Advertisement
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ವಲಯ 8 ವಿಕೆಟಿಗೆ 303 ರನ್ ಪೇರಿಸಿ ಸವಾಲೊಡ್ಡಿತು. ಬಳಿಕ ಕರ್ನಾಟಕದ ಪ್ರತಿಭಾನ್ವಿತ ಬೌಲರ್ ವಿದ್ವತ್ ಕಾವೇರಪ್ಪ ದಾಳಿಗೆ ತತ್ತರಿಸಿದ ಉತ್ತರ ವಲಯ 23 ಓವರ್‌ಗಳಲ್ಲಿ 60 ರನ್ನಿಗೆ ಕುಸಿಯಿತು. ವಿದ್ವತ್ ಕೇವಲ 15 ರನ್ ನೀಡಿ 5 ವಿಕೆಟ್ ಹಾರಿಸಿದರು. ಕರ್ನಾಟಕದ ಮತ್ತೋರ್ವ ಬೌಲರ್ ವಿಜಯ್‌ಕುಮಾರ್ ವೈಶಾಖ್ 2 ವಿಕೆಟ್ ಕಿತ್ತರು. ಮಳೆಯಿಂದಾಗಿ ಉತ್ತರ ವಲಯಕ್ಕೆ 40 ಓವರ್‌ಗಳಲ್ಲಿ 275 ರನ್ ಗಳಿಸುವ ಗುರಿ ಎದುರಾಗಿತ್ತು.
Related Articles
ಪ್ರಿಯಾಂಕ್ ಪಾಂಚಾಲ್ ನಾಯಕತ್ವದ ಪಶ್ಚಿಮ ವಲಯ ತಂಡ ಈಶಾನ್ಯ ವಲಯವನ್ನು 9 ವಿಕೆಟ್‌ಗಳಿಂದ ಸುಲಭ ದಲ್ಲಿ ಮಣಿಸಿತು. ಅನನುಭವಿಗಳ ತಂಡವಾದ ಈಶಾನ್ಯ ವಲಯ 47 ಓವರ್‌ಗಳಲ್ಲಿ 207ಕ್ಕೆ ಆಲೌಟಾದರೆ, ಪಶ್ಚಿಮ ವಲಯ 25.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 208 ರನ್ ಬಾರಿಸಿತು. ಆಗ ಪ್ರಿಯಾಂಕ್ ಪಾಂಚಾಲ್ 99 ರನ್ ಮಾಡಿ ಅಜೇಯರಾಗಿದ್ದರು. ಮತ್ತೋರ್ವ ಆರಂಭಕಾರ ಹಾರ್ವಿಕ್ ದೇಸಾಯಿ ಅವರಿಗೂ ಶತಕ ಒಲಿಯಲಿಲ್ಲ. ಅವರು 85 ರನ್ ಮಾಡಿ ಔಟಾದರು (71 ಎಸೆತ, 14 ಬೌಂಡರಿ). ಇವರಿಂದ ಮೊದಲ ವಿಕೆಟಿಗೆ 21.1 ಓವರ್‌ಗಳಿಂದ 167 ರನ್ ಒಟ್ಟುಗೂಡಿತು.
Advertisement
ಈಶಾನ್ಯ ವಲಯ ಪರ ಇಮ್ಲಿವಾಟಿ ಲೆಮು¤ರ್ ಸರ್ವಾಧಿಕ 38 ರನ್ ಮಾಡಿದರು. ಪಶ್ಚಿಮ ವಲಯದ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಅರ್ಜಾನ್ ನಗÌಸ್ವಾಲ (31ಕ್ಕೆ 3), ಶಮ್ಸ್ ಮುಲಾನಿ ಮತ್ತು ಶಿವಂ ದುಬೆ (ತಲಾ 2 ವಿಕೆಟ್).
ಪೂರ್ವ ವಲಯ ವಿಜಯಮಧ್ಯ ವಲಯ ವಿರುದ್ಧದ ಮತ್ತೂಂದು ಪಂದ್ಯದಲ್ಲಿ ಪೂರ್ವ ವಲಯ 6 ವಿಕೆಟ್‌ಗಳ ಜಯ ಸಾಧಿಸಿತು. ಬ್ಯಾಟಿಂಗ್ ಕುಸಿತ ಅನುಭವಿಸಿದ ಮಧ್ಯ ವಲಯ ಸರಿ ಯಾಗಿ 50 ಓವರ್‌ಗಳಲ್ಲಿ 207ಕ್ಕೆ ಆಲೌಟ್ ಆಯಿತು. ಪೂರ್ವ ವಲಯ 46.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್ ಮಾಡಿತು. ಚೇಸಿಂಗ್ ವೇಳೆ ಆರಂಭಿಕರಾದ ಉತ್ಕರ್ಷ್ ಸಿಂಗ್ 89 ಹಾಗೂ ಅಭಿಮನ್ಯು ಈಶ್ವರನ್ 38 ರನ್ ಹೊಡೆದರು. ಮಧ್ಯ ವಲಯದ ಸರದಿಯಲ್ಲಿ ಮಿಂಚಿದವರೆಂದರೆ ರಿಂಕು ಸಿಂಗ್ (54) ಮತ್ತು ಆರ್ಯನ್ ಜುಯಲ್ (39). ಎಂ. ಮುರಾಸಿಂಗ್, ಆಕಾಶ್ ದೀಪ್ ಮತ್ತು ಶಾಬಾಜ್ ಅಹ್ಮದ್ ತಲಾ 3 ವಿಕೆಟ್ ಉರುಳಿಸಿದರು.