Advertisement

ಹೊಸ ಅಕಾಕ್ಷಿಗಳ ಹುಡುಕಾಟದತ್ತ ಸೂರ್ಯನಾರಾಯಣ ರೆಡ್ಡಿ ಚಿತ್ತ.. ಹಾಲಿ ಶಾಸಕ ಗಣೇಶ್ ಎತ್ತ.?

11:16 AM Aug 11, 2022 | Team Udayavani |

ಕುರುಗೋಡು : ವಿಧಾನಸಭೆ ಚುನಾವಣೆ ಇನ್ನು 4 ರಿಂದ 5 ತಿಂಗಳು ಇರುವ ಮುನ್ನವೇ ಕಂಪ್ಲಿ – ಕುರುಗೋಡು ರಾಜಕೀಯ ನಾಯಕರ ಕದನ ರಂಗೇರಿದೆ. ಇತ್ತ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹೇಗಾದರು ಮಾಡಿ ಮುಂದಿನ‌ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾಲಿ ಶಾಸಕ ಜೆ. ಎನ್. ಗಣೇಶ್ ಅವರು ಶತಃ ಪ್ರಯತ್ನ ಮಾಡುತ್ತಿದ್ದಾರೆ. ಅದೆ ರೀತಿ ಇತ್ತ ಮಾಜಿ ಶಾಸಕ ಸುರೇಶ್ ಬಾಬು ಗೂ ಕೂಡ ಪ್ರತಿಷ್ಠೆಯಾಗಿದೆ. ಈಗ ಹಾಲಿ, ಮಾಜಿ ಶಾಸಕರ ನಡುವಿನ ಟಾಕ್ ಪೈಟ್ ಒಂದು ಕಡೆ ಜೋರಾಗಿದ್ದರೆ ಇನ್ನೊಂದು ಕಡೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಕೂಡ ಕಾಂಗ್ರೆಸ್ ಪಕ್ಷದಿಂದ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಒಳ ಸಂಚು ನಡೆಯುತ್ತಿದೆ.

Advertisement

ಕಂಪ್ಲಿ – ಕುರುಗೋಡು ಕ್ಷೇತ್ರದಾದ್ಯಂತ ಈಗಾಗಲೇ ರಾಜಕೀಯ ಕಾವು ಜೋರಾಗಿಯೇ ನಡಿತಾ ಇದೆ. ಹಾಲಿ ಶಾಸಕ ಗಣೇಶ್ ಮತ್ತು ಮಾಜಿ ಶಾಸಕ ಸುರೇಶ್ ಬಾಬು ಇಬ್ಬರು ಪಕ್ಷ ಸಂಘಟನೆಗಾಗಿ ಹಳ್ಳಿ ಹಳ್ಳಿಗೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ.

ಕಂಪ್ಲಿ ಕ್ಷೇತ್ರ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆ ಹೆಚ್ಚು:

ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆ ಹೆಚ್ಚಾಗಿದೆ. ಬಿಜೆಪಿಯಿಂದ ಮಾಜಿ ಶಾಸಕ ಸುರೇಶ್ ಬಾಬು ಕಾಂಗ್ರೇಸ್ ನಿಂದ ಹಾಲಿ ಶಾಸಕ ಜೆ. ಎನ್. ಗಣೇಶ್ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ. ಎಂಬ ಲೆಕ್ಕಾಚಾರ ಕಳೆದ ಮೂರು ನಾಲ್ಕು ವರ್ಷಗಳಿಂದ ಕೇಳಿ ಬರುತಿತ್ತು ಆದ್ರೆ ಒಂದು ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಬಿನ್ನಾಭಿಪ್ರಾಯಗಳು ಮೂಡಿವೆ. ಅಲ್ಲದೆ 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಶಾಸಕ ಗಣೇಶ್ ಗೆಲುವೆಗೆ ಗುರುಗಳ ಸ್ಥಾನದಲ್ಲಿ ನಿಂತು ಸಹಕರಿಯಾಗಿದ್ದ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ಹಾಲಿ ಶಾಸಕ ಗಣೇಶ್ ಅವರಿಗೆ ಸದ್ಯ ಮೊದಲಿನಂತೆ ಹೊಂದಾಣಿಕೆ ಇಲ್ಲ ಎಂಬ ಮಾತುಗಳು ವ್ಯಾಪಾಕವಾಗಿ ಕೇಳಿ ಬರುತ್ತಿದೆ. ಇನ್ನೂ ಶ್ರವಣಮಾಸದ ಅಂಗವಾಗಿ ಕುರುಗೋಡು ಸುಂಕ್ಲಮ್ಮ ದೇವಿಗೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ಇದ್ದಕ್ಕೆ ಇದ್ದಂತೆ ಬಿಜೆಪಿ ಮಾಜಿ ಶಾಸಕ ಸುರೇಶ್ ಬಾಬು ಕಾಣಿಸಿಕೊಂಡು ಸ್ವಲ್ಪ ಒತ್ತು ಕುಶಲೋಪರಿ ಹಂಚಿಕೊಂಡರು. ಅಲ್ಲದೆ ಸುರೇಶ್ ಬಾಬು ನಿಮ್ಮ ಅಶ್ರಿವಾದ ನನ್ನ ಮೇಲಿರಲಿ ಎಂದು ಸೂರ್ಯನಾರಾಯಣ ರೆಡ್ಡಿಗೆ ಕೆಳಿದ್ದಾರೆ. ನನ್ನ ಅಶ್ರಿವಾದ ಅಲ್ಲ ದೇವರ ಅಶ್ರಿವಾದ ಇರಬೇಕು. ಶ್ರವಣ ಮಾಸ ಇದೆ ಒಳ್ಳೇದು ಆಗುತ್ತೆ ಹೊಡಿ ಚಾನ್ಸ್ ಎಂದಿದ್ದು ಕೂಡ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕುತೂಹಲವಾಗಿ ಮೂಡಿದೆ. ಇನ್ನೂ ಮುಖ್ಯ ವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ರೆಡ್ಡಿ ಈಗ ಹಳೆ ಗಾಡಿ ಅಲ್ಲ ಹೊಸ ಗಾಡಿ ಬರುತ್ತಿದೆ ಅದಕ್ಕೆ ಎಲ್ಲರೂ ಸಹಕಾರ ಮಾಡಬೇಕು ಎಂದು ಹೊಸ ವಿಷಯ ಬಿಚ್ಚಿಟ್ಟಿದ್ದು ಇನ್ನೂ ಇದರಿಂದ ಆದ್ರೆ ಹಾಲಿ ಶಾಸಕ ಗಣೇಶ್ ಗೆ ನುಂಗಲಾರದ ತುತ್ತಾಗಿದೆ.

ಮಾಜಿ ಶಾಸಕ ಸುರೇಶ್ ಬಾಬು ಹಾಗೂ ಹಾಲಿ ಶಾಸಕ ಗಣೇಶ್ ಗಣೇಶ್ ನಡುವೆ ಕದನ ಜೋರಾಗಿಯೇ ನಡೆಯುತ್ತಿದೆ. ಕಳೆದ 3 ಚುನಾವಣೆ ಯಲ್ಲಿ ಸುರೇಶ್ ಬಾಬುಗೆ, ಶಾಸಕ ಗಣೇಶ್ ನೇ ಪ್ರಮುಖ ಎದುರಾಳಿ. ಇಬ್ಬರೂ ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ರು ಇವರಿಬ್ಬರು ನಡುವಿನ ಕಾಳಗ ಬಲು ರೋಚಕವಾಗಿರುತ್ತದೆ ಹಾಗಾಗಿ ಕಂಪ್ಲಿ ಕ್ಷೇತ್ರದ ವ್ಯಕ್ತಿ ಪ್ರತಿಷ್ಠೆಯಾಗಿದೆ. ಸದ್ಯ 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸುರೇಶ್ ಬಾಬು ಕಣಕ್ಕೆ ಇಳಿಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷದಿಂದ ಸುರೇಶ್ ಬಾಬು ವಿರುದ್ಧ ಎದುರಾಳಿಯಾಗಿ ಯಾರು ಕಣಕ್ಕೆ ಇಳಿಯುತ್ತಾರೋ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಇನ್ನೂ ಕಾಡುತ್ತಿದೆ.

Advertisement

ಇದನ್ನೂ ಓದಿ : ಧರ್ಮಸ್ಥಳದಲ್ಲಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯ ಉದ್ಘಾಟನೆ

ಅಧಿಕಾರ ಗಿಟ್ಟಿಸಿಕೊಳ್ಳಲು ಸುರೇಶ್ ಬಾಬು ನಾನಾ ಪ್ರಯತ್ನ

ಈಗಾಗಲೇ ಮಾಜಿ ಶಾಸಕ ಸುರೇಶ್ ಬಾಬು 2008 ರಲ್ಲಿ ಬಿಜೆಪಿ ಪಕ್ಷದಿಂದ ರಾಮಸಾಗರ ಹನುಮಕ್ಕನ ವಿರುದ್ಧ ಗೆದ್ದು ಮೊದಲನೇ ಬಾರಿ ಎಳೆ ವಯಸ್ಸಿನಲ್ಲಿ ಶಾಸಕರಾಗಿದ್ದರು, ಎರಡನೇ ಬಾರಿ 2013 ರಲ್ಲಿ ಬಿ. ಎಸ್. ಆರ್. ಪಕ್ಷದಿಂದ ಸುರೇಶ್ ಬಾಬು ಸ್ಪರ್ಧೆ ಮಾಡಿದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಗುಜ್ಜಲ್ ನಾಗರಾಜ್ ಅವರು ಕಣಕ್ಕೆ ಇಳಿದಿದ್ರೂ ಗುಜ್ಜಲ್ ನಾಗರಾಜ್ ವಿರುದ್ಧ ಸುರೇಶ್ ಬಾಬು ಎರಡನೇ ಬಾರಿ ಶಾಸಕರಾಗಿ ಆಯ್ಕೆ ಆಗುತ್ತಾರೆ. 2018 ರಲ್ಲಿ ಬಿಜೆಪಿ ಪಕ್ಷದಿಂದ ಸುರೇಶ್ ಬಾಬು ಸ್ಪರ್ಧೆ ಮಾಡಿದ್ರೆ, ಕಾಂಗ್ರೆಸ್ ಪಕ್ಷದಿಂದ ಜೆ. ಎನ್. ಗಣೇಶ್ ಕಣಕ್ಕೆ ಇಳಿಯುತ್ತಾರೆ. ಸುರೇಶ್ ಬಾಬು ವಿರುದ್ಧ ಗಣೇಶ್ ಸ್ವಲ್ಪ ಮತಗಳ ಅಂತರದಿಂದ ಜಯಭೇರಿ ಸಾದಿಸಿ ಮೊದಲ ಬಾರಿಗೆ ಶಾಸಕರಾಗುತ್ತಾರೆ. ಈಗ ಮೊತ್ತಮ್ಮೆ ಶಾಸಕರಾಗಿ ಅಧಿಕಾರ ಪಡೆದುಕೊಳ್ಳಲು ಸುರೇಶ್ ಬಾಬು ನಾನಾ ಪ್ರಯತ್ನ ಗಳು ನಡೆಸುತ್ತಿದ್ದು, ಹಳ್ಳಿ ಹಳ್ಳಿಗೂ, ಗ್ರಾಮ ಗ್ರಾಮಕ್ಕೆ ತೆರಳು ತ್ತಿದ್ದಾರೆ. ರೈತರ ಸಮಸ್ಯೆಯಾಗಲಿ, ಕಾರ್ಯಕರ್ತರ ಸಮಸ್ಯೆಯಾಗಲಿ, ಪ್ರತಿಯೊಂದಕ್ಕೂ ಹೋಗುತ್ತಿದ್ದಾರೆ. ಈಗಾಗಲೇ ಮುಂದಿನ ಚುನಾವಣೆಗೆ ಗಣೇಶ್ ಗೆ ಟಿಕೇಟ್ ಸಿಕ್ಕರೆ ಸುರೇಶ್ ಬಾಬು ಗೆ ಕಷ್ಟ ಆಗಬಹುದು ಒಂದು ವೇಳೆ ಸೂರ್ಯನಾರಾಯಣ ರೆಡ್ಡಿ ಕೈಚಳಕ ನಡಿಸಿದರೆ ಕಾಂಗ್ರೆಸ್ ನಲ್ಲಿ ಹೇಗೆಬೇಕಾದರೂ ಬದಲಾವಣೆ ಆಗುವ ಸಾಧ್ಯತೆಗಳಿವೆ.

2023 ರ ಚುನಾವಣೆ ಗಣೇಶ್ ಗೆ ಕಂಟಕ ಆಗಬಹುದಾ?

ಈಗಾಗಲೇ ಗುರು ಸ್ಥಾನದಲ್ಲಿ ಇದ್ದ ಸೂರ್ಯನಾರಾಯಣ ರೆಡ್ಡಿ ಹಾಗೂ ಶಿಷ್ಯ ಸ್ಥಾನದಲ್ಲಿ ಇದ್ದ ಹಾಲಿ ಶಾಸಕ ಗಣೇಶ್ ಇವರಿಬ್ಬರ ನಡುವೆ ಮಾದಲಿನಂತೆ ಇದ್ದ ಹೊಂದಾಣಿಕೆ ಒಂದು ವರ್ಷದಿಂದ ಕಾಣುತ್ತಿಲ್ಲ. ಈಗಾಗಲೇ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಅಕಾಕ್ಷಿ ಯನ್ನು ಕಣಕ್ಕಿಳಿಸಲು ನಾರಾಯಣ ರೆಡ್ಡಿ ಮುಂದಾಗಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಅಲ್ಲದೆ ಕಳೆದ ವಿಧಾನಪರಿಷತ್ ಚುನಾವಣೆ ಯಲ್ಲಿ ಅಭ್ಯರ್ಥಿ ಗಳ ಆಯ್ಕೆ ಯಲ್ಲಿ ಕೂಡ ಶಾಸಕ ಗಣೇಶ್ ಕಾಂಗ್ರೆಸ್ ನಾಯಕರ ಮುಂದೆ ನಾರಾಯಣ ರೆಡ್ಡಿ ಹೆಸರು ಪ್ರಸ್ತಾಪಿಸದೆ ಕೆ. ಸಿ. ಕೊಂಡಯ್ಯ ಅವರ ಹೆಸರು ಪ್ರಸ್ತಾಪಿಸಿದ್ದಾರೆ ಎಂಬ ಆರೋಪಗಳು ಕ್ಷೇತ್ರದ ಜನರಲ್ಲಿ ಹರಿದಾಡುತ್ತಿದೆ. ಅಲ್ಲದೆ ಕಳೆದ ಕುರುಗೋಡು ಪುರಸಭೆ ಚುನಾವಣೆ ಯಲ್ಲಿ ರೆಡ್ಡಿ ಹೇಳಿದ ಕೆಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೇಟ್ ನೀಡದೆ ನಿರಾಕರಿಸಿ ತಮಗೆ ಅನುಕೂಲ ಇದ್ದಂತಹ ಹೊಸ ಕಾರ್ಯಕರ್ತರಿಗೆ ಟಿಕೇಟ್ ನೀಡಿದ್ದಾರೆ ಎಂಬ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇನ್ನೂ ಇದಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬಹಳ ವರ್ಷ ಗಳಿಂದ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡುತ್ತಿಲ್ಲ ಎಂಬ ಆರೋಪ ಗಳು ಕೇಳಿ ಬಂದಿವೆ. ಕಂಪ್ಲಿ ಮತ್ತು ಕುರುಗೋಡು ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಲವಾರು ಗುಂಪುಗಳು ಆಗಿದ್ದು ಇವು ಕಾಂಗ್ರೆಸ್ ಪಕ್ಷಕ್ಕೆ ಕಂಠಕವಾಗುವ ಸಾಧ್ಯತೆ ಗಳು ಹೆದ್ದು ಕಾಣುತ್ತಿವೆ.

ಕಂಪ್ಲಿ -ಕುರುಗೋಡು ಡಿಪರೆಂಟ್ ವಿಧಾನಸಭಾ ಕ್ಷೇತ್ರ:

ಕಂಪ್ಲಿ ವಿಧಾನಸಭೆ ಕೇತ್ರ ಎಸ್.ಟಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೆತ್ರದಲ್ಲಿ ಕಾರ್ಯಕರ್ತರು ತಮ್ಮ ನಾಯಕರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತೆ ಇಲ್ಲ, ಇಲ್ಲಿ ಟಿ. ಎಚ್. ಸುರೇಶ್ ಬಾಬು ಮತ್ತು ಜೆ. ಎನ್. ಗಣೇಶ್ ಅವರಿಗೆ ತಮ್ಮದೆಯಾದ ಸಾಂಪ್ರದಾಯಿಕ ಮತಗಳಿವೆ, ಆ ಮತಗಳು ಯಾವುದೇ ಕಾರಣಕ್ಕೂ ಇವರಿಬ್ಬರನ್ನು ಬಿಟ್ಟು ಹೋಗುವುದು ವಿರಳ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಾಸಕ ಗಣೇಶ್ ಸೇರಿದಂತೆ ಇತರರು ಮುಂಚೂಣಿ ಯಲ್ಲಿ ಇದ್ರೆ ಬಿಜೆಪಿ ಪಕ್ಷದಿಂದ ಸುರೇಶ್ ಬಾಬು ಅವರು ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ ಚುನಾವಣೆ ಮುನ್ನವೇ ಇಬ್ಬರ ನಡುವೆ ಟಾಕ್ ಫೈಟ್ ನಡೆಯುತ್ತಿದ್ದು, ಕಳೆದ ವರ್ಷಗಳ ಹಿಂದೆ ಸುರೇಶ್ ಬಾಬು ಸಿದ್ದರಾಮಯ್ಯ ನವರ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿದ್ದರು. ಇನ್ನೂ ಶಾಸಕ ಗಣೇಶ್ ಮತ್ತು ಸಚಿವ ಆನಂದ್ ಸಿಂಗ್ ನಡುವೆ ಗಲಾಟೆ ಯಾಗಿ ರಾಜ್ಯದ್ಯಂತ ಸದ್ದು ಮಾಡಿತ್ತು ಈ ಹಿನ್ನಲೆ ಯಲ್ಲಿ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next