಪಡೆಯುವಲ್ಲಾಗುತ್ತಿದ್ದ ವಿಳಂಬ ತಪ್ಪಲಿದೆ. ಈ ಮೊದಲು ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂನಲ್ಲಿ ಗ್ರಾಮಸಭೆ ನಡೆಸಿ ವಸತಿರಹಿತ ಕುಟುಂಬ ಗುರುತಿಸಿ, ಆಶ್ರಯ ಮನೆ ಮಂಜೂರು ಮಾಡಲಾಗುತ್ತಿತ್ತು. ಆದರೆ, ಮಂಜೂರಾದ ಮನೆ ನಾನಾ ಕಾರಣದಿಂದ ಪ್ರಗತಿ ಕಾಣದೇ ನಾಲ್ಕಾರು ವರ್ಷಗಳಿಂದ ನನೆಗುದಿಗೆ ಬಿದ್ದು ಬಡವರಿಗೆ ಸಕಾಲಕ್ಕೆ ಸೂರು ಸಿಗುತ್ತಿರಲಿಲ್ಲ.

Advertisement

ಇದನ್ನು ಗಮನಿಸಿದ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮವು ಬಡವರಿಗೆ ಸಕಾಲಕ್ಕೆ ಆಶ್ರಯ ಮನೆಗಳು ದೊರೆಯುವಂತಾಗಲಿ ಎನ್ನುವ ಉದ್ದೇಶದಿಂದ ಮನೆ ಪ್ರಗತಿಯ ಜಿಪಿಎಸ್‌ ವ್ಯವಸ್ಥೆ ಮಾಡಿತ್ತು. ಅದರೊಂದಿಗೆ ಅರ್ಹ
ಫಲಾನುಭವಿಯೇ ನೇರ ತನ್ನ ಮನೆಯ ಪ್ರಗತಿ ವೀಕ್ಷಣೆಗೆ ಹೊಸ ಆ್ಯಪ್‌ ಸಿದ್ಧಪಡಿಸಿದೆ. ಗ್ರಾಪಂ ಮಟ್ಟದಲ್ಲಿ ನಿರ್ಮಾಣ ಹಂತದ ಆಶ್ರಯ ಮನೆಗಳ ಸ್ಥಿತಿಗತಿ ಏನಿದೆ? ಯಾವ ಹಂತದಲ್ಲಿ ನಿರ್ಮಾಣವಾಗುತ್ತಿದೆ? ಎನ್ನುವುದನ್ನು ವೀಕ್ಷಣೆ
ಮಾಡಲು ನಿಗಮವು “ಕನಸಿನ ಮನೆ’ ಎನ್ನುವ ಆ್ಯಪ್‌ ಸಿದ್ಧಪಡಿಸಿ ಲೋಕಾರ್ಪಣೆಗೊಳಿಸಿದೆ.

ಫಲಾನುಭವಿ ಆಂಡ್ರಾಯ್ಡ ಮೊಬೈಲ್‌ ಬಳಸುತ್ತಿದ್ದರೆ, ಪ್ಲೇ ಸ್ಟೋರ್‌ ಮೂಲಕ ಈ ಆ್ಯಪ್‌ ಡೌನ್‌ಲೋಡ್‌ ಮಾಡಿ ಯಾವ ಜಿಲ್ಲೆ, ಯಾವ ತಾಲೂಕು, ಯಾವ ಗ್ರಾಪಂ ಹಾಗೂ ತನ್ನ ಆಶ್ರಯ ಮನೆ ಮಂಜೂರಾದ ಕೋಡ್‌ ನಂಬರ್‌ ಅಳವಡಿಸಿದರೆ ಸಾಕು, ಫಲಾನುಭವಿ ಮನೆ ನಿರ್ಮಾಣದ ಯಾವ ಹಂತದಲ್ಲಿದೆ ಎಂಬ ಪೂರ್ಣ ಮಾಹಿತಿ ಲಭ್ಯವಾಗಲಿದೆ.

ಆ್ಯಪ್‌ ಉದ್ದೇಶವೇನು?: ಈ ಮೊದಲು ಗ್ರಾಪಂನಲ್ಲಿ ಫಲಾನುಭವಿಗೆ ಆಶ್ರಯ ಮನೆ ಮಂಜೂರಾಗಿದ್ದರೆ ಪಿಡಿಒಗಳು ಸಕಾಲಕ್ಕೆ ಫಲಾನುಭವಿಯ ನಿವೇಶನಕ್ಕೆ ತೆರಳಿ ಜಿಪಿಎಸ್‌ ಮಾಡಲು ವಿಳಂಬ ಆಗುತ್ತಿತ್ತು. ಜಿಪಿಎಸ್‌ ಮಾಡದ ಹೊರತು ನಿಗಮದಿಂದ ಆಶ್ರಯ ಮನೆಗೆ ಹಣ ಮಂಜೂರು ಆಗುತ್ತಿರಲಿಲ್ಲ. ಪಿಡಿಒಗಳಿಗೆ ಹೊರೆಯಾಗುವುದನ್ನು ತಪ್ಪಿಸಲು ಹಾಗೂ ಫಲಾನುಭವಿಯೇ ತನ್ನ ಆಂಡ್ರಾಯ್ಡ ಮೊಬೈಲ್‌ನಲ್ಲಿ ಈ ಆ್ಯಪ್‌ ಮೂಲಕ ತಾನೇ ಜಿಪಿಎಸ್‌ ಮಾಡಿ ಮನೆ ನಿರ್ಮಾಣ ಹಂತದ ಸ್ಥಿತಿಗತಿಯ ಫೋಟೋ ಅಪ್‌ಲೋಡ್‌ ಮಾಡಬಹುದು. ಫಲಾನುಭವಿ ಅಪ್‌ ಲೋಡ್‌ ಮಾಡಿದ ಫೋಟೋಗಳು ಪಿಡಿಒ ಲಾಗಿನ್‌ಗೆ ಹೋಗಿರುತ್ತವೆ. ಪಿಡಿಒ ಫೋಟೋಗೆ ಅನುಮೋದನೆ ಕೊಟ್ಟರೆ ನಿಗಮದಿಂದ ಮನೆ ನಿರ್ಮಾಣ ಮುಂದುವರಿಸಲು ಅನುದಾನ ಬಿಡುಗಡೆಯಾಗಲಿದೆ.

ರಾಜ್ಯದಲ್ಲಿ ಮೊದಲ ಪ್ರಯೋಗ: ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವು ಈ ಮೊದಲು ವೆಬ್‌ಸೈಟ್‌ನಲ್ಲಿ ಮಾತ್ರ ಬಡವರ ಆಶ್ರಯ ಮನೆಗಳ ಪ್ರಗತಿ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next