Advertisement

ವಿಯೆಟ್ನಾಂ: ಶ್ರೀಮಂತ ಮಹಿಳಾ ಉದ್ಯಮಿಗೆ ಗಲ್ಲು

02:03 AM Apr 12, 2024 | Team Udayavani |

ಹನೋಯಿ: ವಿಯೆಟ್ನಾಂನ 2023ರ ಜಿಡಿಪಿ ದರದ ಶೇ.6ರಷ್ಟು ಮೊತ್ತವನ್ನು ವಂಚಿಸಿ, ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡುವಂಥ ಹಗರಣ ಎಸಗಿರುವ ಆ ದೇಶದ ಕೋಟ್ಯಧಿಪತಿ ಮಹಿಳೆ ಟ್ರಾಂಗ್‌ ಮೈ ಲ್ಯಾನ್‌ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ವ್ಯಾನ್‌ ಥಿನ್‌ ಫಾಟ್‌ ಎಂಬ ಡೆವಲ ಪರ್‌ ಸಂಸ್ಥೆಯ ಮುಖ್ಯಸ್ಥೆಯಾಗಿರುವ ಟ್ರಾಂಗ್‌, ಸೈಗೋನ್‌ ಕಮರ್ಷಿಯಲ್‌ ಬ್ಯಾಂಕ್‌ (ಎಸ್‌ಸಿಬಿ) ನಲ್ಲಿ ಶೇ.90ರಷ್ಟು ಷೇರು ಹೊಂದಿ ದ್ದ ಳು. ಈ ಅಧಿಕಾರ ದುರ್ಬ ಳಕೆ ಮಾಡಿ ಕೊಂಡು ಬ್ಯಾಂಕನ್ನು ತನ್ನ ಹಿಡಿತದ ಲ್ಲಿ ಟ್ಟು ಕೊಂಡ ಆಕೆ, 2012 ರಿಂದ 2022ರ ಅವಧಿಯಲ್ಲಿ 2,500 ಕಂಪೆನಿಗಳಿಗೆ ಬ್ಯಾಂಕ್‌ನಿಂದ ಸಾಲ ಕೊಡಿಸಿದ್ದಾಳೆ. ಆದರೆ ಸಾಲ ಪಡೆದ ಯಾವ ಕಂಪೆನಿಯೂ ನೈಜವಾದುದಲ್ಲ. ಬದಲಿಗೆ ಆಕೆಯೇ ಫೇಕ್‌ ಆ್ಯಪ್ಲಿಕೇಶನ್‌ಗಳನ್ನು ತಯಾರಿಸಿ ಆ ಮೂಲಕ ತನ್ನ ಬೇನಾಮಿ ಕಂಪೆನಿಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾಳೆ.

ಇದರಿಂದಾ ಗಿ ಬ್ಯಾಂಕ್‌ಗೆ ಬರೋಬ್ಬರಿ 27 ಶತಕೋಟಿ ಡಾಲರ್‌(2.25 ಲಕ್ಷ ಕೋಟಿ ರೂ.) ನಷ್ಟವಾಗಿದ್ದು, ಈ ಮೊತ್ತವು ವಿಯೆಟ್ನಾಂ ನ ಜಿಡಿಪಿಯ ಶೇ.6ಕ್ಕೆ ಸಮನಾಗಿದೆ. 2022ರಲ್ಲಿ ಬಂಧಿಸಲ್ಪಟ್ಟ ಆಕೆಯನ್ನು ಮರಣದಂಡನೆಗೆ ಗುರಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next