Advertisement

ಬನ್ನಂಜೆಯವರ ಕೃತಿಗಳು ಅಧ್ಯಯನ ವಿಷಯಗಳಾಗಲಿ: ವಿದ್ಯಾಭೂಷಣ

11:31 PM Dec 13, 2021 | Team Udayavani |

ಬೆಂಗಳೂರು: ಬನ್ನಂಜೆ ಗೋವಿಂದಾಚಾರ್ಯರು ಭಗವಂತನನ್ನು ಅರಿತುಕೊಳ್ಳಲು ಅಕ್ಷರದ ಮೊರೆ ಹೋಗಿ ದ್ದರು. ಜನರು ಬನ್ನಂಜೆ ಯವರ ಕೃತಿಗಳನ್ನು ಅಧ್ಯಯನ ವಿಷಯಗಳಾಗಿ ಆಯ್ಕೆ ಮಾಡಿ ಕೊಳ್ಳುವ ಮೂಲಕ ಚಿರಸ್ಮರಣೀಯ ವಾಗಿಸಬೇಕಿದೆ ಎಂದು ಖ್ಯಾತ ಸಂಗೀತಕಾರ ವಿದ್ಯಾಭೂಷಣ ಅವರು ಹೇಳಿದರು.

Advertisement

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ನಗರದಲ್ಲಿ ಆಯೋ ಜಿಸಿದ್ದ ಆಚಾರ್ಯರ ಆರಾಧನೆ-1 ಮತ್ತು ಬನ್ನಂಜೆ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.

ಭಂಡಾರಕೇರಿ ಮಠದ ವಿಧ್ಯೇಶ ತೀರ್ಥ ಸ್ವಾಮೀಜಿ ಮಾತನಾಡಿ, ಭಾರತದ ಜ್ಞಾನ ಪರಂಪರೆಯ ಶ್ರೇಷ್ಠ ವಿದ್ವಾಂಸ ವೇದವ್ಯಾಸರ ಹೆಸರಿನಲ್ಲಿ ದೇಶದಲ್ಲಿ ಯಾವುದೇ ವಿಶ್ವವಿದ್ಯಾನಿಲಯ ಇಲ್ಲದಿರುವುದು ದುರಂತ. ಆದ್ದರಿಂದ ವೇದವ್ಯಾಸರ ಜಯಂತಿ ಆಚರಿಸುವ ಜತೆಗೆ ವೇದವ್ಯಾಸ ಹೆಸರಿನ ವಿಶ್ವ ವಿದ್ಯಾನಿಲಯ ನಿರ್ಮಿ ಸಬೇಕಿದೆ ಎಂದರು.

ಇದನ್ನೂ ಓದಿ:ತಿರುಪತಿಯಿಂದ ತಿರುಮಲಕ್ಕೆ ಮತ್ತೊಂದು ರಸ್ತೆ

ಬನ್ನಂಜೆ ಪ್ರಶಸ್ತಿ
ಬನ್ನಂಜೆ ಪ್ರತಿಷ್ಠಾನವು ಸಂಸ್ಕೃತ ಭಾಷೆಯ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಬನ್ನಂಜೆ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಸಂಸ್ಕೃತಕ್ಕಾಗಿ ದುಡಿದ, ಮುಂದೆಯೂ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಿರುವ 40ರಿಂದ 50 ವರ್ಷದವರಿಗೆ ಪ್ರಶಸ್ತಿ ನೀಡುತ್ತಿದ್ದೇವೆ ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್‌ ಅವರು ಹೇಳಿದರು.

Advertisement

ಅಂತಾರಾಷ್ಟ್ರೀಯ ಸಂಸ್ಕೃತ ವಿದ್ವಾಂಸ ಎಚ್‌.ವಿ. ನಾಗರಾಜ ರಾವ್‌ ಅವರಿಗೆ 2020ರ ಸಾಲಿನ ಮತ್ತು ನಾಗಪುರದ ಕವಿಕುಲಗುರು ಕಾಳಿದಾಸ ವಿಶ್ವವಿದ್ಯಾಲಯದ ಕುಲಪತಿ ಡಾ| ಶ್ರೀನಿವಾಸ ವರಖೇಡಿ ಅವರಿಗೆ 2021ರ ಸಾಲಿನ ಬನ್ನಂಜೆ ಪುರಸ್ಕಾರ ಪ್ರದಾನ ಮಾಡಲಾಯಿತು. ಬನ್ನಂಜೆ ಗೋವಿಂದಾಚಾರ್ಯರ ವೆಬ್‌ಸೈಟ್‌ಗಳಿಗೆ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next