Advertisement

ಶಿಕ್ಷಕನ ಸ್ವಂತ ವೆಚ್ಚದಲ್ಲಿ ವಿದ್ಯಾಗಮ ಕಲಾ ಮಂದಿರ ನಿರ್ಮಾಣ

05:41 PM Mar 29, 2021 | Team Udayavani |

ಯಲ್ಲಾಪುರ: ಕೋವಿಡ್‌ ಸಂಕಷ್ಟ ಸಂದರ್ಭದಲ್ಲೂ ಮಕ್ಕಳ ಕಲಿಕೆ ಮುಂದುವರಿಕೆಗೆ ಸರಕಾರಆರಂಭಿಸಿದ ವಿದ್ಯಾಗಮ ಯೋಜನೆ ಹೆಸರಲ್ಲಿಸುಮಾರು ಮೂರು ಲಕ್ಷ ರೂ. ಸ್ವಂತ ವೆಚ್ಚದಲ್ಲಿವಿದ್ಯಾಗಮ ಕಲಾ ಮಂದಿರವನ್ನು ಶಾಲೆಆವಾರದಲ್ಲಿ ತಾವು ನಿರ್ಮಿಸಿದ್ದು, ಅದನ್ನು ಜಿಲ್ಲಾಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಏ.2ರಂದು ಬೆಳಗ್ಗೆ 10:30ಕ್ಕೆ ಉದ್ಘಾಟಿಸಲಿದ್ದಾರೆಂದುಶಾಲಾ ಮುಖ್ಯಾಧ್ಯಾಪಕ ರಾಮಚಂದ್ರ ಐ. ನಾಯ್ಕ ಹೇಳಿದರು.

Advertisement

ರವಿವಾರ ಈ ಕುರಿತು ಆಮಂತ್ರಣ ಪತ್ರಿಕೆಬಿಡುಗಡೆ ಮಾಡಿ ಸುದ್ದಿಗಾರರಿಗೆ ಮಾಹಿತಿನೀಡಿದ ಅವರು, ಪಟ್ಟಣದ ಗಣಪತಿಗಲ್ಲಿಶಾಲೆಯನ್ನು ಮಾದರಿಯಾಗಿ ಮಾಡಬೆಕೆಂಬನೆಲೆಯಲ್ಲಿ ತಾವು ಹಲವಾರು ಕಾರ್ಯಕ್ರಮಹಾಕಿಕೊಂಡು ಹಿಂದುಳಿದ ಬಡಮಕ್ಕಳ ಶೈಕ್ಷಣಿಕಪ್ರಗತಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು. ಏಡ್ಸ್‌ಪೀಡಿತ ಮಗುವಿನ ರಕ್ಷಣೆ, ಬಾಲ್ಯ ವಿವಾಹಕ್ಕೆ ತಡೆ,ನೂರಕ್ಕೂ ಹೆಚ್ಚು ತಬ್ಬಲಿ ಮಕ್ಕಳಿಗೆ ಪ್ರೋತ್ಸಾಹ,ಮಾನಸಿಕ ಬೆಂಬಲ ನೀಡಿದ್ದೇನೆ. ಉಪವಾಸದಿಂದಶಾಲೆಗೆ ಬರುತ್ತಿದ್ದ ಮಕ್ಕಳಿಗೆ 2019 ಆಗಸ್ಟ್‌ 31ರಿಂದ ಲಾಕ್‌ಡೌನ್‌ ವರೆಗೆ 6000 ಉಪಾಹಾರ ವಿತರಣೆ ಮಾಡಿದ್ದೇನೆ. 20 ಸಾವಿರ ಬಾಳೆಹಣ್ಣುಗಳನ್ನುಮಕ್ಕಳ ಪೌಷ್ಟಿಕಾಂಶ ವರ್ದನೆಗೆ ನೀಡಿದ್ದೇನೆ. ದೇಶದ ರಕ್ಷಣಾ ನಿಧಿ, ಪ್ರಧಾನ ಮಂತ್ರಿ ಹಾಗೂಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ 2019ರಿಂದಪ್ರತಿ ತಿಂಗಳೂ 1500 ರೂ. ನೀಡುತ್ತಿದ್ದೇನೆ.ಸಂಕಷ್ಟದಲ್ಲಿರುವ ಕೆಲ ಮಕ್ಕಳಿಗೆ ವಿದ್ಯಾಗಮ ದತ್ತು ಸ್ವೀಕಾರ ಸಹಾಯ ಮಾಡಲು ನಿರ್ಧಾರ.ಕೋವಿಡ್‌ ನಿಧಿಗೆ 5000 ರೂ. ನೀಡಿದ್ದೇನೆ. ನನ್ನಅಳಿಲು ಸೇವೆ ಮನ್ನಿಸಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ,ಉತ್ತಮ ಸ್ಕೌಟ್‌ ಮಾಸ್ಟರ್‌ ಪ್ರಶಸ್ತಿ, ಜಿಲ್ಲಾಮಟ್ಟದಶಿಕ್ಷಕ ಪ್ರಶಸ್ತಿ ಬಂದಿದೆ. ನಂದನಗಡದಲ್ಲಿ ಸನ್ಮಾನ ಗೌರವಗಳು ಸಂದಿವೆ ಎಂದರು.

ವಿದ್ಯಾಗಮ ಕಲಾಮಂದಿರವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮಕ್ಕೆ ಎಂ.ಎಲ್‌.ಸಿ ಶಾಂತಾರಾಮಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತುಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹಗಡೆ, ಪ.ಪಂ. ಅಧ್ಯಕ್ಷೆ ಸುನಂದಾದಾಸ್‌, ತಾ.ಪಂ. ಅಧ್ಯಕ್ಷೆಚಂದ್ರಕಲಾ ಭಟ್ಟ, ಜಿ.ಪಂ ಸದಸ್ಯರಾದ ಶ್ರುತಿಹೆಗಡೆ, ರೂಪಾ ಬೂರ್ಮನೆ, ಡಿಡಿಪಿಐ ದಿವಾಕರಶೆಟ್ಟಿ, ಬಿಇಒ ಎನ್‌.ಆರ್‌. ಹೆಗಡೆ, ತಹಶೀಲ್ದಾರ್‌ ಶ್ರೀಕೃಷ್ಣ ಕಾಮಕರ್‌, ಇಒ ಜಗದೀಶ್‌ ಕಮ್ಮಾರ,ಬಿಆರ್‌ಸಿ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷನಾರಾಯಣ ನಾಯಕ, ತಾಲೂಕು ಅಧ್ಯಕ್ಷ ಆರ್‌. ಆರ್‌. ಭಟ್ಟ ಭಾಗವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next